ಭಾನುವಾರ, ಏಪ್ರಿಲ್ 4, 2010

ಗೆಳೆಯ 'ಕೆ ಪಿ' ಬರೆದ ಕವನ

ಮರಳಿ ಬಾ ಗೆಳತಿ  ಹುಚ್ಚು ಪ್ರೀತಿಗೋಸ್ಕರ.


ಎದೆಯಾಳದ ಒಂದು ಮಾತು ಸಾಲದೇ ಗೆಳತಿ
ನನ್ನ ಪ್ರೀತಿಯ ಆಳವನರಿಯಲು ........!


ಕಣ್ಣಂಚಿನ ಆ ಕಾತರದ ನೋಟ ತಿಳಿಸದೇ ಪ್ರಿಯೆ
ನಿನ್ನ ಪ್ರೀತಿಯ ಸೆಳೆತ ಎಷ್ಟೆಂದು ........!!


ಕನಸಲೂ ದಾರಿ ಕಾಯುವ ನನ್ನ ತಾಳ್ಮೆಗಿಂತ ಸಾಕ್ಷಿ ಬೇಕೇ ಗೆಳತಿ
ನನ್ನ ಪ್ರೀತಿ ಪವಿತ್ರ ಎಂದು ತಿಳಿಸಲು ...... !!!


ಬರೆದದ್ದನೆಲ್ಲಾ ಪ್ರೇಮ ಕವನವಾಗಿಸುತ್ತಿರುವ  ಈ ಮನ ಹೇಳಬಯಸಿದೆ ಪ್ರಿಯೆ
ನನ್ನ ಪ್ರೀತಿಯ ತೀವ್ರತೆ ಎಷ್ಟೆಂದು ...... !!!!


ನಿತ್ಯ ಜೊತೆಗಾರರಾದ ಮದ್ಯ -ಸಿಗರೇಟು ಸಾಲದೇ ಗೆಳತಿ
ನಿನಗೋಸ್ಕರ ಪ್ರಾಣ ಬಿಡುತ್ತಿದ್ದೇನೆಂದು ತಿಳಿಸಲು ...!!!!!


ಅಗಲಿ ಹೋದ ನಿನ್ನನಿನ್ನೂ  ಹೃದಯದಲ್ಲಿರಿಸಿರುವ ನನಗಿಂತ ಮೂರ್ಖ ಬೇಕೇ ನಿನಗೆ
ನನ್ನ ಪ್ರೀತಿ ಅಮರ ಎಂದು ತಿಳಿಸಲು ......   !!!!!!

(http://aaondukaaranakkaagi.blogspot.com/)

1 ಕಾಮೆಂಟ್‌:

KP ಹೇಳಿದರು...

ಸಾಧ್ಯವಿಲ್ಲವೆಂದು ನಂಬಿದ್ದೆ .
ನಂಬಿಕೆ ಸುಳ್ಳಾಗಲಿಲ್ಲ ..

ಹಾಳೆ ಖಾಲಿ ಇದ್ದರೂ
ಭಾವನೆಗಳೆಂದೂ ಖಾಲಿಯಾಗದು

ಭಗ್ನ ಪ್ರೇಮಿಯ ಹೃದಯ ನಿಂತರೂ
ಕವಿ ಹೃದಯವೆಂದೂ ನಿಲ್ಲದು ...

ಹೊಸ ರೂಪ ಪಡೆದಿದೆ ಖಾಲಿಹಾಳೆ
ಇನ್ನೆಂದೂ ಖಾಲಿ ಆಗದಿರಲಿ ...

ಹಾರೈಕೆಯೊಂದಿಗೆ ,
ನಿಮ್ಮ ಗೆಳೆಯ
ಕೆ . ಪಿ . :)

ನನ್ನ ಬಗ್ಗೆ

ನನ್ನ ಫೋಟೋ
ಹೊಟ್ಟೆ ಮತ್ತು ಬಟ್ಟೆಗಾಗಿ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತಿದ್ದೇನೆ.ಕತೆ,ಕವಿತೆ,ಕಾದಂಬರಿಗಳೆಂದರೆ ನನ್ನ ಪ್ರೇಯಸಿಯರಿದ್ದಂತೆ.ಹಳೆ ಹಾಡುಗಳ ಹುಚ್ಚ (ಹಾಗಂತ ಹೊಸ ಹಾಡುಗಳ ಬಗ್ಗೆ ಕಂಪ್ಲೇಂಟ್ ಇಲ್ಲ).ಬೇಸರದ ಹಾಡುಗಳೆಂದರೆ ಮತ್ತೂ ಇಷ್ಟ .

ನನ್ನ ಬ್ಲಾಗ್ ಪಟ್ಟಿ