ಮೊನ್ನೆ ಗೆಳೆಯನೊಬ್ಬನಲ್ಲಿ ಮಾತಾಡುತ್ತಾ ಕೇಳಿದ್ದೆ- ಕಲ್ಪನೆ ಜಾಸ್ತಿ ತೃಪ್ತಿ ಕೊಡುತ್ತೋ ಅಥವಾ ವಾಸ್ತವ ಅಂತ. ಅವನು ಸ್ವಲ್ಪವೂ ಆಲೋಚಿಸದೆ ಹೇಳಿದ : ಹೆಚ್ಚು ತೃಪ್ತಿ ನೀಡುವುದು ವಾಸ್ತವ ಅಂತ.
ಕಲ್ಪನೆಗೆ ಯಾವುದೇ ಆಧಾರ ಬೇಕಿಲ್ಲ , ಮನಸ್ಸಿಗೆ ಹೇಗೆ ಬೇಕೋ ಹಾಗೆ ಮನಸ್ಸು ಕಲ್ಪಿಸಿ ಕೊಳ್ಳುತ್ತೆ.'ಹೇಗೆ ಬೇಕೋ ಹಾಗೆ', ಅಂದರೆ ಬೇಕಾದ ಹಾಗೆ ಕಲ್ಪಿಸಿಕೊಳ್ಳುವುದರಿಂದ ಕಲ್ಪನೆ ಹೆಚ್ಚು ತೃಪ್ತಿ ನೀಡುತ್ತದೆ ನಾನು ವಿಶ್ವಾಸದಿಂದ ಹೇಳಿದೆ .
ನಡುವೆ ಮತ್ತೊಬ್ಬ ಗೆಳೆಯ ಹೇಳಿದ ಕಲ್ಪನೆಗೂ ಒಂದು ವ್ಯಾಪ್ತಿ ಇದೆ. ಅದು ಎಂದೂ ಒಂದು limit ದಾಟಿ ಹರಿಯಲು ಸಾದ್ಯವೇ ಇಲ್ಲ . ನಾವೆಸ್ತೆ ಹೇಳಿಕೊಳ್ಳಲಿ imaginations dont have limits ಅಂತ, ನಿಜದಲ್ಲಿ imagination ಒಂದು ವಾಸ್ತವದ ಮೇಲೆಯೇ ಅವಲಂಬಿತವಾಗಿರುತ್ತದೆ. ಅನುಭವವಿಲ್ಲದೆ ಅದೇನನ್ನು ನೀನು ಕಲ್ಪಿಸಿಕೊಳ್ಳುತ್ತಿಯಾ?.
ಕಲ್ಪಿಸಿ ಕೊಳ್ಳಲು ಒಂದು ಅಧಾರ ಬೇಕೆನ್ನುವುದು ನಿಜ.ಆದರೆ ನೀನು ಹೇಳುವ ಪ್ರಕಾರ ಕಲ್ಪನೆಗೆ ಆಧಾರ ವಾಸ್ತವ ಅನುಭವವೇ ಆಗಬೇಕೆಂದಿಲ್ಲ. ಒಂದು ಸುಳ್ಳು ಅನುಭವ ಕೂಡ ಸಾಕಲ್ಲವೇ ಅರ್ಥಾತ್ ಕಲ್ಪನೆಗೊಂದು ಕಲ್ಪನೆ . ಇದೇ ಶೂನ್ಯದಿಂದ ಅನಂತವನ್ನು ಅರಿಯುವ ಬಗೆ. ಏನೂ ಇಲ್ಲದೆ ಎಲ್ಲವನ್ನು ಕಲ್ಪಿಸಿಕೊಂಡು ಅನುಭವಿಸುವ ಬಗೆ.
ಅನುಭವ ಅನ್ನುವಾಗ ಅಲ್ಲಿ ವಾಸ್ತವತೆ ಅಂದರೆ ನಿಜವಾಗಿ ಏನಾದರೂ ನಡೆಯಬೇಕು. ಯಾರಿಗೂ ಕಾಣದ ಕಲ್ಪನೆ ಏನನು ಕಂಡಿತು ?.ನೀನು ಹೇಳುವ ಅನುಭವ ಅದು ಅನುಭವವಲ್ಲ -ಅದು ಬ್ರ್ಹಮೆ.
ಒಂದೇ ವಿಚಾರ ಒಬ್ಬೊಬ್ಬರ ಮೇಲೂ ಒಂದೊಂದು ಪರಿಣಾಮವನ್ನು ಬೀರುತ್ತದೆ , ಅಂದರೆ ಒಬ್ಬೊಬ್ಬರಿಗೆ ಒಂದೊಂದು ಅನುಭವವಾಗುತ್ತದೆ -ಹಾಗಾದರೆ ಇಲ್ಲಿ ನಿಜವಾದ ಅನುಭವ ಯಾರದು , ಬ್ರಮ್ಹೆ ಯಾರದು ?. ಅಷ್ಟಕ್ಕೂ ಬ್ರ್ಹಮೆಯ ಮಾತು ಇಲ್ಲಿ ಪ್ರಸ್ತುತವಲ್ಲ :ಇಲ್ಲಿ ಸಾಧಿಸ ಬೇಕಾಗಿರುವುದು ಯಾವುದು ಹೆಚ್ಚು ತೃಪ್ತಿ ನೀಡುತ್ತದೆ ಅಂತ , ಯಾವುದು ನಿಜ ಯಾವುದು ಸುಳ್ಳು ಎಂದಲ್ಲ.ಬ್ರಮ್ಹೆ , ವಾಸ್ತವಕ್ಕಿಂತ ಹೆಚ್ಚು ತೃಪ್ತಿ ನೀಡ ಬಹುದು.
ಕಲ್ಪನೆ ಹೆಚ್ಚು ತೃಪ್ತಿ ನೀಡುತ್ತದೆ ಅನ್ನುವುದು ಯಾವಾಗಲು ಒಪ್ಪಿಕೊಳ್ಳುವಂತ ವಿಚಾರವಲ್ಲ . ಕಲ್ಪನೆ ಎಷ್ಟು ತ್ರಪ್ತಿ ನೀಡುತ್ತದೆ ಅನ್ನುವುದು ಮುಂದೊಮ್ಮೆ ಸಿಗುವ ಅಥವಾ ಆಗುವ ಅನುಭವದ ಮೇಲೆ ನಿಂತಿದೆ. ನಿರೀಕ್ಷೆಗೆ ತಕ್ಕುದಾಗಿ ವಾಸ್ತವ ಜರುಗಿದರೆ ಅತವ ಜರಗಿತು ಅಂತ ಅಂದು ಕೊಂಡರೆ ವಾಸ್ತವವೇ ಹೆಚ್ಚು ತ್ರಪ್ತಿ ಕೊಡುತ್ತದೆ ಅಲ್ಲವಾದರೆ ಕಲ್ಪನೆಯೇ ಹೆಚ್ಚು ತೃಪ್ತಿ ನೀಡಿತು ಅಂತ ಅಂದುಕೊಳ್ಳಬಹುದು.
ಕಲ್ಪನೆ ಅನ್ನುವುದು ವಾಸ್ತವ ಅನ್ನುವ ಕ್ರಿಯೆ ಜರಗುವ ಎಸ್ಟೋ ಮೊದಲು ಪ್ರಾರಂಭವಾಗುವ ಕಾರಣ ಅದು ಒಬ್ಬನಿಗೆ ಹೆಚ್ಚು ತೃಪ್ತಿ ನೀಡುತ್ತದೆ . ಮತ್ತು 'ವಾಸ್ತವ' ಜರಗುವಲ್ಲಿ ಅತವ 'ವಾಸ್ತವ' ಅಂದುಕೊಂಡಂತೆ ಜರಗುವಲ್ಲಿ, ಈ ಕಲ್ಪನೆ ನೀಡಿದ ತೃಪ್ತಿ ತುಂಬಾ ಸಹಾಯ ಮಾಡುತ್ತದೆ ; ಕಲ್ಪನೆಯಲ್ಲಿ ಅನುಭವಿಸಿದ ಸುಖ , ಸಂತೋಷ ,ಕುಶಿ ಸಿಗಲು ಮನಸ್ಸು ಕಲ್ಪನೆಯ ಆಸರೆಯನ್ನೇ ಪಡೆದುಕೊಳ್ಳುತ್ತದೆ.ವಾಸ್ತವ ಏನಿದ್ದರೂ ಕ್ಷಣಿಕ , ಅನುಭವಿಸಲು ದೊರಕಿದಾಗ ಮಾತ್ರ - ಅದರ ಮೊದಲೂ ಇಲ್ಲ ನಂತರವೂ ಇಲ್ಲ . ಆದರೆ ಕಲ್ಪನೆ ಹಾಗಲ್ಲ ಅದು ಒಂದು ಕ್ರಿಯೆ ಜರಗುವಾ ಮೊದಲೂ ಇರುತ್ತದೆ ಮತ್ತು ಆ ಕ್ರಿಯೆ ಜರುಗಿದ ನಂತರ ಕೂಡ ಇರುತ್ತದೆ .
ಒಂದು ಕ್ರಿಯೆ ಜರಗುವ ಮೊದಲು ಹುಟ್ಟಿ , ಆ ಕ್ರಿಯೆ ಸಮಾಪ್ತಿಯಾದ ಮೇಲೆ ಮತ್ತೊಮ್ಮೆ ಹುಟ್ಟಿ, ಕಲ್ಪನೆ ಒಬ್ಬನನ್ನು ತೃಪ್ತಿ ಪಡಿಸುತ್ತಿರುತ್ತದೆ ಅನ್ನುವುದು ನಿಜ . ಆದರೆ ಇವೆರಡರ ನಡುವೆ ಜರಗುವ ವಾಸ್ತವವೇ ಹೆಚ್ಚು ತೃಪ್ತಿ ನೀಡುವಂತಹದ್ದು - ಯಾಕೆಂದರೆ ವಾಸ್ತವದಲ್ಲಿ ಮಾತ್ರ ನಮಗೆ ಏನಾದರೂ ಅನುಭವಿಸಲು ಸಾಧ್ಯವಾಗುವುದು . ಒಂದೊಮ್ಮೆ ವಾಸ್ತವ, ಕಲ್ಪನೆಯ ನೀರೀಕ್ಷೆಯನ್ನು ಮುಟ್ಟದಿದ್ದರೂ, ವಾಸ್ತವ ವಾಸ್ತವವೇ - ಅದು ಕಲ್ಪನೆ ನೀಡುವ ಸುಳ್ಳು ಅನುಭವ ಅತವ ಸುಖಕ್ಕೆ ಅತವ ತೃಪ್ತಿಗೆ ಸಾಟಿಯಾಗಲಾರವು.
.
..
...
ನನಗಿನ್ನೂ ಉತ್ತರ ಸಿಕ್ಕಿಲ್ಲ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ