ಭಾನುವಾರ, ಏಪ್ರಿಲ್ 4, 2010

ಕಾರು , ಸೈಟು , ಬಂಗಲೆ ಮತ್ತು ನಮ್ಮ ಜೀವನ...

ದೇವಿಕಾ ,


ಜೀವನದೆಡೆಗೆ ನನಗೆ ಪ್ರಶ್ನೆಗಳಿರುವುದು ನಿನಗೆ ಗೊತ್ತಿರುವ ವಿಚಾರವೇ .ಅದೇ ರೀತಿ ಜೀವನವನ್ನು  ಹೇಗೆ ಜೀವಸಬೇಕು ಅನ್ನುವ ವಿಷಯಕ್ಕೂ ನನ್ನದೇ  ಅದ ಕಲ್ಪನೆ ನನ್ನಲ್ಲಿ  ಇದೆ.ಮೊನ್ನೆ ಮೊನ್ನೆಯವರೆಗೆ ಜೀವನವನ್ನು ಹೀಗೇ ಜೀವಸಬೇಕು, ಅನುಭವಿಸಬೇಕು ಅನ್ನುವ ಕನಸು ನನ್ನಲ್ಲಿ ಇತ್ತು ಅಸ್ಟೆ.ಆದರೆ ಇಂದು ನಾನು ತೀರ್ಮಾನಿಸಿಯಾಗಿದೆ:ಜೀವಿಸುವುದೆಂದರೆ 'ಹೀಗೇ' ಅಂತ.


ದೇವಿ ಮೊನ್ನೆ  ನಾನು ಬರುವ ಬಸ್ಸಿನಲ್ಲಿ ಗೆಳೆಯನೊಬ್ಬ ಸಿಕ್ಕಿದ. ಮಾತಾಡುತ್ತ ವಿಷಯ ಹೇಗೆ ಮತ್ತು ಯಾಕೆ ಜೀವನದ ಕಡೆ ಹೋಯಿತು ತಿಳಿಯಲಿಲ್ಲ.ಅಂತು ಜೀವನದ ಬಗ್ಗೆ ಇಬ್ಬರೂ ಸಾಕಷ್ಟು ಮಾತಾಡಿದೆವು , ಮಂಥನ ನಡೆಸಿದೆವು . ಈ ವಿಚಾರ ವಿನಿಮಯ ನನ್ನನ್ನು ದೃಡವನ್ನಾಗಿಸಿತು , ಸ್ವಲ್ಪ ಆತ್ಮವಿಶ್ವಾಸವನ್ನು ನೀಡಿತು : ನಾನು ನಿರ್ಧಾರ  ತೆಗೆದುಕೊಂಡೆ, ನಾನು ಎಲ್ಲರಂತೆ ಮುದುಕನಾಗುವವರೆಗೆ ದುಡಿಯುವುದಿಲ್ಲ .ಸಾಕಷ್ಟು ಯವ್ವನ , ಜೀವಷ್ಯಕ್ತಿ ಉತ್ಸಾಹವಿರುವಾಗಲೇ ದುಡಿಯುವುದನ್ನು ನಿಲ್ಲಿಸಬೇಕು .ಬರೇ ಹಣದ ಹಿಂದೆ  ಓಡಿ , ಬರೇ ಹಣ ಸಂಪಾದಿಸಿಯೇ ಮುದುಕನಾಗಿ ಏನನ್ನೂ ಅನುಭವಿಸದೆಯೇ ರಾಶಿ -ರಾಶಿ ಹಣ  ಕೂಡಿಟ್ಟು , ಮುಗಿಲೆತ್ತರದ ಬಂಗಲೆ ಕಟ್ಟಿ ' ಶ್ರೀಮಂತ' ಅನ್ನುವ ಹಣೆಪಟ್ಟಿ ಅಂಟಿಸಿಕೊಂಡು ಸತ್ತು ಹೋಗಬಾರದು .ಜೀವನವನ್ನು ಅನುಭವಿಸಬೇಕು- ಬಂಗಲೆ , ಕಾರು , ಚಿನ್ನಗಳ ಆಚೆಗೂ ಜೀವನವಿದೆ : ಅದನ್ನು ಅನುಭವಿಸಬೇಕು .


ನಾನು ದುಡಿಯುತ್ತಾ ಹೋದರೆ ಏನೇನನ್ನೂ ಸಂಪಾದಿಸಬಹುದು -ಕಾರು , ಸೈಟು , ಮನೆ , ಬಂಗಲೆ , ಚಿನ್ನದ ರಾಶಿ...ಹೀಗೇ. ಗಳಿಸುವ ಪ್ರತಿಯೊಂದೂ ಕೆಲ ಸಮಯ ನನಗೆ ತೃಪ್ತಿ ನೀಡಬಹುದು .ಮತ್ತೆ ...?,  ಮತ್ತದೇ ಬಯಕೆ , ಅದೇ ಆಸೆ- ಕೊನೆಗೆ ಅತೃಪ್ತಿ. ಮತ್ತೆ ತೃಪ್ತಿ ಬೇಕೆಂದರೆ ಮತ್ತೇನೋ ಹೊಸದು ಬೇಕು .ಆ ಹೊಸತಿಗಾಗಿ ಮತ್ತದೇ ಕತ್ತೆಯ ದುಡಿತದ ಕೂಪಕ್ಕೆ ನಾನು ಬೀಳಬೇಕು .ನಾನು ಈ ಚಕ್ರದಲ್ಲಿರಲು ತಯಾರಿಲ್ಲ.ಸದಾ ಅತ್ರಪ್ಥಿಯನ್ನು ಅಂಟಿಕೊಂಡಿರುವ ಇಂತಹ ಜೀವನ ನನಗೆ ಬೇಡ.


ಜೀವನದಲ್ಲಿ 'ಇಷ್ಟು ಸಾಕು' ಅನ್ನುವ ಒಂದು ಸಂತೃಪ್ತ ಭಾವವನ್ನು ನೆಲೆಗೊಳಿಸಬೇಕು ಅನ್ನುವುದು ನನ್ನ ಅಭಿಪ್ರಾಯ.ಇಲ್ಲವೆಂದಾದರೆ ನಮ್ಮ ಜೀವನ ನಿರಂತರವಾಗಿರುತ್ತದೆ, ಎಂದೆಂದೂ ಹರಿಯುವ ನದಿಯಾಗಿ ಆದರೆ ಎಂದು ಸಮುದ್ರಕ್ಕೆ ಸೇರದ ನದಿಯಾಗಿ.ಹಾಗಾದರೆ ಸಮಾಜ ಬಯಸುವ ಕಾರು , ಸೈಟ್  ಬಂಗಲೆಗಳು  ಬೇಡವೇ? . ಬೇಡವೆಂದಲ್ಲ ; ಬೇಕು ಆದರೆ ಈ  ಬಯಕೆಗಳು ಒಂದು ಲಿಮಿಟ್ಟಿನಲ್ಲಿ ಇರಬೇಕು . ಕಾರು ಬೇಕೆಂದಾದಲ್ಲಿ ಒಂದು basic model ನ ಕಾರನ್ನು ಖರೀದಿಸೋಣ . ಮನೆಯೆಂದರೆ - ಮನೆ ಸದಸ್ಯರಿಗಾಗಿ ಎಷ್ಟು ಬೇಕು ಅಸ್ಟು ಸಾಕು. ಸಮಾಜಕ್ಕೆ ನಾವು ಶ್ರೀಮಂತರು ಅಂತ ತೋರಿಸಲು , ಸಮಾಜದಿಂದ ನಾವು   ಶ್ರೀಮಂತರು ಅಂತ ಹಣೆಪಟ್ಟಿ ಹಚ್ಚಿ ಕೊಳ್ಳಲು ನಾವು  ಏನನ್ನೂ ಮಾಡುವುದು ಬೇಡ . ನಮ್ಮಲ್ಲೇ  ಪ್ರಶ್ನೆ ಕೇಳಿಕೊಳ್ಳೋಣ  - ನಾವು ಯಾರಿಗಾಗಿ ದುಡಿಯುವುದು ಅಂತ . ಖಂಡಿತವಾಗಿಯೂ ನಮ್ಮ  ಉತ್ತರ 'ನಮಗಾಗಿಯೇ' ಅಂತ ಇರುತ್ತೆ .ಆದರೆ  ನಾವು  ಹೇಳುವುದು ಮಾತ್ರ-  ನಾನು ದುಡಿಯುವುದು ನನಗಾಗಿ ಅಂತ .  ನಿಜದಲ್ಲಿ ನಾವು  ದುಡಿಯುವುದು ಸಮಾಜಕ್ಕಾಗಿ , ನಾನು  ಶ್ರೀಮಂತ ಅಂತ ತೋರಿಸುವುದಕ್ಕಾಗಿ , ಸಮಾಜದ certificate ಗಾಗಿ.


ದೇವಿಕಾ ಇಂದು ನನಗೆ ಯಾರಲ್ಲೂ ಒಂದು destination  ಅನ್ನುವುದು ಕಾಣುವುದಿಲ್ಲ .ಇದು ನಾನು ತಲುಪಬೇಕಾದ ಗಮ್ಯ .ಅಲ್ಲಿ ತಲುಪಿದ ಮೇಲೆ ನಾನು ದುಡಿತವನ್ನು ನಿಲ್ಲಿಸುತ್ತೇನೆ ; ನನಗಿಸ್ತೆ ಸಾಕು ಅಂತ ಹೇಳುವವರು ಯಾರೂ ಇಲ್ಲ .ಗಮ್ಯವೆನ್ನುವುದು ಮುಂದೆ- ಮುಂದೆ  ಸಾಗಿ ಕಡೆಗೊಂದು ದಿನ ಹಿಂದಿರುಗಿ ನೋಡಿದಾಗ ಶೂನ್ಯವನ್ನು ತೋರಿಸಬಾರದು   . progress , growth ಅಥವಾ  ಬೆಳವಣಿಗೆ ಅನ್ನುವುದು ಯಾವತ್ತೂ ನಿರಂತರ.ಅದು never ending process . ಇಂತಹ ನಿರಂತರ ಅರ್ಥವಿಲ್ಲದ growth ನ್ನು ಮನಸಿನ್ನಲಿಟ್ಟುಕೊಂಡವರದ್ದು ಎಂದಿಗೂ ದ್ರವಸ್ಥಿಥಿ - ಒಂದು ಖಚಿತತೆಯಿಲ್ಲದ , ರೂಪಶೂನ್ಯವಾದ ಸ್ಥಿತಿ. ದ್ರವಕ್ಕೆ ಅದು ವಾಸವಾಗಿರುವ ಸ್ತಳದ್ದೆ ರೂಪ - it doesnt have ಅ seperate identity .ನಮ್ಮ ದುಡಿತಕ್ಕೆ ಒಂದು ಅರ್ಥ ಬೇಕು ,ಒಂದು ಕಾರಣ ಬೇಕು.


 ಆತ ಪುತ್ತೂರಿನ ಬಸ್ ಸ್ಟ್ಯಾಂಡ್ನನಲ್ಲಿರುವ ಅಂಗಡಿಯೊಂದರಲ್ಲಿ ವ್ಯಾಪಾರ ಮಾಡುತಿದ್ದ.ಸಾದಾರಣವಾಗಿ ಹೀಗೇ ಬಸ್ ನಿಲ್ದಾಣದಲ್ಲಿರುವ ಅಂಗಡಿಗಳು ರಾತ್ರೆ ಬೇಗನೆ ಮುಚ್ಚುವುದಿಲ್ಲ .ಆದರೆ ಈ ವ್ಯಾಪಾರಿ ಮಾತ್ರ ರಾತ್ರೆ ೧೦.೧೫ ಹೊತ್ತಿಗೇನೆ ಅಂಗಡಿ ಮುಚ್ಚಲು ತಯಾರಿ ನಡೆಸುತ್ತಿದ್ದ. ನಾನು ಕೇಳಿದೆ ಏನು ಇಷ್ಟು ಬೇಗ ಅಂಗಡಿ ಮುಚ್ಚುತ್ತಾ ಇದ್ದೀರಿ ಅಂತ . ಅದಕ್ಕೇ ವ್ಯಾಪಾರಿ ಹೇಳಿದ " ಸ್ವಾಮೀ ಮೊದಲೆಲ್ಲ ನಾನು ರಾತ್ರೆ ಹನ್ನೆರಡರವರೆಗೆ ಕೂತು ಬೆಳಗ್ಗೆ ನಾಲ್ಕಕ್ಕೆ ನಿದ್ದೆ ಮುಗಿಸಿ ಅಂಗಡಿ ತೆರೆಯುತಿದ್ದೆ .ಆಗ ನಿದ್ದೆ ಬಿಟ್ಟು ದುಡ್ಡು ಮಾಡಿದೆ. ಆದರೆ ಈಗ ನನಗೆ ನಿದ್ದೆ ಇಲ್ಲದೆ ಆರೋಗ್ಯ ಕೆಟ್ಟು ಹೋಗಿ ದಿನಕ್ಕೆ ನೂರೈವತ್ತು ರುಪಾಯಿಯ ಮದ್ದು ಬೇಕು .ಈಗ ದುಡ್ಡು  ಬಿಟ್ಟು (ಕೊಟ್ಟು ) ನಿದ್ದೆ ಪಡೆದುಕೊಳ್ಳುವಹಾಗೆ ಆಗಿದೆ . ಎಷ್ಟು ಅಂತ ದುಡಿಯುವುದು ಅಲ್ವಾ ಸ್ವಾಮೀ ....ಅಂದ ".  ಅವನ ಮಾತು ತುಂಬಾ ನನಗೆ ನಿಜ ಅನ್ನಿಸಿತು.ನಾನು ಮೌನವಾಗಿ ಬಸ್ಸು ಹತ್ತಿದೆ.


ನನಗೆ ಗೊತ್ತಿರುವ ಸಾಫ್ಟ್ವೇರ್ ಇಂಜಿನಿಯರ್ ಒಬ್ಬರಿದ್ದಾರೆ. ಅವರು ಬೆಳಗ್ಗೆ ಏಳರ ಹೊತ್ತಿಗೆ ಆಫೀಸಿಗೆ ಹೋದರೆ ಮತ್ತೆ ಮನೆಗೆ ಮರಳಿ ಬರುವುದು ರಾತ್ರಿ ಹನ್ನೊಂದು - ಹನ್ನೆರಡರ ಹೊತ್ತಿಗೆ .ವಾರದ ಐದು ದಿನ ದುಡಿತ ಅಂತಾದರೆ ಅವರು  ಎರಡು ದಿನದ ರಜೆಯನ್ನು ಬರೇ ನಿದ್ದೆ ಮಾಡಿಯೇ ಕಳೆಯುತ್ತಾರೆ. ಹೀಗೇ ಯಂತ್ರಗಳ ತರಹ ದುಡಿಯುವವರು ನಮ್ಮಲ್ಲಿ ಎಷ್ಟು ಜನ ಇಲ್ಲ .ತಪ್ಪು ಅವರದಲ್ಲ . ಖಚಿತವಾಗಿ ಹೇಳುವುದಾದರೆ ಹೀಗೇ ದುಡಿಯುವುದನ್ನು ಯಾರೂ ಬಯಸುವುದಿಲ್ಲ . ಆದರೆ ಸಮಸ್ಯೆಂದರೆ ನಮಗೆ ಹೀಗೇ ದುಡಿಯುವುದೊಂದನ್ನು ಬಿಟ್ಟು ಬೇರೊಂದನ್ನು ಮಾಡಲು ಹೇಳಿಕೊಟ್ಟಿರುವುದೇ ಇಲ್ಲ .ಹುಟ್ಟಿ ಶಾಲೆಗೇ ಸೇರುವವರೆಗೆ ಮಾತ್ರ ಸ್ವಲ್ಪ ಸ್ವಾತಂತ್ರ್ಯ . ಒಮ್ಮೆ ಶಾಲೆಗೇ ದಾಖಲಾತಿ ಆಯಿತೆಂದರೆ ಮುಗಿಯಿತು - ಮತ್ತೇನಿದ್ದರೂ ಸ್ಪರ್ದೆ - ಪ್ರಥಮ rank ಒಂದು ಸಿಕ್ಕರೆ ಸಾಕು . ಹಾಗೆ rank ನ ಮೇಲೆ  rank ಪಡೆದು ಒಂದೊಳ್ಳೆ ಕೆಲಸ ಸಿಕ್ಕಿತೆಂದರೆ ಸಾಕು : ಅಲ್ಲಿಗೆ ಜೀವನ ಮುಗಿಯಿತು ; ಇನ್ನೇನಿದ್ದರೂ ಹಣ , ತುಂಬಾ ಹಣ ಸಂಪಾದಿಸುವುದು.ಅಸ್ಟೆ.ಬಹುಷ್ಯ ನೀನೂ ಇದನ್ನು ಒಪ್ಪಿಕೊಳ್ಳುತ್ತಿ ಅಂದುಕೊಂಡಿದ್ದೇನೆ .

ಹೀಗೇ ಕಾರಣವಿಲ್ಲದೆ ದುಡಿದು ಲಕ್ಷಗಟ್ಟಲೆ ಹಣವನ್ನು ಬ್ಯಾಂಕ್ನಲ್ಲಿ 'nominee ' ಗಳಿಗಾಗಿ ಉಳಿಸಿ ಸಾಯುವುದು ಬೇಡ. ಸ್ವಲ್ಪ ಜೀವನವನ್ನು ಅನುಭವಿಸುವ . ಎಷ್ಟು  ಜನ್ಮ ಸಿಕ್ಕರೂ ಓದಿಮುಗಿಸಲು ಸಾಧ್ಯವಾಗದ ಸಾಹಿತ್ಯ ಭಂಡಾರವೇ ನಮ್ಮಲ್ಲಿದೆ  ಅದನ್ನು ಆಸ್ವಾದಿಸೋಣ . ಈ ಭೂಮಿಯಲ್ಲಿ ನೋಡಲೆಬೇಕಾದಂತಹ ಎಸ್ಟೋ ಸ್ತಳಗಳಿವೆ ಸಾದ್ಯವಾದಸ್ತನ್ನು ನೋಡಿ ಮನಸನ್ನ ತುಂಬಿಕೊಳ್ಳೋಣ . ನಮ್ಮಂತೆ ಜೀವಿಸುವ ಎಸ್ಟೋ ಪ್ರಾಣಿ , ಪಕ್ಷಿಗಳಿವೆ ಅವುಗಳ ಬಗ್ಗೆ ಅರಿಯೋಣ.ಹೀಗೇ ಜೀವನುತ್ಸಾಹ ದಿಂದ ಬದುಕಲು ತುಂಬಾ ವಿಷಯಗಳು ನಮ್ಮಲ್ಲಿವೆ.ನಮಗೆ ಇಷ್ಟವಾದ ವಿಷಯದಲ್ಲಿ ತಲ್ಲಿನರಾಗಿ , ಅದರಲ್ಲಿನ ಸುಖವನ್ನು ಅನುಭವಿಸುತ್ತ ನಾವು ಜೀವನವನ್ನು ನಡೆಸಬೇಕು  ಅನ್ನುವುದು ನನ್ನ ಆಸೆ. 


ಈ ಬಗ್ಗೆ ನೀನೇನಂತಿ...? 

                                                                                                                                            ಇತಿ  ನಿನ್ನ 
                                                                                                                                             ನರಹರಿ 
                                                                                                               

ಕಾಮೆಂಟ್‌ಗಳಿಲ್ಲ:

ನನ್ನ ಬಗ್ಗೆ

ನನ್ನ ಫೋಟೋ
ಹೊಟ್ಟೆ ಮತ್ತು ಬಟ್ಟೆಗಾಗಿ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತಿದ್ದೇನೆ.ಕತೆ,ಕವಿತೆ,ಕಾದಂಬರಿಗಳೆಂದರೆ ನನ್ನ ಪ್ರೇಯಸಿಯರಿದ್ದಂತೆ.ಹಳೆ ಹಾಡುಗಳ ಹುಚ್ಚ (ಹಾಗಂತ ಹೊಸ ಹಾಡುಗಳ ಬಗ್ಗೆ ಕಂಪ್ಲೇಂಟ್ ಇಲ್ಲ).ಬೇಸರದ ಹಾಡುಗಳೆಂದರೆ ಮತ್ತೂ ಇಷ್ಟ .

ನನ್ನ ಬ್ಲಾಗ್ ಪಟ್ಟಿ