ಭಾನುವಾರ, ಫೆಬ್ರವರಿ 24, 2013

ಓದು ಮತ್ತು ಪುಸ್ತಕಗಳ ಸುತ್ತ...

 ಓದಬೇಕೆಂದು ಕೊಂಡುಕೊಂಡ ಪುಸ್ತಕದ ರಾಶಿ ನನ್ನ ಕಪಾಟಿನಲ್ಲಿ ತುಂಬುತ್ತಾ ಇದೆ : ಆದರೆ ಓದಲು ಆಗುತ್ತಿಲ್ಲ. ಓದಲು ಆಗದ ಕಾರಣ ಪುಸ್ತಕ ಖರೀದಿಯೇನೂ ನಿಂತಿಲ್ಲ. ಇವತ್ತು ಮಂಗಳೂರಿಗೆ ಹೋಗಿ , ಚೇತನ್ ಭಗಥರ ತ್ರೀ ಮಿಸ್ಟೇಕ್ಸ್ ಆಫ್ ಮೈ ಲೈಫ್ ಫಿಕ್ಷನ್ ಆಧಾರಿತ ಕೈಪೋಚೆ ಸಿನೇಮಾ ನೋಡುವ ಮೊದಲಿದ್ದ ಕೊಂಚ ಬಿಡುವಿನಲ್ಲಿ ಎರಡು ಪುಸ್ತಕ ಖರೀದಿಸಿದೆ- ಗುರುಪ್ರಸಾದ್  ಡೈರೆಕ್ಟರ್ ಸ್ಪೆಷಲ್ ಅವರ ಸಿನೆಮ ಮಾಡಲಾಗದ ಕತೆಗಳು ಮತ್ತಿತರ ಲೇಖನ ಮತ್ತು ದಿನ ನಿತ್ಯದ ಕಾನೂನಿಗೆ ಸಂಭಂಧಿಸಿದ ಮತ್ತೊಂದು ಪುಸ್ತಕ.ಪುಸ್ತಕ ಓದುವುದು ನನ್ನ ಅಚ್ಚು ಮೆಚ್ಚಿನ ಹವ್ಯಾಸಗಳಲ್ಲಿ ಒಂದು.ಯಾವುದೇ ಜಾತ್ರೆ, ಕಾರ್ಯಕ್ರಮಗಳಿರಲಿ ಅಲ್ಲಿರುವ ಪುಸ್ತಕದಂಗಡಿಗೆ ಭೇಟಿ ನೀಡದೆ ನನ್ನ ಮನಸ್ಸಿಗೆ ಸಮಾಧಾನವಿಲ್ಲ.ಈಗ ಸಧ್ಯಕ್ಕೆ ನಾನು ಮಂಗಳೂರಿನ ಬಳಿಯ ಬಿ. ಸಿ ರೋಡಿನಲ್ಲಿ ವಾಸಿಸುತ್ತಿದ್ದೇನೆ. ಇಲ್ಲಿಗೆ ಬರುವ ಮೊದಲು ನಾನು ಒಂದು ವರ್ಷದ ಮಟ್ಟಿಗೆ  ಮಂಗಳೂರಿನಲ್ಲೇ ವಾಸವಾಗಿದ್ದೆ.ನನ್ನ ಆಫೀಸ್ಗೆ ಬರುವ ಹಾದಿಯಲ್ಲಿ ಅತ್ರಿ ಪುಸ್ತಕ ಭಂಡಾರ ಇತ್ತು. ಆ ಹಾದಿಯಲ್ಲಿ ಹೋಗುವಾಗ ಕಣ್ಣನ್ನೊಮ್ಮೆ ಪುಸ್ತಕಗಳ ಮೇಳಾಡಿಸದೆ ಹೋಗುವುದು ನನ್ನಿಂದ ಆಗದೆ ಇರುವ ಮಾತಾಗಿತ್ತು.ಮತ್ತೆ ಮಂಗಳೂರಿನಲ್ಲಿ ಸ್ವಪ್ನ ಬುಕ್ ಹೌಸ್ ಪ್ರಾರಂಭವಾಯಿತು .  ಅತ್ರಿ ಪುಸ್ತಕ ಭಂಡಾರ ಮುಚ್ಚಿತು ಮತ್ತು ಅದೇ ಸ್ಥಳದಲ್ಲಿ ನವ ಕರ್ನಾಟಕರವರ ಪುಸ್ತಕದ ಮಳಿಗೆ ತೆರೆಯಿತು.ಈ ಮೂರು ಮಳಿಗೆಗಳಿಂದ ನಾನು ಸಾಕಷ್ಟು ಪುಸ್ತಕಗಳನ್ನು ಖರಿದಿಸಿದ್ದೇನೆ. ಈಗ ಹೆಚ್ಚಾಗಿ ನಾನು ಪುಸ್ತಕಗಳನ್ನು ಖರೀದಿಸುವುದು ಸ್ವಪ್ನ ಬುಕ್ ಹೌಸಿನಿಂದ: ಕಾರಣ ಅಲ್ಲಿರುವ ಆಯ್ಕೆಗಳು.

ನನ್ನ  ಸಮಾಜದ ಬಗೆಗಿನ ವಿಷಯವನ್ನು ಒಳಗೊಂಡ 'ಸ್ವಪ್ನ ಸಾರಸ್ವತ' ಕಾದಂಬರಿಯನ್ನು ಅರ್ದಕ್ಕಿಂತ ಹೆಚ್ಚು ಓದಲಾಗಲಿಲ್ಲ. ಒಂದೇ ಗುಂಗಿನಲ್ಲಿ ಓದಿ ಮುಗಿಸದ ಹೊರತು ಯಾವುದೇ ಪುಸ್ತಕ ನಮ್ಮನ್ನು ನಾಟುವುದಿಲ್ಲ ಮತ್ತು ಈ ಕಾದಂಬರಿ ವಿಶಾಲವಾಗಿರುವುದರಿಂದ ಅದರ ಓದು ನನಗಿನ್ನೂ ಕೂಡಿ ಬಂದಿಲ್ಲ. ಮೊನ್ನೆ ನಮ್ಮ ಕುಲದೇವರಾದ 'ರಾಮನಾಥ್' ಪೊಂಡ , ಗೋವಾ ದೇವಸ್ಥಾನಕ್ಕೆ ಭೇಟಿ ನೀಡಿದಾಗ , ಆ ದೇವಸ್ತಾನದ 450 ನೆ ಮಹೋತ್ಸವ ನೆನಪಿಗಾಗೆ ಹೊರ ತಂದ ಪುಸ್ತಕ ವೊಂದನ್ನು ನಾನು ಖರೀದಿಸಿದೆ. 'ಸ್ವಪ್ನ ಸಾರಸ್ವತ ಮತ್ತು ಈ ವಿಶೇಷಾಂಕ ಎರಡೂ ನನ್ನನ್ನು ಓದಿನತ್ತ ಸೆಳೆಯುತ್ತಾ ಇದೆ.ಇದೆರದ ನಡುವೆ ಶಕು0ತಳ ಕಿಣಿ ಯವರ 'ಬಳ್ಳ0ಬೆಟ್ಟಿನ ಬಾಲ್ಯ ಕಾಲ' ಮತ್ತು ಜೋಗಿಯವರ 'ಗುರುವಾಯನಕೆರೆ' ತಮ್ಮೊಳಗೆ ಪೈಪೋಟಿ ನೀಡಿ ನನ್ನ ಆಕರ್ಷಿಸುತ್ತಿವೆ. ಹಾ. ರಾ ಅವರ ' ವಕೀಲಿ ದಿನಗಳು '  ವೃತ್ತಿ ಸಂಬಂಧಿ ಸ್ವಾರಸ್ಯಕರ ಲೇಖನಕ್ಕೊಸ್ಕರ ನನ್ನ ಕಾಡುತ್ತಿದೆ.ಅನಂತನಾಗ್ ರವರ  'ನನ್ನ ತಮ್ಮ ಶಂಕರ'  ಮತ್ತು ಪ್ರೇಮ ಕಾರಂತ್ ಅವರ 'ಸೋಲಿಸಬೇಡ ಗೆಲಿಸಯ್ಯ' ನನ್ನ ಓದಿನ ಬಯಕೆಯನ್ನು ಮತ್ತಸ್ಟು ಹೆಚ್ಚಿಸುವ ಪುಸ್ತಕಗಳು . ಈ ನಡುವೆ ಖರೀದಿಸಿದ ಕಾರ್ನಾಡ್ ಅವರ 'ಟೀಪು ಸುಲ್ತಾನ ಕಂಡ ಕನಸು' , ಟಿಪ್ಪು ಹೆಸರಿನ ವಿಶ್ವವಿದ್ಯಾಲಯ ಸ್ತಾಪನೆ ಬಗ್ಗೆ ನಡೆಯುತ್ತಿರುವ ಚರ್ಚೆಗಳ ಕಾರಣಕ್ಕಾಗಿ ತುರ್ತಾಗಿ ಓದಬೇಕೆಂದೇನಿಸುತ್ತದೆ. ಕುಲದೀಪ್ ನಯ್ಯರ್ ಅವರ ಆತ್ಮ ಕಥನ ಬಾರತದ ಆಧುನಿಕ ಇತಿಹಾಸದ ಬಗೆಗಿನ ಕುತೂಹಲ ತಣಿಸಲು ಯಾವಗ ಓದಿ ಮುಗಿಸುತ್ತೇನೆ ಅನ್ನಿಸ ಪ್ರಾರಂಭಿಸಿದೆ (ಈ ಪುಸ್ತಕ ನನ್ನ ಓದನ್ನು ರಾಮಚಂದ್ರ ಗುಹರವ ಭಾರತಿಯ ಇತಿಹಾಸದ ಪುಸ್ತಕದ ಕಡೆಗೆ ಕೊಂಡೋಯ್ಯುತ್ತದೆ ಅನ್ನುವುದು ನನ್ನ ನಂಬಿಕೆ). ಕಲ್ಕುಳಿ ವಿಟ್ಟಲ್ ಹೆಗ್ಡೆ ಯವರ 'ಮಂಗನ ಬ್ಯಾಟೆ' ಒಂದಷ್ಟು ಓದಿಯಾಗಿದೆ ; ಈ ಮಲೆನಾಡ ಪರಿಸರ ಕಥನ ನನಗೆ ಅತಿಯಾಗಿ ಸೆಳೆದಿದೆ. 


ಮೇಲೆ ಹೇಳಿದ ಪುಸ್ತಕವನ್ನು ಯಾವಾಗ ಮುಗಿಸ್ತೇನೊ ನನಗೆ ಗೊತ್ತಿಲ್ಲ. ಈ ಓದದ ಪುಸ್ತಕಗಳ ರಾಶಿಯನಡುವೆ ಖರಿದಿಸಬೇಕೆಂಬ ಪುಸ್ತಕಗಳ ಪಟ್ಟಿಯು ಬೆಳೆಯುತ್ತಾ ಇದೆ. 

ನನ್ನ ಕಾರ್ಯದ ಒತ್ತಡ , ಬಿಡುವಿಲ್ಲದ ತಿರುಗಾಟ ಮತ್ತು ಪೂರ್ ಟೈಮ್ ಮ್ಯಾನೇಜ್ಮೆಂಟ್ ನಿಂದಾಗಿ ಪುಸ್ತಕದ ಓದನ್ನು ಅಂದುಕೊಂಡ ಹಾಗೆ ಮುಗಿಸಲಾಗುತಿಲ್ಲ. i have to change...!!!
 

ಗುರುವಾರ, ಜೂನ್ 2, 2011

'ದಿಲ್ .ದೋಸ್ತಿ etc '

'ದಿಲ್ .ದೋಸ್ತಿ etc ' ಸಿನಿಮಾದ ಹೆಸರು ನೋಡಿದ ತಕ್ಷಣ ನನ್ನ ಮನಸ್ಸು ಕಾಲೇಜಿನ ಹಾಸ್ಟೆಲ್ ಜೀವನದ ಕಡೆಗೆ ಹರಿಯಿತು.ನಿಜಕ್ಕೂ ಅಂದಿನ ದಿನ ನಾನು ನಡೆಸಿದ್ದು 'ಗೋಲ್ಡನ್ ಲೈಫ್ '.ಉದರಪೋಷಣೆ, ನಿದ್ರೆ ,ಸಿನಮಾ ವೀಕ್ಷಣೆ ,ಓದು (ಸಬ್ಜೆಕ್ಟ್ ಪುಸ್ತಕಗಳು ಅಂತ ತಪ್ಪು ತಿಳಿದು ಕೊಳ್ಳಬೇಡಿ !) ಮತ್ತು ಹರಟೆ (ಮೊಬೈಲ್ ಚಾಟಿಂಗ್ ಕೂಡ ) ನಾನು ಈ ದಿನಗಳಲಿ ತಪ್ಪದೆ ಮಾಡುತಿದ್ದ ಕೆಲಸಗಳು.ಪರೀಕ್ಷೆಯ ದಿನಗಳಲ್ಲೂ ಈ ಸಂಪ್ರದಾಯವನ್ನು ನಾನು ಮುರಿಯುತ್ತಿರಲಿಲ್ಲ .ನನ್ನ specialistaion ಫೈನಾನ್ಸ್ ಆಗಿತ್ತು ಮತ್ತು ಈ specialistaionನಲ್ಲಿ ಹೆಚ್ಹಾಗಿ ಪ್ರಾಬ್ಲಮ್ oriented ಸಬ್ಜೆಕ್ಟ್ಗಳೇ ಇತ್ತು.ನಾನಾದರೋ theory ಪ್ರವೀಣ.ಬರಿ theory ಬರೆದೇ ಪಾಸಾಗಲು ಮುಂದುವರೆಯುವ ಮೊಂಡು ಧೈರ್ಯವಾದಿ.ಅದೊಂದು ದಿನ ಸರಿಯಾಗಿ ನೆನಪಿದೆ ನಾವೆಲ್ಲರೂ ರೂಮಿನಲ್ಲಿ income tax ಪರೀಕ್ಷೆಗೆ ತಯಾರಿ ನಡೆಸುತಿದ್ದೆವು.theory ಬಿಟ್ಟರೆ ಬೇರೇನೂ ಓದಿ ಪ್ರಯೋಜನವಿಲ್ಲವೆಂದು ನಾನು ತೀರ್ಮಾನಿಸಿಯಾಗಿತ್ತು.ಗೆಳೆಯರಲ್ಲಿ ಹೇಳಿದೆ- " ನಾನು ಹೇಗಿದ್ದರೂ ನಾಳಿನ ಪರೀಕ್ಷೆಯಲ್ಲಿ ಡುಮ್ಕಿ ಹೊಡೆಯುವುದೇ , ಸುಮ್ಮನೆ ಅರ್ಥವಾಗದ ವಿಷಯ ಓದಲು ಪ್ರಯತ್ನಿಸಿ ಸಮಯ ವ್ಯರ್ಥ ಮಾಡುವುದು ಯಾಕೆ?. ಸಿಸ್ಟಮ್ ಕೊಡಿ , ಹೆಡ್ಫೋನ್ ಹಾಕಿ ಯಾವುದಾದರೂ ಸಿನೇಮಾ ನೋಡುತ್ತೇನೆ" ಅಂದೆ .ಕಷ್ಟದಲ್ಲಿ ಒಪ್ಪಿಗೆ ದೊರೆಯಿತು.'ಶಾಸ್ತ್ರೀ' ಬಿಟ್ಟರೆ ಬೇರೆ ಯಾವ ಸಿನೆಮಾವು ಇರಲಿಲ್ಲ : ಅದನ್ನೇ ನೋಡುತ್ತಾ ಕೂತೆ .ಹತ್ತು ಇಪ್ಪತ್ತು ನಿಮಿಷಗಳಲ್ಲೇ ಸಿನಿಮಾ ನೋಡುವವರ ಸಂಖ್ಯೆ ಮೂರಾಯಿತು.ನಡುವೆ ಪರೀಕ್ಷೆಯ ದಿನಗಳಲ್ಲಿ ಅತಿ ನಿರ್ಭಂಧಿತ ಕೋಣೆಯಾದ ನಮ್ಮ ಕೋಣೆಗೆ ಬರಲು ಅವಕಾಶವಿದ್ದ ನಮ್ಮ specialisationನ ಮತ್ತೊಬ್ಬ ಡೌಟ್ ಕೇಳಲು ಬಂದಿದ್ದ.ಅವನೂ ಶಾಸ್ತ್ರಿಯ ಮೋಡಿಗೆ ಸೋತ.

ಪರೀಕ್ಷೆ ಆದ ಎರಡು ದಿನದ ನಂತರ ಆ ಸಬ್ಜೆಕ್ಟ್ ಕಲಿಸುತಿದ್ದ ಶಿಕ್ಷಕಿ ಕರೆದು - " ಏನು ನಿತೇಶ್ , ಪೇಪರ್ ಭಾರಿ ಚೆನ್ನಾಗೆ ಮಾಡಿದ್ದಿಯ .ತರಗತಿಯಲ್ಲಿ ಅರ್ಥಆಗಲ್ಲ ಅನ್ನೋ ಪ್ರೋಬ್ಲೆಮ್ಗಳನ್ನು solve ಮಾಡಿ , ೮೦ ಮಾರ್ಕ್ಸ್ ಬಂದಿದೆ ನಿನಗೆ " ಅಂದಾಗ ನನಗೆ ಮಾತೆ ಬರಲಿಲ್ಲ.ನಾನು ಸುಮ್ಮನೆ ನಕ್ಕು ವಾಪಾಸಾದೆ. ಮೇಡಂನ ಹೊಗಳಿಕೆ ಕೇಳಿ ನನ್ನ ಜೊತೆ ಶಾಸ್ತ್ರಿ ಸಿನೆಮಾ ನೋಡಿದವರಿಗೆಲ್ಲ ಆಶ್ಚರ್ಯವಾಯಿತು.ನಾನು ನಗುತ್ತಾ ಹೇಳಿದೆ ಟೆನ್ಸ್ ಆಗಬೇಡ್ರೋ,  ' give nd take ' policy ಪಾಲಿಸಿ ನಾನು ಇಷ್ಟು ಮಾರ್ಕು ಪಡಕೊಂಡೆ ಅಂದೆ. ಯಾರಿಗೂ ನಾನು ಹೇಳಿದ್ದು ಅರ್ಥವಾಗಲಿಲ್ಲ.ನಾನು ಬಿಡಿಸಿ ಹೇಳಿದೆ- "ನೋಡಿ ನಾನು theory ಯಲ್ಲಿ perfect ಅನ್ನುವುದು ನಿಮಗೆಲ್ಲ ಗೊತ್ತು .ಅದೇ ತರ ನನ್ನ ಪುಣ್ಯಕ್ಕೆ ನನ್ನ ಹಿಂದೆ ಕುಳಿತವನಿಗೆ ಪ್ರಾಬ್ಲಮ್ ಅಂದರೆ ನೀರು ಕುಡಿದಸ್ತೆ ಸುಲಭ ಮತ್ತು  theory ಅಂದರೆ ಕಬ್ಬಿಣದ ಕಡಲೆ.ನಾವಿಬ್ಬರೂ ಜೊತೆ ಸೇರಿ ಇಬ್ಬರ ಕಷ್ಟವನ್ನು ದೂರ ಮಾಡಿದೆವು " ಅಂದಾಗ ದಂಗು ಬಡಿಯುವ ಸರದಿ ನನ್ನ ಗೆಳೆಯರದಾಗಿತ್ತು.ಯಾಕೋ ಸಿನೇಮಾ ನೋಡಲು ಹೊರಡುವಾಗ ಇದರ ನೆನಪಾಯಿತು :):):).

ಮೇಲಿನ ಸಿನೆಮಾದಲ್ಲಿ ಹೀಗೊಂದು ಮಾತು ಬರುತ್ತದೆ :"When You Are Young ,You Believe The Possibilities Are Endless. Endless Choices And Passion Is All You Need To Turn Them Into Reality".ಯಾಕಾಗಿ ಈ ಮಾತು ಸಿನೆಮಾದಲ್ಲಿ ಬರುತ್ತದೆ ಅನ್ನುವುದು ಇಲ್ಲಿ ಅಪ್ರಸ್ತುತ.ನನಗೆ ಇಲ್ಲಿ ಕಾಡಿದ್ದು endless choices ಮಾತ್ರ .ಇಲ್ಲಿ ಚರ್ಚಿಸುವ ವಿಷಯ ಸ್ವಲ್ಪ lighter ಸೈಡ್ನದ್ದು ಅಂತ ಅನಿಸಬಹುದು.ನನಗೆ ಮನಸಲ್ಲಿ ಒಂದು ಸಂಶಯ ಬಂದಿತ್ತು : ನಾನು ಇಂದಿನವರೆಗೆ ಎಸ್ಟೋ ಹುಡುಗಿಯರನ್ನು ನೋಡಿದ್ದೇನೆ .ನಿನ್ನೆ ಒಬ್ಬಳು ನನಗೆ ಚಂದ ಕಂಡಿದ್ದರೆ ಇಂದು ಇನ್ನೊಬ್ಬಳು ಮತ್ತೂ ಚೆಂದ ಕಾಣುತ್ತಾಳೆ.ಹೀಗಿದ್ದಾಗ ಫೈನಲ್ ಅನ್ನುವ ಆಯ್ಕೆ ಅಸ್ಟು ಸುಲಭವೇ ಅಂತ.ಚೆಂದ ಕಂಡವರನ್ನೆಲ್ಲ partner ಮಾಡಿಕೊಳ್ಳುವ ಅವಕಾಶ ನಮಗಿಲ್ಲ ಆದರೆ ಇರುವವರಲ್ಲಿ ಚಂದ ಅನ್ನುವವರನ್ನು ಆಯ್ಕೆ ಮಾಡುವ ಅವಕಾಶ ನಮಗಿದೆ.ಆದರೆ ಈ ವಿಚಾರವಾಗಿ ಯಾರಲ್ಲೂ ನಾನು ಚರ್ಚಿಸಲಿಲ್ಲ. ಇವತ್ತು ಯಾಕೋ ಇದೇ ವಿಚ್ಹಾರ ತಲೆ ತಿಂದು ಕಡೆಗೂ ಏನೋ ಸ್ವಲ್ಪ ಹೊಳೆಯಿತು. ಅದು ಹೀಗಿದೆ :
ಕಾಲೇಜ್ ಮತ್ತೆ ಕ್ಲಾಸ್ : ಕಾಲೇಜ್ ಅಂದಾಗ ಆಯ್ಕೆ ಜಾಸ್ತಿ ಮತ್ತು ಕ್ಲಾಸ್ ಅನ್ನುವಾಗ ಆಯ್ಕೆಗಳು ಕಡಿಮೆ. ಒಬ್ಬ ಹುಡುಗ ತನ್ನ ಕ್ಲಾಸಿನ ಹುಡುಗಿಯೊಬ್ಬಳನ್ನು ಆಯ್ಕೆ ಮಾಡಿಕೊಳ್ಳುವಾಗ  ಆ ಕ್ಲಾಸಿನೊಳಗೆ ಇರುವ ಆಯ್ಕೆಗಳಲ್ಲಿ ಒಳ್ಳೆಯದೆನ್ನುವ ಒಂದನ್ನು ಆರಿಸಿಕೊಳ್ಳುತ್ತಾನೆ .ಹೀಗೆ ಆಯ್ಕೆ ಮಾಡಿಕೊಳ್ಳುವಾಗ ಅವನಿಗೆ ಕ್ಲಾಸ್ ಬಿಟ್ಟು ಹೊರಗಿರುವ ಮತ್ತೂ ಒಳ್ಳೆಯ ಆಯ್ಕೆಗಳು ಅಪ್ರಸ್ತುತ ಅನ್ನಿಸಿಬಿಡುತ್ತದೆ . ಇದೆ ಕಾನ್ಸೆಪ್ಟ್ ಆನ್ನ ನಾವು ಅಪ್ಲೈ ಮಾಡುತ್ತಾ ಹೋಗಬಹುದು -ಕ್ಲಾಸ್ನಿಂದ ಕಾಲೇಜ್ಗೆ ,ಕಾಲೇಜ್ ಇಂದ ಆ ಕಾಲೇಜ್ ಇರುವ ಪ್ರದೇಶಕ್ಕೆ ಹೀಗೆ...situation ಯಾವುದೇ ಇರಲಿ ಇಲ್ಲಿ ಒಬ್ಬನ ಅಂತಿಮ ನಿರ್ಧಾರಕ್ಕೆ ಸಪೋರ್ಟ್ ಆಗಿರುವುದು ತಾನೀಗ ಆಯ್ಕೆ ಮಾಡಿರುವುದು 'ದಿ ಬೆಸ್ಟ್' ಅನ್ನು ದೊಡ್ಡ ಮೂರ್ಖ ನಂಬಿಕೆ :):):).
ಆ ಮೂರ್ಖ ನಂಬಿಕೆಗೆ ಜಯವಾಗಲಿ...!!! 
ಈ ಸಿನೆಮಾ ನೋಡುವಾಗ ಮತ್ತಸ್ಟು ಟಿಪ್ಪಣಿಗಳನ್ನು ಮಾಡಿಕೊಂಡಿದ್ದೇನೆ.ಅದೆಲ್ಲದರ ಬಗೆಗೆ ಇನ್ನೊಮ್ಮೆ ಬರೆಯುವ ಮನಸ್ಸಿದೆ ....

ಸೋಮವಾರ, ಮಾರ್ಚ್ 21, 2011

ಲವ್ ಲವಿಕೆ


ಚೆಂದದ ನಗುವಿನ ಒಡತಿಯೇ ಹೇಗಿದ್ದಿಯಾ?. ಮುಖತ: ಭೇಟಿಯಾಗಿ ಕಾಲ ಎಸ್ಟಾಯಿತು ಆಲ್ವಾ.ಮೊನ್ನೆ ಮೊನ್ನೆ ಊರಿನ ಜಾತ್ರೆಯ ದಿನ ನೋಡಿದ ನಿನ್ನನ್ನು , ಯಾಕೋ ಮತ್ತೆ ಮತ್ತೆ ನೋಡಬೇಕೆಂದೆನಿಸುತಿತ್ತು.ಇಂದಿನದು social networking ಗಳ ಕಾಲ. 'orkut ' ,'facebook ','twitter '...ಒಂದೇ , ಎರಡೇ.ಹೀಗೆ ಲೆಕ್ಕವಿಲ್ಲದಸ್ತು networking site  ನಲ್ಲಿ ಲೆಕ್ಕವಿಲ್ಲದಸ್ತು ಪ್ರೊಫೈಲ್ ಅನ್ನು ಹೊಂದಿರುವವರೇ ಹೆಚ್ಚು ; ಹಾಗಾಗಿ ನನಗೇನೂ ಕಷ್ಟವಾಗಲಿಲ್ಲ , 'orkut 'ನಲ್ಲಿ  ನೀನು ಸಿಕ್ಕಿದೆ.ಅಸ್ಟು ಚೆಲುವೆಯಾಗಿರುವ ನೀನ್ಯಾಕೆ  ಆರ್ಕುಟ್ ಪ್ರೊಫೈಲ್ ನಲ್ಲಿ  ಕತ್ರೀನಾಳ ಫೋಟೋ ಹಾಕಿದ್ದು?. ಕಡೇ ಪಕ್ಷ ಅಲ್ಬುಮ್ಗಳಲ್ಲಿ ನಿನ್ನ ಫೋಟೋಗಳನ್ನು ಹಾಕಿದ್ದಿಯಲ್ಲ .ತುಂಬಾ thanx .ನೋಡಿ ತುಂಬಾ ಖುಷಿಯಾಯಿತು.ಹೇ ನಿನಗೆ ಮೂಗುತಿ ಎಷ್ಟು ಚೆಂದ ಕಾಣುತ್ತದೆ ಗೊತ್ತಾ?.ನಿನ್ನ ನಗುವಿಗೆ ಸಾಟಿ ಯಾವುದು ಕಳ್ಳಿ! .ಏನೋ ಮಧುರಾನುಭೂತಿ ನಿನ್ನ ಮುಖ ನೋಡಿ. ಹೇ, ನಿನಗೆ ನಾನೆಂದರೆ ಇಸ್ಟಾನ?.ನೀನು ಒಪ್ಪಿದರೆ ನಮ್ಮದು ಹೇಳಿ ಮಾಡಿಸಿದ ಜೋಡಿ ಕಣೆ .ಏನು ಹೇಳುತ್ತಿ ?.ನನಗೆ ಯಾಕೋ ಅನ್ನಿಸುತಿದೆ ನೀನೂ ನನ್ನ ಇಷ್ಟ ಪಟ್ಟಿದ್ದಿಯಾ ಅಂತ .ಹೇಳು ,im waiting here .



ನನಗೆ ವರದಕ್ಷಿಣೆ, ಚಿನ್ನ- ಬೆಳ್ಳಿ ಏನೇನೂ ಬೇಡ. ನಿನ್ನ ಚೆಲುವ ಮುಖದ ಮಂದಹಾಸ ನನಗಿದ್ದರೆ ಅಸ್ಟೆ  ಸಾಕು.ನನ್ನ ಮದುವೆಯಾದರೆ ಖುಶಿಗಲ್ಲದೆ ಬೇರೆಯಾವುದೇ ಕಾರಣಕ್ಕೂ ನಿನ್ನ ಕಣ್ಣಿಂದ ನೀರಿಳಿಯಲು ನಾನು ಬಿಡುವುದಿಲ್ಲ.ಮತ್ತೆ ಮದುವೆಯಾದ ಮೇಲೆ ನೀನು  ಮನೆಯ ನಾಲ್ಕು ಗೋಡೆಯೊಳಗೆ ಬಾಡುವ ಹೂವಾಗುವುದು ಬೇಡ. ಹೊರಗೆ ಹೋಗಿ ರವಿಯ ಇರವಿಗೆ ಮತ್ತಸ್ಟು ಅರಳಿ , ತಂಗಾಳಿಯ ಜೋಕಾಲಿಯಲ್ಲಿ ಹಗುರವಾಗಿ ಬಾ ; ನಿನ್ನದೆನ್ನುವ ಒಂದು ದುಡಿತಕ್ಕೆ ಹಚ್ಚಿಕೋ.


ಇವೆಲ್ಲ ಮದುವೆಯ ನಂತರದ ಮಾತಾಯಿತು.ಅದರ ಮೊದಲು ನನ್ನ ಬಗ್ಗೆ ಸ್ವಲ್ಪ ಹೇಳುತ್ತೇನೆ ಕೇಳು.ನೀನು ನನ್ನ ಇಷ್ಟ ಪಡುತಿರುವುದರಿಂದ , ನಾನು ಹೇಗಿದ್ದರೂ ನೀನು ನನ್ನ ಸ್ವೀಕರಿಸಬಹುದು . ಆದರೂ ನಾನು ಹೇಳುವುದನ್ನು ಕೇಳು :
ನಾನು ಸ್ವಬಾವತಾ ಸೌಮ್ಯ  .ನನಗೆ ಸಿಟ್ಟು ಬರುವುದು ಬಹಳ ವಿರಳ. ಆದರೆ ಯಾಕೋ ಕೆಲವೊಮ್ಮೆ ಸಿಟ್ಟು ಬಂದಾಗ ತುಂಬಾ ಹೆಚ್ಚು ಅನ್ನುವಂತೆ react ಮಾಡುತ್ತೇನೆ  .ಕೆಲವರು ನನ್ನ ಈ ಸ್ವಭಾವವನ್ನು ಮಾತ್ರ ನೋಡಿ ನಾನು ಬಹಳ ಸಿಟ್ಟಿನ ಮನುಷ್ಯ ಅಂತ ತಪ್ಪು ತಿಳಿದು ಕೊಂಡಿದ್ದಾರೆ.ಇರಲಿ.ನಾನು ಯಾವತ್ತು ಪ್ರೈವೇಟ್ ಸ್ಪೇಸ್ ಇಷ್ಟ ಪಡುವವ .ಆದರೆ ಇಷ್ಟ ಪಟ್ಟವರನ್ನು ಎಂದಿಗೂ ಕಳಕೊಳ್ಳಲು ಇಸ್ತಪಡದ ನಿಶ್ಕಷ್ಮಲಿ .ಯಾವುದೇ ಚಟ ನನಗೆ ಅಂಟಿಕೊಂಡಿಲ್ಲ ಅನ್ನುವುದನ್ನು ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ .ಕೆಲವೊಮ್ಮೆ ಇಷ್ಟವಾದ ತಿಂಡಿ ಇದ್ದಾರೆ ಸ್ವಲ್ಪ ಜಾಸ್ತಿ ತಿನ್ನುತ್ತೇನೆ.physical strain ತೆಗೆದುಕೊಳ್ಳುವುದರಲ್ಲಿ ನಾನು ಸ್ವಲ್ಪ ಹಿಂದೆ .ಹಾಗಾಗಿ ದೇಹ ಸ್ವಲ್ಪ ಬೊಜ್ಜಿನಿಂದ ತುಂಬಿದಂತೆ ಕಾಣುತ್ತದೆ.ಈ ಬಗ್ಗೆ ನಿನ್ನದೇನೂ ಕಂಪ್ಲೈಂಟ್ ಇಲ್ಲ ಅಂದುಕೊಳ್ಳುತ್ತೇನೆ. ಇದಿಷ್ಟು ನನ್ನ ಸ್ವಭಾವದ ಬಗೆಗೆ ಆಯಿತು .ಇನ್ನು ನನ್ನ ಹವ್ಯಾಸದ ಕಡೆಗೆ ಬಂದರೆ - ನನಗೆ ಓದೆಂದರೆ ತುಂಬಾ ಇಷ್ಟ .ಅದರಲ್ಲೂ ಕಾದಂಬರಿ , ಕತೆ , ಕವಿತೆಗಳನ್ನು ಓದುವುದೆಂದರೆ ನನಗೆ ಪಂಚಪ್ರಾಣ .ಸಮಯ ಸಿಕ್ಕಾಗಲೆಲ್ಲ ಓದುವ ನಾನು ಕೆಲವೊಮ್ಮೆ ಬರೆಯುತ್ತೇನೆ .ಯಾಕೋ ಹೀಗೆ ಬರೆದಾಗ ನಾನು ತುಂಬಾ ಹಗುರವಾಗುತ್ತೇನೆ .ಅವಕಾಶ ಸಿಕ್ಕಾಗ ನಾನು ಬರೆದ ಪುಟಗಳನ್ನು ನಿನ್ನ ಮುಂದಿಡುತ್ತೇನೆ , ಓದಿಕೊಳ್ಳುವಿಯಂತೆ.ಅದೇ ರೀತಿ ನನಗೆ ಹಾಡುಗಳ ಕಡೆಗೂ ನನಗೆ ಒಲವಿದೆ .ಹೊಸ -ಹಳೆಯ , ಭಾಷೆಯ ಗಡಿಯ ಅಡೆ- ತಡೆ ಇಲ್ಲದೆ ಖುಷಿ ನೀಡುವ ಎಲ್ಲಾ ಹಾಡುಗಳನ್ನು ಕೇಳುತ್ತೇನೆ .ಇತ್ತೀಚಿಗೆ ಯಕ್ಷಗಾನದ ಕಡೆಗೂ ಒಲವೂ ಮೂಡಿದೆ.ಅವಕಾಶ ಸಿಕ್ಕಾಗ ಯಕ್ಷಗಾನವನ್ನು ನೋಡಿ ಮನಸನ್ನು ಹಗುರ ಮಾಡಿಕೊಳ್ಳುತ್ತೇನೆ.ಒಟ್ಟಿನಲ್ಲಿ ತುಂಬಾ ಸಂತೋಷವಾಗಿ ಇದ್ದೇನೆ. ನಿನ್ನ ಜೊತೆ ಮತ್ತಸ್ಟು ಖುಷಿ ನೀಡೀತೂ ಅನ್ನುವ ಆಸೆ ನನ್ನಲ್ಲಿದೆ.ನನ್ನವಳಾಗುವೆಯ ಗೆಳತಿ...?


( ರವಿ ಬೆಳಗರೆಯವರ 'ಲವ್ಲವಿಕೆ ಓದಿದ ನಂತರ ಬರೆಯಬೇಕೆಂದುಕೊಂಡು  ಬರೆದದ್ದು.ಇದು ಕೂಡ ಕಲ್ಪನೆಯ ಪ್ರೇಮದ ಖಾತೆಗೆ ಕ್ರೆಡಿಟ್...!!! )
   

ಭಾನುವಾರ, ಮಾರ್ಚ್ 6, 2011

'ಮಾಲ್ ' ನಿಂದ 'ಮೇಳ'ದ ಕಡೆಗೆ...



ಬ್ಯಾಂಕಿನ ಕೆಲಸಕ್ಕೆ ಸೇರಿ ಎರಡೂವರೆ ವರ್ಷವಾಯಿತು.ನನ್ನ ಮೊದಲ ಪೋಸ್ಟಿಂಗ್ ಆದದ್ದು ನನ್ನ ಊರಿಗೆ ಹತ್ತಿರದಲ್ಲೇ ಇರುವ
'ಬಾಯರು ಮುಳಿಗದ್ದೆ'ಗೆ.ಒಂದೂವರೆ ವರ್ಷ ಈ ಶಾಖೆಯಲ್ಲಿ ಕೆಲಸ ಮಾಡಿದೆ.ಈ ಊರಿನಿಂದ ವರ್ಗಾವಣೆಗೊಂಡು ಬರುವಾಗ  ಒಂದು ಹವ್ಯಾಸ ಕೂಡ ನನ್ನ  ಜೊತೆಯಾಯಿತು.ಅದೇ -'ಯಕ್ಷಗಾನ'.


ಯಕ್ಷಗಾನ ವೀಕ್ಷಿಸುವ ಹುಚ್ಚು ತಗಲಿಸಿಕೊಳ್ಳುವ ಮೊದಲು ನನ್ನ ಮತ್ತು ಯಕ್ಷಗಾನದ ಸಂಬಂಧ ಅಷ್ಟಕ್ಕಷ್ಟೇ .ನನ್ನ ಊರಾದ ಬದಿಯಡ್ಕದಲ್ಲಿ ಪ್ರತಿ ವರುಷ ಕಟೀಲು ಮೇಳದ ಆಟ ಆಡಿಸಲಾಗುತಿತ್ತು .ಈ ಆಟ ನಡೆಯುವುದು ನಮ್ಮ ಮನೆಯ ಬಳಿಯಲ್ಲಿರುವ ಮೈದಾನದಲ್ಲೇ.ನಾನಾಗ ಒಂಭತ್ತನೆಯ ತರಗತಿಯಲ್ಲಿದ್ದೆ .ಆ ವರ್ಷ ಕಟೀಲು ಮೇಳದವರು ಆಡಿ ತೋರಿಸಲಿದ್ದ ಪ್ರಸಂಗ  'ಸಂಪೂರ್ಣ ದೇವಿ ಮಹಾತ್ಮೆ '.ಈ ಪ್ರಸಂಗದ ಬಗ್ಗೆ ಆಸಕ್ತಿದಾಯಕ ವಿಚಾರವೊಂದನ್ನು ನಾನು ನನ್ನ ತಾಯಿಯಿಂದ ತಿಳಿದುಕೊಂಡಿದ್ದೆ ಅದೆಂದರೆ -'ದೇವಿ ಮಹಾತ್ಮೆ' ಪ್ರಸಂಗದಲ್ಲಿ ದೇವಿ ಉಯ್ಯಾಲೆಯಲ್ಲಿ ಕುಳಿತುಕೊಳ್ಳುತ್ತಾರೆ ಅಂತ.  ನನ್ನ ತಾಯಿ ಧರ್ಮಸ್ಥಳದವರು .ಅವರಿಗೆ ಕ್ಷೇತ್ರದಲ್ಲಿ ನಡೆಯುವ ಆಟಗಳನ್ನು ಚಿಕ್ಕಂದಿನಲ್ಲಿ ನೋಡಿ , ಯಕ್ಷಗಾನದ ಬಗೆಗೆ ಒಲವಿತ್ತು.


 ದೇವರು ನಮ್ಮ ತರಹ ಉಯ್ಯಾಲೆಯಲ್ಲಿ ಕುಳಿತುಕೊಳ್ಳುವುದು ನನಗ್ಯಾಕೋ ವಿಶೇಷವೆನಿಸಿತು .ಹಾಗಾಗಿ ಈ ಪ್ರಸಂಗವನ್ನು ನೋಡಲು ತೀರ್ಮಾನಿಸಿದೆ.ಮತ್ತೆ ಬೆಳಗಿನವರೆಗೆ ಕೂತು ನೋಡಿದೆ ಕೂಡ .ಇದು ಬಿಟ್ಟರೆ ಹೆಚ್ಚಿನ ಸಂದರ್ಭದಲ್ಲಿ ಯಕ್ಷಗಾನ ಇರುವಲ್ಲಿಗೆ ಹೋಗಿ, ಚವ್ಕಿಯಲ್ಲಿ ನಡೆಯುವ ಪೂಜೆಯಲ್ಲಿ ಪಾಲ್ಗೊಂಡು ದೇವರ ಪ್ರಸಾದ ಸ್ವೀಕರಿಸಿ ,ವೇಷ ಹಾಕಲು ಕೂತ ಪಾತ್ರದಾರಿಗಳನ್ನು ಬೆರಗಿನಿಂದ ನೋಡಿ ಹಾಗೆ ಹೊರಬಂದು ಅಲ್ಲೇ ಹತ್ತಿರದಲ್ಲಿ ತಾತ್ಕಾಲಿಕವಾಗಿ ತೆರೆದ ಹೋಟೆಲಿನಲ್ಲಿ ತಿಂಡಿ ತಿಂದು ಚಾ ಕುಡಿಯುವಲ್ಲಿಗೆ ನನ್ನ ಯಕ್ಷಗಾನ ವೀಕ್ಷಣೆಯ ಪ್ರಸಂಗ ಮುಗಿದು ಹೋಗುತಿತ್ತು .

ಕೆಲಸಕ್ಕೆ ಸೇರಿದ ಮೊದಲಿಗೆ ಬ್ಯಾಂಕಿಗೆ ಬಂದ ಗ್ರಾಹಕರನ್ನು ನನ್ನ ಸಹದ್ಯೋಗಿಗಳು ನನಗೆ ಪರಿಚಯಿಸಿಕೊಡುತಿದ್ದರು.ಹೀಗೆ ಪರಿಚಯಿಸಲ್ಪಟ್ಟವರಲ್ಲಿ ಯಕ್ಷಗಾನ ಕ್ಷೇತ್ರಕ್ಕೆ ಸೇರಿದ  ಕೃಷ್ಣಯ್ಯ ಬಲ್ಲಾಳರು ಮತ್ತು ಬಾಯರು ರಮೇಶ್ ಭಟ್ ಪ್ರಮುಖರು.ಕೃಷ್ಣಯ್ಯ ಬಲ್ಲಾಳರು ಪ್ರಸಿದ್ದ ಚೆಂಡೆ/ಮೃದಂಗ ವಾದಕರು ಮತ್ತೆ ಬಾಯರು ರಮೇಶ್ ಭಟ್ ಅವರು ಕಟೀಲು ಮೇಳದಲ್ಲಿ ದೇವಿಯ ಪಾತ್ರವನ್ನು ಹಾಕುವವರು.ಈ ಪ್ರದೇಶ ಇಂತಹ ಅನೇಕ ಕಲಾವಿದರನ್ನು ಯಕ್ಷಗಾನಕ್ಕೆ ನೀಡಿದೆ . ಈ ಪ್ರದೇಶದಲ್ಲಿ ಯಕ್ಷಗಾನದ ಬಗ್ಗೆ ಅಭಿರುಚಿ ಉಳ್ಳವರು ತುಂಬಾ ಸಂಖೆಯಲ್ಲಿ  ಕಾಣಸಿಗುತ್ತಾರೆ .ಯಕ್ಷಗಾನದಲ್ಲಿ ಅಭಿರುಚಿ ಇರುವ ಅನೇಕರು ನಮ್ಮ ಬ್ಯಾಂಕ್ನ ಶಾಖೆಗೆ ಬರುತಿದ್ದರು .ಹೀಗೆ ಬಂದವರು ಹತ್ತಿರದಲ್ಲಿ ನಡೆದ ಯಕ್ಷಗಾನ ಪ್ರಸಂಗದ ಬಗ್ಗೆ ನನ್ನ ಸಹದ್ಯೋಗಿಗಳಲ್ಲಿ ಚರ್ಚಿಸುತಿದ್ದರು .ಅವರ ಮಾತು ಕತೆ ಬೇಡವೆಂದರೂ ನನ್ನ ಕಿವಿಗೆ ಬೀಳುತಲಿತ್ತು .ಹೀಗೆ ಕೇಳಿಸಿಕೊಂಡ ಅನೇಕ ವಿಷಯಗಳನ್ನು ನನಗೂ ಕಣ್ಣಾರೆ ನೋಡಬೇಕೆನ್ನುವ ಅಭಿಲಾಷೆ ಉಂಟಾಯಿತು ಮತ್ತು ಅದು ಸ್ವಲ್ಪ ಸ್ವಲ್ಪವಾಗಿ ನನ್ನನ್ನು ಯಕ್ಷಗಾನದ ಕಡೆಗೆ ಸೆಳೆಯಿತು .

ಅದೊಂದು ದಿನ ನಾನು ಬರುವ ಬಸ್ಸಿನಲ್ಲಿ 'ಶ್ರೀ ಕೃಷ್ಣ ಸಂಧಾನ' ಅನ್ನುವ ಯಕ್ಷಗಾನ ತಾಳಮದ್ದಲೆಯ ಆಮಂತ್ರಣವನ್ನು ನೋಡಿದೆ.ಇದೇ ವಿಚಾರವನ್ನು ಬ್ಯಾಂಕ್ಗೆ ಬಂದು ದಿನೇಶನಲ್ಲಿ ಹೇಳಿದೆ.ದಿನೇಶ ನಮ್ಮ ಶಾಖೆಯಲ್ಲಿಯೇ ಕೆಲಸ ಮಾಡುವ ಹುಡುಗ.ಅವನಿಗೆ ಯಕ್ಷಗಾನ, ತಾಳಮದ್ದಲೆಯ ಬಗ್ಗೆ ಆಸಕ್ತಿ ಇತ್ತು.ಅವನು ಒಂದೊಂದಾಗಿ  ಪ್ರಸಂಗದಲ್ಲಿ ಭಾಗವಹಿಸುವ ಕಲಾವಿದರ ಬಗ್ಗೆ ಹೇಳುತ್ತಹೋದ.ಆಗ ಬಂದ ಹೆಸರೇ -ಜಬ್ಬಾರ್ ಸಮೋ.ಜಬ್ಬಾರ್ ಸಮೋ ಅವರ ಮಾತು ಕೇಳಬೇಕು,ಅವರ ಪಾತ್ರ ನಿರ್ವಹಣೆ ನೋಡಬೇಕು ,ಪಾತ್ರದಲ್ಲೇ ನಿಜದಂತೆ ಲೀನವಾಗಿ  ವಿಚಾರವನ್ನು ಮಂಡಿಸುವ ಬಗೆ ನೋಡಬೆಕು... ಮತ್ತೆ "ಪತ್ತ್0ಡ ಆರ್ ಬುಡ್ಪುನೆ ಇಜ್ಜಿ ಸರ್..."  (ಹಿಡಿದರೆ ಅವರು ಬಿಡುವುದೇ ಇಲ್ಲ ,ಅಂದರೆ ವಾದಕ್ಕೆ ಕೂತರೆ ಸುಲಭದಲ್ಲಿ ಸೋಲುವವರಲ್ಲ)  ಅನ್ನುವ ವಿಚಾರಗಳೆಲ್ಲ ಕಿವಿಗೆ ಬಿದ್ದ ಮೇಲೆ ತಾಳಮದ್ದಳೆಗೆ ಹೋಗದೆ ಕೂರಲಾಗಲಿಲ್ಲ ಮಾತ್ರವಲ್ಲ ವಾದ -ಚರ್ಚೆಗಳೆಂದರೆ ನನ್ನ ಆಸಕ್ತಿಯ ವಿಷಯ .ತಾಳಮದ್ದಲೆ ನಡೆಯುವಲ್ಲಿಗೆ  ಹೋದೆ ಅನ್ನುವುದು ನಿಜವಾದರೂ ಹಾಗೆ ಹೋಗುವ ವಿಚಾರ ಅಸ್ಟು ಸುಲಭದ್ದಾಗಿರಲಿಲ್ಲ.ಅದು working day ಮತ್ತು ಕೆಲಸ ಮುಗಿಯದೆ ಬ್ಯಾಂಕ್ ನಿಂದ ಹೋಗುವ ಹಾಗೆಯೂ ಇರಲಿಲ್ಲ.ಅಂದು ಬೇಗ ಬೇಗ ಕೆಲಸ ಮುಗಿಸಿ , ಮ್ಯಾನೇಜರ್ಅವರನ್ನು ಒತ್ತಾಯದಿಂದ ಕರಕೊಂಡು ೫ ಘಂಟೆಗೆ ಬ್ರಾಂಚ್ ಮುಚ್ಚಿ ತಾಳಮದ್ದಲೆ ನಡೆಯುವಲ್ಲಿಗೆ ತಲುಪಿದೆ.

ಕಾರಿನಿಂದ ಇಳಿದಾಗಲೇ ಕಿವಿಗೆ ಬಲಿಪಜ್ಜರ ಹಾಡು ಕೇಳಿಸಿತು.ಭಾಗವತರು ಬಲಿಪರೆಂದು ಆಮಂತ್ರಣದಲ್ಲಿ ಓದಿದ್ದೆ ಹಾಗಾಗಿ ಅವರ ಗುರುತಾಯಿತು , ಜಬ್ಬಾರ್ ಅವರನ್ನು ದಿನೇಶ ತೋರಿಸಿದ .ಇವರಿಬ್ಬರನ್ನು ಬಿಟ್ಟರೆ ಅಲ್ಲಿದ್ದದ್ದು 'ಜೋಷಿ' ಅವರ ಬಗ್ಗೆ ನನಗೆ   ಮೊದಲೇ ಗೊತ್ತಿತ್ತು ;ಅವರ ಪುಸ್ತಕಗಳ ಮುಖಾಂತರ .ಕೂತ ಸ್ವಲ್ಪ ಸಮಯದಲ್ಲಿಯೇ  ವಡೆ ಮತ್ತು ಚಾ  ಕೊಟ್ಟರು .ಹೀಗೆ ಚಾ ಕುಡಿಯಬೇಕಾದರೆ ಮ್ಯಾನೇಜರ್ ಅವರು ವ್ಯಕ್ತಿಯೊಬ್ಬರನ್ನು ತೋರಿಸಿ , ಅವರಿಂದ ಬರಬೇಕಾಗಿದ್ದ ಬಾಕಿ ಹಣದ ಬಗ್ಗೆ ಮಾತಾಡಿದರು .ತಾಳಮದ್ದಲೆಗೆಂದು ಬಂದಿದ್ದ ನನಗೆ ಈ 'ಸಾಲದ ಪ್ರಸಂಗ' ಕೇಳಿದಾಗ ನಗು ತಡೆಯಲಾಗಲಿಲ್ಲ .ಅಸ್ಟು ಜನರ ನಡುವೆ ಕುಳಿತ ಆ ವ್ಯಕ್ತಿಯನ್ನು ಕುಳಿತಲ್ಲಿಯೇ ಕಂಡು ಹಿಡಿದ  ಮ್ಯಾನೇಜರ್ ಅವರ observation ಗೆ ಸಲಾಂ ಹೊಡೆದು ವಡೆಯನ್ನು ತಿಂದು ಮುಗಿಸಿದೆ.ತಾಳಮದ್ದಲೆ ನಡೆಯುವಲ್ಲಿಯೂ ಸಾಲಗಾರರನ್ನು ಹುಡುಕುತಿದ್ದ ಮ್ಯಾನೇಜರ್ ಅವರನ್ನು ಗಮನಿಸಿಯೇ ತಿಳಿಯಿತು ಬೇಗ ಹೊರಡಬೇಕೆಂದು.ಹೀಗೆ ವಡೆ ಮತ್ತು ಚಾ ಆಸ್ವಾದನೆಯಲ್ಲಿಯೇ ಮೊದಲ ತಾಳಮದ್ದಲೆಯ ಪ್ರಸಂಗ ಮುಗಿಯಿತು.ಒಂದೆರಡು ದಿನದ ನಂತರ ನಮ್ಮೂರಿನ 'ಅಯ್ಯಪ್ಪ ಬೆಳಕು ' ವಿನ ಸಂದರ್ಭದಲ್ಲಿ ಆಯೋಜಿಸಿದ್ದ ತಾಳಮದ್ದಳೆಯಲ್ಲಿ    'ಜಬ್ಬಾರ್' ಬಾಗವಹಿಸಿದ್ದರಂತೆ ಮತ್ತು ಬಹಳ ಚೆನ್ನಾಗಿ ಮಾತಾಡಿದರಂತೆ ಅನ್ನುವ ವಿಚಾರ ನನಗೆ ನನ್ನ ತಂದೆಯವರಿಂದ ತಿಳಿಯಿತು.ಹೀಗೆ ತಾಳಮದ್ದಲೆಯ ಬಗ್ಗೆ ಅನೇಕರಿಂದ  ಕೇಳಿ ಮತ್ತು ಚರ್ಚಿಸಿ ನನಗೆ ಅದರ ಬಗ್ಗೆ ಆಸಕ್ತಿ ಮೂಡಲಾರಂಭಿಸಿತು  .


ಅದೇ ದಿನಗಳಲ್ಲಿ  ನಮ್ಮ ಕೇಬಲ್ ನ ಲೋಕಲ್ ಚಾನೆಲ್ ಒಂದರಲ್ಲಿ ಪ್ರತಿ ಶನಿವಾರ ಯಕ್ಷಗಾನವನ್ನು ಬಿತ್ತರಿಸಲು ಪ್ರಾರಂಭಿಸಿದರು.ಅದನ್ನು ನಾನು ತಪ್ಪದೆ ವೀಕ್ಷಿಸುತಿದ್ದೆ.ಪ್ರತಿ ಆದಿತ್ಯವಾರ ನಮ್ಮ ಮತ್ತು ನಮ್ಮ ಸಂಬಂಧಿಕರ ಮನೆಯವರು
ಸೇರಿ get together ಅನ್ನು arrange ಮಾಡುತಿದ್ದೆವು .ವಿಶೇಷವೆಂದರೆ ಆ ಮನೆಯವರು ಕೂಡ ಟೀವಿಯಲ್ಲಿ ಪ್ರಸಾರವಾಗುವ ಯಕ್ಷಗಾನವನ್ನು ತಪ್ಪದೆ ನೋಡುತಿದ್ದರು.ಹಾಗಾಗಿ ಯಕ್ಷಗಾನದ ಬಗ್ಗೆ ಚರ್ಚಿಸಲು ಈ get together ನನಗೆ ವೇದಿಕೆಯಾಯಿತು ಮಾತ್ರವಲ್ಲ ನನಗೊಬ್ಬ ಸಮಾನ ಮನಸ್ಕ ಗೆಳೆಯ ಇಲ್ಲಿಂದ  ಸಿಕ್ಕಿದ.ನಂತರ ಸುತ್ತಮುತ್ತಲು ನಡೆಯುವ ಹೆಚ್ಚಿನ ಎಲ್ಲಾ ಯಕ್ಷಗಾನಕ್ಕೆ , ತಾಳಮದ್ದಳೆಗೆ  ನಮ್ಮ ಹಾಜರಿ ಬೀಳುತ್ತಿತ್ತು.ನಾನು ಎರಡು ದಿನ ಬ್ಯಾಂಕ್ಗೆ ರಜೆ ಹಾಕಿ ಧರ್ಮಸ್ಥಳಕ್ಕೆ ಹೋಗಿ ಆಟ ನೋಡಿ ಬಂದೆ .ಅಲ್ಲಿ ಆಟ ನೋಡಲು ನನ್ನ ಮಾವನ ಮಕ್ಕಳಿಬ್ಬರು ನನ್ನ ಜೊತೆಯಾದರು.ಮಳೆಗಾಲದಲ್ಲಿ ಮಂಗಳೂರಿನ ಪುರಭವನದಲ್ಲಿ ನಡೆಯುವ ಟಿಕೇಟಿನ  ಆಟಕ್ಕು ನನ್ನ ಹಾಜರಿ ಬಿತ್ತು.ಹೀಗೇ ನನ್ನ ಆಟದ ಹುಚ್ಚು ಜೋರಾಗುತ್ತಾ ಬಂತು.ಭಾವಗೀತೆಗಳೇ ತುಂಬಿದ್ದ ನನ್ನ i -pod  ನಲ್ಲಿ ಅಮ್ಮಣ್ಣಾಯ ,ಗಣಪಣ್ಣ, ಬಲಿಪ,ಹೊಳ್ಳ ,ಪಟ್ಲ ರ  ಪದ ಬಂದು ಕುಳಿತಿತು. ಹುಶಾರಿಲ್ಲವೆಂದು ಡಾಕ್ಟರ್ ಬಳಿ ಹೋದರೂ ಅಲ್ಲಿ ಚರ್ಚೆಯಾಗುವುದು ಕೂಡ  ಯಕ್ಷಗಾನದ ವಿಚಾರವೇ.ಕಾರಣವಿದೆ ನಾನು ಹೋಗುವ ಕ್ಲಿನಿಕ್ ನಲ್ಲಿರುವ ಡಾಕ್ಟರ ಕೂಡ surprisingly ಯಕ್ಷಗಾನದ follower .


ಈಗ ಕಾಲಿಗೆ fracture ಆದ ಕಾರಣ ಮನೆಯಲ್ಲಿಯೇ ಇದ್ದೇನೆ.ಮನೆಯಲ್ಲಿರುವ ಕಂಪ್ಯೂಟರ್ ಅನ್ನೇ ರಂಗಸ್ತಳವನ್ನಾಗಿಸಿ ಯಕ್ಷಗಾನವನ್ನು ಆಸ್ವಾದಿಸುತ್ತಾ ಇರುತ್ತೇನೆ.ನನ್ನ ನೋಡಲು ಮನೆಗೆ ಬರುವವರು ನನ್ನ ಕೋಣೆಯಿಂದ ಬರುವ ಯಕ್ಷಗಾನದ ಪದ್ಯ ಕೇಳಿ ತಾಯಿಯಲ್ಲಿ ಕೇಳುತ್ತಾ ಇರುತ್ತಾರೆ -ಯಕ್ಷಗಾನದ craze ಇದೆಯಾ ಇವನಿಗೆ ಆಂತ.ತಾಯಿಯ ಮಾತಿಗೆ ನಾನು ಕಿವಿಗೊಡುವುದಿಲ್ಲ .ಮೆಲ್ಲನೆ ಪ್ಲಾಸ್ಟರ್ ಹಾಕಿದ ನನ್ನ ಬಲಗಾಲನ್ನು ನೋಡಿ ಕಣ್ಣು ಹೊಡೆಯುತ್ತೇನೆ.

ಮೊನ್ನೆ feb 26 ರಂದು ಪೆರ್ಲದ ಸಮೀಪದಲ್ಲಿರುವ ಪಡ್ರೆಯಲ್ಲಿ  ಹೊಸನಗರ ಮೇಳದ ಆಟ ನೋಡಲು ಹೋದಾಗ ಬಿದ್ದು ಕಾಲಿಗೆ fracture ಆದ ಕಾರಣ ಸಧ್ಯಕ್ಕೆ ತಿರುಗಾಟ ನಿಂತಿದೆ.
me now  missing ಯಕ್ಷಗಾನ a lot ... 

       

ಬುಧವಾರ, ಆಗಸ್ಟ್ 18, 2010

ನಾನೆಸ್ಟು ಅಲ್ಪಾಯುಷಿ...

(ಸರಿಯಾಗಿ ಮೂರು ತಿಂಗಳುಗಳ ನಂತರ ನಾನು ಖಾಲಿಹಾಳೆಯಲ್ಲಿ ಅಕ್ಷರ ಮೂಡಿಸುತ್ತಿದ್ದೇನೆ .ಈ ನಡುವೆ ನನ್ನ ಬ್ಲಾಗ್ಗೆ ಒಂದುವರುಷ ಆದದ್ದು ಕೂಡ ನನಗೆ ಮರೆತು ಹೋಗಿತ್ತು!!! .)

ಚಿಕ್ಕಂದಿನಲ್ಲಿ ಬಾಲಮಂಗಳ , ಚಿತ್ರಕಥೆ ಪುಸ್ತಕಗಳನ್ನು ಓದುವ ಹವ್ಯಾಸ ಇತ್ತು .ಅಪರೂಪಕ್ಕೆ 'ಸ್ಪೋರ್ಟ್ಸ್ ಸ್ಟಾರ್ ' ಅನ್ನೋ ಆಂಗ್ಲ ಪತ್ರಿಕೆಯನ್ನೂ ಖರೀದಿಸುತ್ತಿದ್ದೆ .ವಿಶೇಷವೆಂದರೆ ಆಗಿನ್ನೂ ನನಗೆ ಇಂಗ್ಲಿಷ್ ಓದಲು ಸರಿಯಾಗಿ ಬರುತ್ತಿರಲಿಲ್ಲ .ಆ  ಆಂಗ್ಲ ಪತ್ರಿಕೆಯನ್ನು ಖರೀದಿಸಲು ನಾನೊಂದು ಮಾನದಂಡವನ್ನಿಟ್ಟಿದ್ದೆ , ಅದೆಂದರೆ ಆ ಪತ್ರಿಕೆಯಲ್ಲಿ ಬರುವ ಕ್ರಿಕೆಟ್ ಆಟಗಾರರ ಫೋಟೋಗಳು. ನನ್ನ ರೂಲ್ಸ್ ಪ್ರಕಾರ ಕನಿಸ್ಟ  ೫೦ ಕ್ರಿಕೆಟ್ ಫೋಟೋಗಳು ಇದ್ದರೆ ಆ ವಾರ 'ಸ್ಪೋರ್ಟ್ಸ್ ಸ್ಟಾರ್ ' ಅನ್ನು ಖರೀದಿಸ ಬಹುದು ಇಲ್ಲವಾದರೆ ಇಲ್ಲ .ನಂತರದ ದಿನಗಳಲ್ಲಿ  ನಾನು ಖರೀದಿಸುತಿದ್ದುದು ನೂತನ , ಭಾವನ ,ತರಂಗ ,ಸುಧಾದಂತ ವಾರ ಪತ್ರಿಕೆಗಳು , ಮಾಸಪತ್ರಿಕೆಗಳು .
ಈ ನಡುವೆ ನಾನು ಪೀಯೂಸೀ ಮುಗಿಸಿ ಡಿಗ್ರಿಗಾಗಿ ಉಜಿರಗೆ ತೆರಳಿದೆ .ಪಧವಿಯ ಮೂರುವರ್ಷದ ಓದಿನ ನಡುವೆ ನನಗೆ ಹೆಚ್ಚಾಗಿ ಜೊತೆಯಾದದ್ದು -ಚುಟುಕು , ದಿಕ್ಸೂಚಿಯಂಥ ಮಾಹಿತಿ ತುಂಬಿದ ಪುಸ್ತಕಗಳು.ಇದೆ ಸಮಯದಲ್ಲಿ ನಾನು  ಗ್ರಂಥಾಲಯದಿಂದ ಕೂಡ ಪುಸ್ತಕಗಳನ್ನು ಓದಲು ಪ್ರಾರಂಭಿಸಿದೆ -ಅಂದರೆ ನನ್ನ ಓದು ಸಾಹಿತ್ಯದ ಮತ್ತೊಂದು stage ಗೆ   ಬಂದು ತಲುಪಿತು. ಹಾಗಿದ್ದರೂ     personality development ಗೆ ಸಂಬಂಧಿಸಿದ ಪುಸ್ತಕಗಳನ್ನು ಬಿಟ್ಟರೆ ಬೇರೆ ಪುಸ್ತಕಗಳನ್ನು ನಾನು ಇಲ್ಲಿ  ಓದಿದ್ದೆ ಕಡಿಮೆ ಅನ್ನಬಹುದು.ಅಪವಾದ ಅನ್ನುವಂತೆ ಆ ದಿನಗಳಲ್ಲಿ  ಒಂದು ಚಿಕ್ಕ ಕಾದಂಬರಿಯನ್ನು ನಾನು ಓದಿದ್ದೆ ; ಈ ಕಾದಂಬರಿ ನನ್ನ ಸೀನಿಯರ್ ವಿದ್ಯಾರ್ಥಿಯೊಬ್ಬನಿಗೆ ಪಟ್ಯವಾಗಿತ್ತು ಮತ್ತು ಪರೀಕ್ಷೆ ಮುಗಿಸಿ ಆತ ಅದನ್ನು ಕಸದ ರಾಶಿಯಲ್ಲಿ ಬಿಸುಟಿದ್ದ .ಕಸದ ರಾಶಿಯಿಂದ ಹೆಕ್ಕಿ ತಂದು ನಾನು ಈ ಕಾದಂಬರಿಯನ್ನು ಓದಿದ್ದೆ.ಕಾದಂಬರಿಯ ಶೀರ್ಷಿಕೆ , ಕಾದಂಬರಿಯ ಲೇಖಕರ ಬಗ್ಗೆ ನನಗೆ ಏನೇನೂ  ನೆನಪಿಲ್ಲ .ಆ ಕಾದಂಬರಿಯ ಕಥಾವಸ್ತು ತನ್ನದೆನ್ನುವ ಎಲ್ಲವನ್ನೂ ತ್ಯಜಿಸಿ , ತೋರಿದ ಕಡೆಗೆ ಸಾಗುವ ಮತ್ತು ಈ ಸಾಗುವಿಕೆಯ ನಡುವೆ  ಇರವಿಗಾಗಿ (ಅಂದರೆ ಜೀವ ಉಳಿಸಲಿಕ್ಕಾಗಿ ಅಂತ ಓದಿಕೊಳ್ಳಬಹುದು ) ನಡೆಸುವ  ಹೋರಾಟ  (ಬೇರೆ ಬೇರೆ  'ಪಾತ್ರ' ಅನ್ನಬಹುದೇನೋ? ) ಮಾಡುವ  ಒಬ್ಬನದ್ದು .ಈ ಪಾತ್ರ ನನಗೆ ತುಂಬಾ ದಿನಗಳ ತನಕ ಕಾಡಿತ್ತು. ನಾವೂ ಕೂಡ ಇದೆ ರೀತಿ ನಡೆದುಕೊಂಡರೆ ಆ ಅನುಭವ ಹೇಗಿರಬಹುದು ಅನ್ನುವುದನ್ನು ಈ ಪುಸ್ತಕ ಓದಿದ ಮತ್ತೊಬ್ಬ ಗೆಳೆಯನಲ್ಲಿ ನಾನು ಚರ್ಚಿಸುತಿದ್ದೆ .ಇದೊಂದು ಬಿಟ್ಟರೆ ಗಂಭೀರ ಪ್ರಾಕಾರಕ್ಕೆ ಸೇರಿದ ಯಾವ ಪುಸ್ತಕಗಳನ್ನೂ ನಾನು ಓದಲಿಲ್ಲ .

ಮುಂದೆ MBA ಮಾಡಲು ಬೆಂಗಳೂರಿಗೆ ಬಂದೆ .ಇಲ್ಲಿ ಬಂದ ನಂತರ ಊರಿನಲ್ಲಿ  ಅಪರೂಪಕ್ಕೆನ್ನುವಂತೆ ಓದುತಿದ್ದ ' ಓ ಮನಸೇ ' ಮತ್ತು     ' ಹಾಯ್ ಬೆಂಗಳೂರನ್ನು' ಬಿಡದೆ ಓದಲು ಪ್ರಾರಂಭಿಸಿದೆ .ಈ ನಡುವೆ ಅನಂತ ಮೂರ್ತಿ ಮತ್ತು ಬೈರಪ್ಪನವರ ನಡುವೆ 'ಆವರಣ' ಕಾದಂಬರಿಗೆ ಸಂಬಂಧಿಸಿದಂತೆ ವಿವಾದವೊಂದು ನಡೆಯಿತು . ಈ ವಿವಾದದ ಬಗ್ಗೆ ಚರ್ಚಿಸುತ್ತಾ ರವಿ ಬೆಳಗರೆಯವರು 'ಹಾಯ್ 'ನಲ್ಲಿ ಬೈರಪ್ಪನವರ 'ನಿರಾಕರಣ' ಕಾದಂಬರಿಯ ಬಗ್ಗೆ ಬರೆದರು. ಈ ಕಾದಂಬರಿಯ ವಸ್ತು ನನ್ನನ್ನು ತುಂಬಾ ಆಕರ್ಷಿಸಿತು .ನಿರಾಕರಣ ಕಾದಂಬರಿಯನ್ನು   ಓದಿದೆನಾದರೂ ಆ ಓದು  ನನ್ನನ್ನು ಅಷ್ಟಾಗಿ ನಾಟಲಿಲ್ಲ .ತೇಜಸ್ವಿಯವರು ನಮ್ಮನ್ನು ಬಿಟ್ಟು ಹೋದ ಕೆಲ ದಿನದಲ್ಲೇ ಅವರ ಬಗೆಗಿನ ವಿವರ ತುಂಬಿದ , ಅವರದೇ  ಚಿತ್ರವನ್ನು ಮುಖಪುಟವನ್ನಾಗಿಸಿಕೊಂಡು ಬಂದ ' ಮನಸೇ ' ನನ್ನ ಕೈಯಲ್ಲಿತ್ತು .ಆ ಸಂಚಿಕೆಯ ಓದು  ಸಾಹಿತಿಕ ವ್ಯಕ್ತಿಯ  ಕಡೆಗಿನ ನನ್ನ ಒಲವನ್ನು ಹೆಚ್ಚು ಮಾಡಿಸಿತು .ಆವರಣದ ವಿವಾದ ನನಗೆ ಹೊಸ ಹೊಸ ವಿಷಯವನ್ನು , ವಿವಾದಿತ ಲೇಖಕರ ಬೇರೆ ಬೇರೆ ಪುಸ್ತಕಗಳ ಬಗೆಗಿನ ವಿವರವನ್ನು ಒದಗಿಸಿತು. ನನ್ನಂತೆಯೇ ಕಾಲೇಜಿನಲ್ಲಿ ನನ್ನಿಬ್ಬರು ಗೆಳೆಯರು ಇದೇ ವಿಷಯಾಸಕ್ಥಿಯನ್ನು ಹೊಂದಿದ್ದರು .ಅವರ ನಡುವೆ ಚರ್ಚಿಸುವಾಗ ನನಗೆ ಮತ್ತಸ್ಟು ವಿಷಯ , ಮತ್ತಸ್ಟು ಪುಸ್ತಕಗಳ  ಬಗ್ಗೆ ತಿಳಿಯಿತು. ಹೀಗೇ ಸಾಹಿತ್ಯಾಬಿರುಚಿ ಹೊಂದಿದ ಗೆಳೆಯರ ಸಹವಾಸದಿಂದ ನನ್ನ ಸಾಹಿತ್ಯಾಭಿರುಚಿ ಮತ್ತಸ್ಟು ಹೆಚ್ಚುತ್ತಾ ಹೋಯಿತು.

ಓದು ಮುಗಿಸಿ ಕೆಲಸಕ್ಕೆ ಸೇರಬೇಕಾದರೆ ನನಗೆ ೬ ತಿಂಗಳಸ್ಟು ಸಮಯ ಸಿಕ್ಕಿತ್ತು . ಆಗ ನನಗೆ ವರವಾಗಿ ಬಂದದ್ದು ನಮ್ಮೂರಿನ ಸಾರ್ವಜನಿಕ ಗ್ರಂಥಾಲಯ.ಇದುವರೆಗಿನ ಓದು ಎಸ್ಟೋ ಪುಸ್ತಕಗಳ ಹೆಸರನ್ನು ನನ್ನ ಮನಸಲ್ಲಿ ಟೈಪ್ ಮಾಡಿತ್ತು , ಆ ಪಟ್ಟಿಯನ್ನು ನೆನಪಿಸಿ ಗ್ರಂಥಾಲಯ ದಲ್ಲಿ ಹುಡುಕಿ ಒಂದಷ್ಟು ಪುಸ್ತಕಗಳನ್ನು ಓದಿದೆ - ಗ್ರಹಭಂಗ , ಭಾರತೀಪುರ , ಸಂಸ್ಕಾರ ,ಭವ ಹೀಗೆ .ಈ ಹುಡುಕಾಟದ ನಡುವೆ ಮತ್ತೆ ಕೆಲವು ಪುಸ್ತಕಗಳು ನನ್ನ ಮನೆ ಸೇರಿದವು - ಮೂರ್ತಿರಾಯರ 'ದೇವರು' , ಸಂಜೆ ಕಣ್ಣಿನ ಹಿನ್ನೋಟ , ಕೊವೂರ್ ಬರೆದ ವೈಚಾರಿಕತೆಯ  ಪುಸ್ತಕ.ಹೀಗೆ ಯಾವುದೋ ಒಂದು ಪತ್ರಿಕೆ , ಯಾವುದೋ ಒಂದು ಮುನ್ನುಡಿ/ಬೆನ್ನುಡಿ , ಲಿಖಿತ ಭಾಷಣದ ಓದು , ಗೆಳೆಯರೊಂದಿಗಿನ ಚರ್ಚೆ   ನನ್ನನ್ನು ಮತ್ತಸ್ಟು ಓದಿನತ್ತ ಕರೆದು ಕೊಂಡು ಹೋಗಿದೆ . ಓದು ಮುಗಿಸಿ, ಕೆಲಸಕ್ಕೆ ಸೇರುವ ಮೊದಲು  ಗ್ರಂಥಾಲಯದಲ್ಲಿದ್ದಸ್ತು ದಿನ ನನಗನ್ನಿಸಿದ್ದು - ನಾನೆಸ್ಟು ಅಲ್ಪಾಯುಷಿಯೆಂದು.ಈ ಅಭಿಪ್ರಾಯ ಇಂದಿಗೂ ನನ್ನಲ್ಲಿ ಇದೆ. ಆದರೆ ನಾನು ಮತ್ತಸ್ಟು ಅಲ್ಪಾಯುಷಿ ಆಗುತಿದ್ದೇನೆ ಮತ್ತು ಗ್ರಂಥಾಲಯ  ನನ್ನ ನಿರಾಶೆಯನ್ನ ಮತ್ತಸ್ಟು ಹೆಚ್ಚಿಸುತ್ತಿದೆ. 

ಈ ರವಿವಾರ ವಿಜಯ ಕರ್ನಾಟಕದ ಸಾಪ್ತಾಹಿಕ ಪುರವಣಿಯಲ್ಲಿ 'ಜೋಗಿ' ಯವರು ಬರೆದ 'ಎಲ್ಲಿಂದ ಶುರು , ಯಾವುದು ಕೊನೆ ?' ಓದಿದ ಬಳಿಕ  ನನಗೆ ಮೇಲೆ ಬರೆದ ವಿಷಯವನ್ನು ಹಂಚಬೇಕೆನ್ನಿಸಿತು.  

ಗುರುವಾರ, ಮೇ 13, 2010

ನೀನು ಅವಳನ್ನು ಪ್ರೀತಿಸುತಿದ್ದೆಯಾ... ?


ನೀನು ಅವಳನ್ನು ಪ್ರೀತಿಸುತಿದ್ದೆಯಾ ?.


ಪ್ರಶ್ನೆಗೆ ಉತ್ತರವಿತ್ತಾದರೂ ಈ ಪ್ರಶ್ನೆ ಅವನಿಗೆ ಪ್ರಸ್ತುತವೆನಿಸಲಿಲ್ಲ .ನಾಲ್ಕು ಮೆಸೇಜ್ಗಳಲ್ಲಿ ಅರಿತು ಕೊಂಡ , ಎರಡು ನಗೆಗೆ ಸೋತ ಸುಳ್ಳಿನಲ್ಲಿ -ritual  ನಂತೆ ನಡೆಯದೆ ಮಾತು ನೇರವಾಗಿ ಈ ವಿಷಯದ ಕಡೆಗೆ ಬಂದಿರುವುದು ಅವನಿಗೆ ಆಶ್ಚರ್ಯವೆನಿಸಿತು.

ಹಾಗಾಗಿ ಪ್ರಶ್ನೆಯ ಗಾಂಭೀರ್ಯವನ್ನೂ ಮರೆತು ಅವನು ನಕ್ಕ.


ಯಾಕೆ ನಗುತ್ತಿದ್ದಿಯಾ...?


ನಗುವಿನ ಹಿಂದಿನ ಕಾರಣ ಹೆಚ್ಚಿನ ಸಂದರ್ಭದಲ್ಲಿ ಸುಲಭದಲ್ಲಿ ಗೊತ್ತಾಗಿಬಿಡುತ್ತದೆ. ಅದಲ್ಲದ ನಗೆ ಎದುರಿಗಿದ್ದವರನ್ನ ಅಪಮಾನಿಸುತ್ತೆ ಅನ್ನುವುದನ್ನು ಅರಿತು ಅವನು ಮೌನಿಯಾದ.
...
ಅವಳದೂ ಮೌನ.


ಮೌನಕ್ಕೆ ಕಾರಣನಾದ ದೀಪೂವೇ ಮೌನವನ್ನು ಮುರಿಯುತ್ತಾ - " ಆಶ್ಚರ್ಯವಾಯಿತು ! ಕೆಲ್ಸ ಹೇಗಿದೆ , studies ಚೆನ್ನಾಗಿ ನಡಿತಿದ್ಯಾ ಅನ್ನೋ ಟಾಪಿಕ್ಗೇ ಸೀಮಿತವಾಗಿ , ಮಾತು ಮುಗಿದಮೇಲೆ ಮೌನವನ್ನು ಹೊಕ್ಕು ನಡುವೆ ನಗುವನ್ನು ತೊಟ್ಟು ಸುಮ್ಮನಾಗಬೇಕಾದ ನಾವು ಹೀಗಿಲ್ಲ .ಬಹುಷ್ಯ ಇದೆಲ್ಲ ನಿನ್ನ ಪ್ರಶ್ನೆಯಿಂದಾಗಿರಬಹುದು .ಹೌದು ಯಾಕಾಗಿ ಈ ಪ್ರಶ್ನೆ , ಸೀಮಾ ?" .


ಈ ಪ್ರಶ್ನೆ ಬರೇ ಉತ್ತರವನ್ನು ನಿರೀಕ್ಷಿಸುತಿಲ್ಲ . ಮತ್ತೇನನ್ನೋ ಹೇಳಲು ಬಯಸುತ್ತಿದೆ...


ಅಂದರೆ ...


ವಿವರಿಸಿ ಹೇಳುವ ಶಕ್ತಿ ನನ್ನಲ್ಲಿಲ್ಲ . ತಿಳಿದುಕೊಳ್ಳುವ ಯುಕ್ತಿ ನಿನ್ನಲ್ಲಿದೆ ಅಂದುಕೊಳ್ಳುತ್ತೇನೆ .


ಯುಕ್ತಿ...! ಮನಸೆನ್ನುವುದು ಲಗಾಮಿಲ್ಲದ ಹುಚ್ಚು ಕುದುರೆ ಈ ಹುಚ್ಚು ಕುದುರೆಯಿಂದ ಹುಚ್ಚು ಕಲ್ಪನೆಗಳಲ್ಲದೆ ಬೇರೇನನ್ನು ನೀನು ನಿರೀಕ್ಷಿಸುತ್ತಿ.


ಹುಚ್ಚು ಕಲ್ಪನೆಗಳೂ ಕೆಲವೊಮ್ಮೆ ನಿಜವಾಗುತ್ತವೆ .ತಿಳಿದಿರಲಿ.


ಆದರೂ... ಇಂಥ ಹುಚ್ಚು ಕಲ್ಪನೆಗೆ ಕಾರಣ...?


ಎಲ್ಲಾ ಪ್ರಶ್ನೆಗಳಿಗೂ ಉತ್ತರಗಳಿರುವುದಿಲ್ಲ. ಎಲ್ಲಾ ಉತ್ತರಗಳಿಗೂ ಸಮಜಾಯಿಶಿಗಳಿರುವುದಿಲ್ಲ- ಅದು ನಿಜ ಅಸ್ಟೆ...


ಈಗ ಪ್ರಶ್ನೆಯ ಕಡೆಗೆ ಬರೋಣ. ಭವಿಷ್ಯದ ಕನಸಿಗಾಗಿ ಭೂತದ ನೆನಪಿನ ಅಗೆಯುವಿಕೆ ಯಾಕೆ ...


ಎಸ್ಟೆ ಉದಾರಿ ಎಂದುಕೊಂಡರೂ ಈ ಮನಸ್ಸೇನ್ನುವುದು ಒಳಗೊಳಗಿಂದ self centric .


ಇದು ಅಪ್ಪುವ ಬಯಕೆಯ self centrikko ಅಥವಾ ಉಸಿರು ಕಟ್ಟಿಸುವ ಬಗೆಯ self centrikko ?.


ಏನಂತ ಅನ್ನಿಸುತ್ತೆ...?


ಗೊತ್ತಿಲ್ಲ...


ನನ್ನ ಕಣ್ಣ ನೋಡಿದರೆ ಉತ್ತರ ತಿಳಿದೀತು...


ಅವರಿಬ್ಬರೂ ಮೊದಲಬಾರಿಗೆ ಬಿಡದೆ ಒಬ್ಬರನ್ನೊಬ್ಬರು ನೋಡಿಕೊಂಡರು . ಇವಳು ಅವನ ಕಣ್ಣಲ್ಲಿ ; ಅವನು ಅವಳ ಕಣ್ಣಲ್ಲಿದ್ದ .


ಪ್ರಶ್ನೆ , ಉತ್ತರಗಳು ಅಲ್ಲಿ ಅಪ್ರಸ್ತುತವಾದವು.



ನನ್ನ ಬಗ್ಗೆ

ನನ್ನ ಫೋಟೋ
ಹೊಟ್ಟೆ ಮತ್ತು ಬಟ್ಟೆಗಾಗಿ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತಿದ್ದೇನೆ.ಕತೆ,ಕವಿತೆ,ಕಾದಂಬರಿಗಳೆಂದರೆ ನನ್ನ ಪ್ರೇಯಸಿಯರಿದ್ದಂತೆ.ಹಳೆ ಹಾಡುಗಳ ಹುಚ್ಚ (ಹಾಗಂತ ಹೊಸ ಹಾಡುಗಳ ಬಗ್ಗೆ ಕಂಪ್ಲೇಂಟ್ ಇಲ್ಲ).ಬೇಸರದ ಹಾಡುಗಳೆಂದರೆ ಮತ್ತೂ ಇಷ್ಟ .

ನನ್ನ ಬ್ಲಾಗ್ ಪಟ್ಟಿ