'ಬಾಯರು ಮುಳಿಗದ್ದೆ'ಗೆ.ಒಂದೂವರೆ ವರ್ಷ ಈ ಶಾಖೆಯಲ್ಲಿ ಕೆಲಸ ಮಾಡಿದೆ.ಈ ಊರಿನಿಂದ ವರ್ಗಾವಣೆಗೊಂಡು ಬರುವಾಗ ಒಂದು ಹವ್ಯಾಸ ಕೂಡ ನನ್ನ ಜೊತೆಯಾಯಿತು.ಅದೇ -'ಯಕ್ಷಗಾನ'.
ಯಕ್ಷಗಾನ ವೀಕ್ಷಿಸುವ ಹುಚ್ಚು ತಗಲಿಸಿಕೊಳ್ಳುವ ಮೊದಲು ನನ್ನ ಮತ್ತು ಯಕ್ಷಗಾನದ ಸಂಬಂಧ ಅಷ್ಟಕ್ಕಷ್ಟೇ .ನನ್ನ ಊರಾದ ಬದಿಯಡ್ಕದಲ್ಲಿ ಪ್ರತಿ ವರುಷ ಕಟೀಲು ಮೇಳದ ಆಟ ಆಡಿಸಲಾಗುತಿತ್ತು .ಈ ಆಟ ನಡೆಯುವುದು ನಮ್ಮ ಮನೆಯ ಬಳಿಯಲ್ಲಿರುವ ಮೈದಾನದಲ್ಲೇ.ನಾನಾಗ ಒಂಭತ್ತನೆಯ ತರಗತಿಯಲ್ಲಿದ್ದೆ .ಆ ವರ್ಷ ಕಟೀಲು ಮೇಳದವರು ಆಡಿ ತೋರಿಸಲಿದ್ದ ಪ್ರಸಂಗ 'ಸಂಪೂರ್ಣ ದೇವಿ ಮಹಾತ್ಮೆ '.ಈ ಪ್ರಸಂಗದ ಬಗ್ಗೆ ಆಸಕ್ತಿದಾಯಕ ವಿಚಾರವೊಂದನ್ನು ನಾನು ನನ್ನ ತಾಯಿಯಿಂದ ತಿಳಿದುಕೊಂಡಿದ್ದೆ ಅದೆಂದರೆ -'ದೇವಿ ಮಹಾತ್ಮೆ' ಪ್ರಸಂಗದಲ್ಲಿ ದೇವಿ ಉಯ್ಯಾಲೆಯಲ್ಲಿ ಕುಳಿತುಕೊಳ್ಳುತ್ತಾರೆ ಅಂತ. ನನ್ನ ತಾಯಿ ಧರ್ಮಸ್ಥಳದವರು .ಅವರಿಗೆ ಕ್ಷೇತ್ರದಲ್ಲಿ ನಡೆಯುವ ಆಟಗಳನ್ನು ಚಿಕ್ಕಂದಿನಲ್ಲಿ ನೋಡಿ , ಯಕ್ಷಗಾನದ ಬಗೆಗೆ ಒಲವಿತ್ತು.
ದೇವರು ನಮ್ಮ ತರಹ ಉಯ್ಯಾಲೆಯಲ್ಲಿ ಕುಳಿತುಕೊಳ್ಳುವುದು ನನಗ್ಯಾಕೋ ವಿಶೇಷವೆನಿಸಿತು .ಹಾಗಾಗಿ ಈ ಪ್ರಸಂಗವನ್ನು ನೋಡಲು ತೀರ್ಮಾನಿಸಿದೆ.ಮತ್ತೆ ಬೆಳಗಿನವರೆಗೆ ಕೂತು ನೋಡಿದೆ ಕೂಡ .ಇದು ಬಿಟ್ಟರೆ ಹೆಚ್ಚಿನ ಸಂದರ್ಭದಲ್ಲಿ ಯಕ್ಷಗಾನ ಇರುವಲ್ಲಿಗೆ ಹೋಗಿ, ಚವ್ಕಿಯಲ್ಲಿ ನಡೆಯುವ ಪೂಜೆಯಲ್ಲಿ ಪಾಲ್ಗೊಂಡು ದೇವರ ಪ್ರಸಾದ ಸ್ವೀಕರಿಸಿ ,ವೇಷ ಹಾಕಲು ಕೂತ ಪಾತ್ರದಾರಿಗಳನ್ನು ಬೆರಗಿನಿಂದ ನೋಡಿ ಹಾಗೆ ಹೊರಬಂದು ಅಲ್ಲೇ ಹತ್ತಿರದಲ್ಲಿ ತಾತ್ಕಾಲಿಕವಾಗಿ ತೆರೆದ ಹೋಟೆಲಿನಲ್ಲಿ ತಿಂಡಿ ತಿಂದು ಚಾ ಕುಡಿಯುವಲ್ಲಿಗೆ ನನ್ನ ಯಕ್ಷಗಾನ ವೀಕ್ಷಣೆಯ ಪ್ರಸಂಗ ಮುಗಿದು ಹೋಗುತಿತ್ತು .
ಕೆಲಸಕ್ಕೆ ಸೇರಿದ ಮೊದಲಿಗೆ ಬ್ಯಾಂಕಿಗೆ ಬಂದ ಗ್ರಾಹಕರನ್ನು ನನ್ನ ಸಹದ್ಯೋಗಿಗಳು ನನಗೆ ಪರಿಚಯಿಸಿಕೊಡುತಿದ್ದರು.ಹೀಗೆ ಪರಿಚಯಿಸಲ್ಪಟ್ಟವರಲ್ಲಿ ಯಕ್ಷಗಾನ ಕ್ಷೇತ್ರಕ್ಕೆ ಸೇರಿದ ಕೃಷ್ಣಯ್ಯ ಬಲ್ಲಾಳರು ಮತ್ತು ಬಾಯರು ರಮೇಶ್ ಭಟ್ ಪ್ರಮುಖರು.ಕೃಷ್ಣಯ್ಯ ಬಲ್ಲಾಳರು ಪ್ರಸಿದ್ದ ಚೆಂಡೆ/ಮೃದಂಗ ವಾದಕರು ಮತ್ತೆ ಬಾಯರು ರಮೇಶ್ ಭಟ್ ಅವರು ಕಟೀಲು ಮೇಳದಲ್ಲಿ ದೇವಿಯ ಪಾತ್ರವನ್ನು ಹಾಕುವವರು.ಈ ಪ್ರದೇಶ ಇಂತಹ ಅನೇಕ ಕಲಾವಿದರನ್ನು ಯಕ್ಷಗಾನಕ್ಕೆ ನೀಡಿದೆ . ಈ ಪ್ರದೇಶದಲ್ಲಿ ಯಕ್ಷಗಾನದ ಬಗ್ಗೆ ಅಭಿರುಚಿ ಉಳ್ಳವರು ತುಂಬಾ ಸಂಖೆಯಲ್ಲಿ ಕಾಣಸಿಗುತ್ತಾರೆ .ಯಕ್ಷಗಾನದಲ್ಲಿ ಅಭಿರುಚಿ ಇರುವ ಅನೇಕರು ನಮ್ಮ ಬ್ಯಾಂಕ್ನ ಶಾಖೆಗೆ ಬರುತಿದ್ದರು .ಹೀಗೆ ಬಂದವರು ಹತ್ತಿರದಲ್ಲಿ ನಡೆದ ಯಕ್ಷಗಾನ ಪ್ರಸಂಗದ ಬಗ್ಗೆ ನನ್ನ ಸಹದ್ಯೋಗಿಗಳಲ್ಲಿ ಚರ್ಚಿಸುತಿದ್ದರು .ಅವರ ಮಾತು ಕತೆ ಬೇಡವೆಂದರೂ ನನ್ನ ಕಿವಿಗೆ ಬೀಳುತಲಿತ್ತು .ಹೀಗೆ ಕೇಳಿಸಿಕೊಂಡ ಅನೇಕ ವಿಷಯಗಳನ್ನು ನನಗೂ ಕಣ್ಣಾರೆ ನೋಡಬೇಕೆನ್ನುವ ಅಭಿಲಾಷೆ ಉಂಟಾಯಿತು ಮತ್ತು ಅದು ಸ್ವಲ್ಪ ಸ್ವಲ್ಪವಾಗಿ ನನ್ನನ್ನು ಯಕ್ಷಗಾನದ ಕಡೆಗೆ ಸೆಳೆಯಿತು .
ಅದೊಂದು ದಿನ ನಾನು ಬರುವ ಬಸ್ಸಿನಲ್ಲಿ 'ಶ್ರೀ ಕೃಷ್ಣ ಸಂಧಾನ' ಅನ್ನುವ ಯಕ್ಷಗಾನ ತಾಳಮದ್ದಲೆಯ ಆಮಂತ್ರಣವನ್ನು ನೋಡಿದೆ.ಇದೇ ವಿಚಾರವನ್ನು ಬ್ಯಾಂಕ್ಗೆ ಬಂದು ದಿನೇಶನಲ್ಲಿ ಹೇಳಿದೆ.ದಿನೇಶ ನಮ್ಮ ಶಾಖೆಯಲ್ಲಿಯೇ ಕೆಲಸ ಮಾಡುವ ಹುಡುಗ.ಅವನಿಗೆ ಯಕ್ಷಗಾನ, ತಾಳಮದ್ದಲೆಯ ಬಗ್ಗೆ ಆಸಕ್ತಿ ಇತ್ತು.ಅವನು ಒಂದೊಂದಾಗಿ ಪ್ರಸಂಗದಲ್ಲಿ ಭಾಗವಹಿಸುವ ಕಲಾವಿದರ ಬಗ್ಗೆ ಹೇಳುತ್ತಹೋದ.ಆಗ ಬಂದ ಹೆಸರೇ -ಜಬ್ಬಾರ್ ಸಮೋ.ಜಬ್ಬಾರ್ ಸಮೋ ಅವರ ಮಾತು ಕೇಳಬೇಕು,ಅವರ ಪಾತ್ರ ನಿರ್ವಹಣೆ ನೋಡಬೇಕು ,ಪಾತ್ರದಲ್ಲೇ ನಿಜದಂತೆ ಲೀನವಾಗಿ ವಿಚಾರವನ್ನು ಮಂಡಿಸುವ ಬಗೆ ನೋಡಬೆಕು... ಮತ್ತೆ "ಪತ್ತ್0ಡ ಆರ್ ಬುಡ್ಪುನೆ ಇಜ್ಜಿ ಸರ್..." (ಹಿಡಿದರೆ ಅವರು ಬಿಡುವುದೇ ಇಲ್ಲ ,ಅಂದರೆ ವಾದಕ್ಕೆ ಕೂತರೆ ಸುಲಭದಲ್ಲಿ ಸೋಲುವವರಲ್ಲ) ಅನ್ನುವ ವಿಚಾರಗಳೆಲ್ಲ ಕಿವಿಗೆ ಬಿದ್ದ ಮೇಲೆ ತಾಳಮದ್ದಳೆಗೆ ಹೋಗದೆ ಕೂರಲಾಗಲಿಲ್ಲ ಮಾತ್ರವಲ್ಲ ವಾದ -ಚರ್ಚೆಗಳೆಂದರೆ ನನ್ನ ಆಸಕ್ತಿಯ ವಿಷಯ .ತಾಳಮದ್ದಲೆ ನಡೆಯುವಲ್ಲಿಗೆ ಹೋದೆ ಅನ್ನುವುದು ನಿಜವಾದರೂ ಹಾಗೆ ಹೋಗುವ ವಿಚಾರ ಅಸ್ಟು ಸುಲಭದ್ದಾಗಿರಲಿಲ್ಲ.ಅದು working day ಮತ್ತು ಕೆಲಸ ಮುಗಿಯದೆ ಬ್ಯಾಂಕ್ ನಿಂದ ಹೋಗುವ ಹಾಗೆಯೂ ಇರಲಿಲ್ಲ.ಅಂದು ಬೇಗ ಬೇಗ ಕೆಲಸ ಮುಗಿಸಿ , ಮ್ಯಾನೇಜರ್ಅವರನ್ನು ಒತ್ತಾಯದಿಂದ ಕರಕೊಂಡು ೫ ಘಂಟೆಗೆ ಬ್ರಾಂಚ್ ಮುಚ್ಚಿ ತಾಳಮದ್ದಲೆ ನಡೆಯುವಲ್ಲಿಗೆ ತಲುಪಿದೆ.
ಕಾರಿನಿಂದ ಇಳಿದಾಗಲೇ ಕಿವಿಗೆ ಬಲಿಪಜ್ಜರ ಹಾಡು ಕೇಳಿಸಿತು.ಭಾಗವತರು ಬಲಿಪರೆಂದು ಆಮಂತ್ರಣದಲ್ಲಿ ಓದಿದ್ದೆ ಹಾಗಾಗಿ ಅವರ ಗುರುತಾಯಿತು , ಜಬ್ಬಾರ್ ಅವರನ್ನು ದಿನೇಶ ತೋರಿಸಿದ .ಇವರಿಬ್ಬರನ್ನು ಬಿಟ್ಟರೆ ಅಲ್ಲಿದ್ದದ್ದು 'ಜೋಷಿ' ಅವರ ಬಗ್ಗೆ ನನಗೆ ಮೊದಲೇ ಗೊತ್ತಿತ್ತು ;ಅವರ ಪುಸ್ತಕಗಳ ಮುಖಾಂತರ .ಕೂತ ಸ್ವಲ್ಪ ಸಮಯದಲ್ಲಿಯೇ ವಡೆ ಮತ್ತು ಚಾ ಕೊಟ್ಟರು .ಹೀಗೆ ಚಾ ಕುಡಿಯಬೇಕಾದರೆ ಮ್ಯಾನೇಜರ್ ಅವರು ವ್ಯಕ್ತಿಯೊಬ್ಬರನ್ನು ತೋರಿಸಿ , ಅವರಿಂದ ಬರಬೇಕಾಗಿದ್ದ ಬಾಕಿ ಹಣದ ಬಗ್ಗೆ ಮಾತಾಡಿದರು .ತಾಳಮದ್ದಲೆಗೆಂದು ಬಂದಿದ್ದ ನನಗೆ ಈ 'ಸಾಲದ ಪ್ರಸಂಗ' ಕೇಳಿದಾಗ ನಗು ತಡೆಯಲಾಗಲಿಲ್ಲ .ಅಸ್ಟು ಜನರ ನಡುವೆ ಕುಳಿತ ಆ ವ್ಯಕ್ತಿಯನ್ನು ಕುಳಿತಲ್ಲಿಯೇ ಕಂಡು ಹಿಡಿದ ಮ್ಯಾನೇಜರ್ ಅವರ observation ಗೆ ಸಲಾಂ ಹೊಡೆದು ವಡೆಯನ್ನು ತಿಂದು ಮುಗಿಸಿದೆ.ತಾಳಮದ್ದಲೆ ನಡೆಯುವಲ್ಲಿಯೂ ಸಾಲಗಾರರನ್ನು ಹುಡುಕುತಿದ್ದ ಮ್ಯಾನೇಜರ್ ಅವರನ್ನು ಗಮನಿಸಿಯೇ ತಿಳಿಯಿತು ಬೇಗ ಹೊರಡಬೇಕೆಂದು.ಹೀಗೆ ವಡೆ ಮತ್ತು ಚಾ ಆಸ್ವಾದನೆಯಲ್ಲಿಯೇ ಮೊದಲ ತಾಳಮದ್ದಲೆಯ ಪ್ರಸಂಗ ಮುಗಿಯಿತು.ಒಂದೆರಡು ದಿನದ ನಂತರ ನಮ್ಮೂರಿನ 'ಅಯ್ಯಪ್ಪ ಬೆಳಕು ' ವಿನ ಸಂದರ್ಭದಲ್ಲಿ ಆಯೋಜಿಸಿದ್ದ ತಾಳಮದ್ದಳೆಯಲ್ಲಿ 'ಜಬ್ಬಾರ್' ಬಾಗವಹಿಸಿದ್ದರಂತೆ ಮತ್ತು ಬಹಳ ಚೆನ್ನಾಗಿ ಮಾತಾಡಿದರಂತೆ ಅನ್ನುವ ವಿಚಾರ ನನಗೆ ನನ್ನ ತಂದೆಯವರಿಂದ ತಿಳಿಯಿತು.ಹೀಗೆ ತಾಳಮದ್ದಲೆಯ ಬಗ್ಗೆ ಅನೇಕರಿಂದ ಕೇಳಿ ಮತ್ತು ಚರ್ಚಿಸಿ ನನಗೆ ಅದರ ಬಗ್ಗೆ ಆಸಕ್ತಿ ಮೂಡಲಾರಂಭಿಸಿತು .
ಅದೇ ದಿನಗಳಲ್ಲಿ ನಮ್ಮ ಕೇಬಲ್ ನ ಲೋಕಲ್ ಚಾನೆಲ್ ಒಂದರಲ್ಲಿ ಪ್ರತಿ ಶನಿವಾರ ಯಕ್ಷಗಾನವನ್ನು ಬಿತ್ತರಿಸಲು ಪ್ರಾರಂಭಿಸಿದರು.ಅದನ್ನು ನಾನು ತಪ್ಪದೆ ವೀಕ್ಷಿಸುತಿದ್ದೆ.ಪ್ರತಿ ಆದಿತ್ಯವಾರ ನಮ್ಮ ಮತ್ತು ನಮ್ಮ ಸಂಬಂಧಿಕರ ಮನೆಯವರು
ಸೇರಿ get together ಅನ್ನು arrange ಮಾಡುತಿದ್ದೆವು .ವಿಶೇಷವೆಂದರೆ ಆ ಮನೆಯವರು ಕೂಡ ಟೀವಿಯಲ್ಲಿ ಪ್ರಸಾರವಾಗುವ ಯಕ್ಷಗಾನವನ್ನು ತಪ್ಪದೆ ನೋಡುತಿದ್ದರು.ಹಾಗಾಗಿ ಯಕ್ಷಗಾನದ ಬಗ್ಗೆ ಚರ್ಚಿಸಲು ಈ get together ನನಗೆ ವೇದಿಕೆಯಾಯಿತು ಮಾತ್ರವಲ್ಲ ನನಗೊಬ್ಬ ಸಮಾನ ಮನಸ್ಕ ಗೆಳೆಯ ಇಲ್ಲಿಂದ ಸಿಕ್ಕಿದ.ನಂತರ ಸುತ್ತಮುತ್ತಲು ನಡೆಯುವ ಹೆಚ್ಚಿನ ಎಲ್ಲಾ ಯಕ್ಷಗಾನಕ್ಕೆ , ತಾಳಮದ್ದಳೆಗೆ ನಮ್ಮ ಹಾಜರಿ ಬೀಳುತ್ತಿತ್ತು.ನಾನು ಎರಡು ದಿನ ಬ್ಯಾಂಕ್ಗೆ ರಜೆ ಹಾಕಿ ಧರ್ಮಸ್ಥಳಕ್ಕೆ ಹೋಗಿ ಆಟ ನೋಡಿ ಬಂದೆ .ಅಲ್ಲಿ ಆಟ ನೋಡಲು ನನ್ನ ಮಾವನ ಮಕ್ಕಳಿಬ್ಬರು ನನ್ನ ಜೊತೆಯಾದರು.ಮಳೆಗಾಲದಲ್ಲಿ ಮಂಗಳೂರಿನ ಪುರಭವನದಲ್ಲಿ ನಡೆಯುವ ಟಿಕೇಟಿನ ಆಟಕ್ಕು ನನ್ನ ಹಾಜರಿ ಬಿತ್ತು.ಹೀಗೇ ನನ್ನ ಆಟದ ಹುಚ್ಚು ಜೋರಾಗುತ್ತಾ ಬಂತು.ಭಾವಗೀತೆಗಳೇ ತುಂಬಿದ್ದ ನನ್ನ i -pod ನಲ್ಲಿ ಅಮ್ಮಣ್ಣಾಯ ,ಗಣಪಣ್ಣ, ಬಲಿಪ,ಹೊಳ್ಳ ,ಪಟ್ಲ ರ ಪದ ಬಂದು ಕುಳಿತಿತು. ಹುಶಾರಿಲ್ಲವೆಂದು ಡಾಕ್ಟರ್ ಬಳಿ ಹೋದರೂ ಅಲ್ಲಿ ಚರ್ಚೆಯಾಗುವುದು ಕೂಡ ಯಕ್ಷಗಾನದ ವಿಚಾರವೇ.ಕಾರಣವಿದೆ ನಾನು ಹೋಗುವ ಕ್ಲಿನಿಕ್ ನಲ್ಲಿರುವ ಡಾಕ್ಟರ ಕೂಡ surprisingly ಯಕ್ಷಗಾನದ follower .
ಈಗ ಕಾಲಿಗೆ fracture ಆದ ಕಾರಣ ಮನೆಯಲ್ಲಿಯೇ ಇದ್ದೇನೆ.ಮನೆಯಲ್ಲಿರುವ ಕಂಪ್ಯೂಟರ್ ಅನ್ನೇ ರಂಗಸ್ತಳವನ್ನಾಗಿಸಿ ಯಕ್ಷಗಾನವನ್ನು ಆಸ್ವಾದಿಸುತ್ತಾ ಇರುತ್ತೇನೆ.ನನ್ನ ನೋಡಲು ಮನೆಗೆ ಬರುವವರು ನನ್ನ ಕೋಣೆಯಿಂದ ಬರುವ ಯಕ್ಷಗಾನದ ಪದ್ಯ ಕೇಳಿ ತಾಯಿಯಲ್ಲಿ ಕೇಳುತ್ತಾ ಇರುತ್ತಾರೆ -ಯಕ್ಷಗಾನದ craze ಇದೆಯಾ ಇವನಿಗೆ ಆಂತ.ತಾಯಿಯ ಮಾತಿಗೆ ನಾನು ಕಿವಿಗೊಡುವುದಿಲ್ಲ .ಮೆಲ್ಲನೆ ಪ್ಲಾಸ್ಟರ್ ಹಾಕಿದ ನನ್ನ ಬಲಗಾಲನ್ನು ನೋಡಿ ಕಣ್ಣು ಹೊಡೆಯುತ್ತೇನೆ.
ಮೊನ್ನೆ feb 26 ರಂದು ಪೆರ್ಲದ ಸಮೀಪದಲ್ಲಿರುವ ಪಡ್ರೆಯಲ್ಲಿ ಹೊಸನಗರ ಮೇಳದ ಆಟ ನೋಡಲು ಹೋದಾಗ ಬಿದ್ದು ಕಾಲಿಗೆ fracture ಆದ ಕಾರಣ ಸಧ್ಯಕ್ಕೆ ತಿರುಗಾಟ ನಿಂತಿದೆ.
me now missing ಯಕ್ಷಗಾನ a lot ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ