'ದಿಲ್ .ದೋಸ್ತಿ etc ' ಸಿನಿಮಾದ ಹೆಸರು ನೋಡಿದ ತಕ್ಷಣ ನನ್ನ ಮನಸ್ಸು ಕಾಲೇಜಿನ ಹಾಸ್ಟೆಲ್ ಜೀವನದ ಕಡೆಗೆ ಹರಿಯಿತು.ನಿಜಕ್ಕೂ ಅಂದಿನ ದಿನ ನಾನು ನಡೆಸಿದ್ದು 'ಗೋಲ್ಡನ್ ಲೈಫ್ '.ಉದರಪೋಷಣೆ, ನಿದ್ರೆ ,ಸಿನಮಾ ವೀಕ್ಷಣೆ ,ಓದು (ಸಬ್ಜೆಕ್ಟ್ ಪುಸ್ತಕಗಳು ಅಂತ ತಪ್ಪು ತಿಳಿದು ಕೊಳ್ಳಬೇಡಿ !) ಮತ್ತು ಹರಟೆ (ಮೊಬೈಲ್ ಚಾಟಿಂಗ್ ಕೂಡ ) ನಾನು ಈ ದಿನಗಳಲಿ ತಪ್ಪದೆ ಮಾಡುತಿದ್ದ ಕೆಲಸಗಳು.ಪರೀಕ್ಷೆಯ ದಿನಗಳಲ್ಲೂ ಈ ಸಂಪ್ರದಾಯವನ್ನು ನಾನು ಮುರಿಯುತ್ತಿರಲಿಲ್ಲ .ನನ್ನ specialistaion ಫೈನಾನ್ಸ್ ಆಗಿತ್ತು ಮತ್ತು ಈ specialistaionನಲ್ಲಿ ಹೆಚ್ಹಾಗಿ ಪ್ರಾಬ್ಲಮ್ oriented ಸಬ್ಜೆಕ್ಟ್ಗಳೇ ಇತ್ತು.ನಾನಾದರೋ theory ಪ್ರವೀಣ.ಬರಿ theory ಬರೆದೇ ಪಾಸಾಗಲು ಮುಂದುವರೆಯುವ ಮೊಂಡು ಧೈರ್ಯವಾದಿ.ಅದೊಂದು ದಿನ ಸರಿಯಾಗಿ ನೆನಪಿದೆ ನಾವೆಲ್ಲರೂ ರೂಮಿನಲ್ಲಿ income tax ಪರೀಕ್ಷೆಗೆ ತಯಾರಿ ನಡೆಸುತಿದ್ದೆವು.theory ಬಿಟ್ಟರೆ ಬೇರೇನೂ ಓದಿ ಪ್ರಯೋಜನವಿಲ್ಲವೆಂದು ನಾನು ತೀರ್ಮಾನಿಸಿಯಾಗಿತ್ತು.ಗೆಳೆಯರಲ್ಲಿ ಹೇಳಿದೆ- " ನಾನು ಹೇಗಿದ್ದರೂ ನಾಳಿನ ಪರೀಕ್ಷೆಯಲ್ಲಿ ಡುಮ್ಕಿ ಹೊಡೆಯುವುದೇ , ಸುಮ್ಮನೆ ಅರ್ಥವಾಗದ ವಿಷಯ ಓದಲು ಪ್ರಯತ್ನಿಸಿ ಸಮಯ ವ್ಯರ್ಥ ಮಾಡುವುದು ಯಾಕೆ?. ಸಿಸ್ಟಮ್ ಕೊಡಿ , ಹೆಡ್ಫೋನ್ ಹಾಕಿ ಯಾವುದಾದರೂ ಸಿನೇಮಾ ನೋಡುತ್ತೇನೆ" ಅಂದೆ .ಕಷ್ಟದಲ್ಲಿ ಒಪ್ಪಿಗೆ ದೊರೆಯಿತು.'ಶಾಸ್ತ್ರೀ' ಬಿಟ್ಟರೆ ಬೇರೆ ಯಾವ ಸಿನೆಮಾವು ಇರಲಿಲ್ಲ : ಅದನ್ನೇ ನೋಡುತ್ತಾ ಕೂತೆ .ಹತ್ತು ಇಪ್ಪತ್ತು ನಿಮಿಷಗಳಲ್ಲೇ ಸಿನಿಮಾ ನೋಡುವವರ ಸಂಖ್ಯೆ ಮೂರಾಯಿತು.ನಡುವೆ ಪರೀಕ್ಷೆಯ ದಿನಗಳಲ್ಲಿ ಅತಿ ನಿರ್ಭಂಧಿತ ಕೋಣೆಯಾದ ನಮ್ಮ ಕೋಣೆಗೆ ಬರಲು ಅವಕಾಶವಿದ್ದ ನಮ್ಮ specialisationನ ಮತ್ತೊಬ್ಬ ಡೌಟ್ ಕೇಳಲು ಬಂದಿದ್ದ.ಅವನೂ ಶಾಸ್ತ್ರಿಯ ಮೋಡಿಗೆ ಸೋತ.ಪರೀಕ್ಷೆ ಆದ ಎರಡು ದಿನದ ನಂತರ ಆ ಸಬ್ಜೆಕ್ಟ್ ಕಲಿಸುತಿದ್ದ ಶಿಕ್ಷಕಿ ಕರೆದು - " ಏನು ನಿತೇಶ್ , ಪೇಪರ್ ಭಾರಿ ಚೆನ್ನಾಗೆ ಮಾಡಿದ್ದಿಯ .ತರಗತಿಯಲ್ಲಿ ಅರ್ಥಆಗಲ್ಲ ಅನ್ನೋ ಪ್ರೋಬ್ಲೆಮ್ಗಳನ್ನು solve ಮಾಡಿ , ೮೦ ಮಾರ್ಕ್ಸ್ ಬಂದಿದೆ ನಿನಗೆ " ಅಂದಾಗ ನನಗೆ ಮಾತೆ ಬರಲಿಲ್ಲ.ನಾನು ಸುಮ್ಮನೆ ನಕ್ಕು ವಾಪಾಸಾದೆ. ಮೇಡಂನ ಹೊಗಳಿಕೆ ಕೇಳಿ ನನ್ನ ಜೊತೆ ಶಾಸ್ತ್ರಿ ಸಿನೆಮಾ ನೋಡಿದವರಿಗೆಲ್ಲ ಆಶ್ಚರ್ಯವಾಯಿತು.ನಾನು ನಗುತ್ತಾ ಹೇಳಿದೆ ಟೆನ್ಸ್ ಆಗಬೇಡ್ರೋ, ' give nd take ' policy ಪಾಲಿಸಿ ನಾನು ಇಷ್ಟು ಮಾರ್ಕು ಪಡಕೊಂಡೆ ಅಂದೆ. ಯಾರಿಗೂ ನಾನು ಹೇಳಿದ್ದು ಅರ್ಥವಾಗಲಿಲ್ಲ.ನಾನು ಬಿಡಿಸಿ ಹೇಳಿದೆ- "ನೋಡಿ ನಾನು theory ಯಲ್ಲಿ perfect ಅನ್ನುವುದು ನಿಮಗೆಲ್ಲ ಗೊತ್ತು .ಅದೇ ತರ ನನ್ನ ಪುಣ್ಯಕ್ಕೆ ನನ್ನ ಹಿಂದೆ ಕುಳಿತವನಿಗೆ ಪ್ರಾಬ್ಲಮ್ ಅಂದರೆ ನೀರು ಕುಡಿದಸ್ತೆ ಸುಲಭ ಮತ್ತು theory ಅಂದರೆ ಕಬ್ಬಿಣದ ಕಡಲೆ.ನಾವಿಬ್ಬರೂ ಜೊತೆ ಸೇರಿ ಇಬ್ಬರ ಕಷ್ಟವನ್ನು ದೂರ ಮಾಡಿದೆವು " ಅಂದಾಗ ದಂಗು ಬಡಿಯುವ ಸರದಿ ನನ್ನ ಗೆಳೆಯರದಾಗಿತ್ತು.ಯಾಕೋ ಸಿನೇಮಾ ನೋಡಲು ಹೊರಡುವಾಗ ಇದರ ನೆನಪಾಯಿತು :):):).
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ