ಭಾನುವಾರ, ಏಪ್ರಿಲ್ 4, 2010

ಮೌನ ಪ್ರೀತಿ

ಇಷ್ಟ ಪಟ್ಟವರನ್ನು ಮನದಲ್ಲೇ ಪ್ರೀತಿಸುತ್ತಾ , ಅವರು ನಮ್ಮವರಾಗುತ್ತಾರೆಂಬ ವಿಶ್ವಾಸದಿಂದ ಮನದಲ್ಲೇ ಅವರನ್ನು ಪೂಜಿಸುತ್ತಾ ಇರುವುದು ಎಷ್ಟು ಸರಿ. ನೀನು ನನಗೆ ತುಂಬಾ ಇಷ್ಟವಾಗಿದ್ದಿಯ... ಅನ್ನುವ ಮನದ ಬಯಕೆಯನ್ನು ಅರುಹದೆ ಮನದಲ್ಲೇ ಅವರಿಗೊಂದು ಪ್ರೇಮ ಪತ್ರ ಹಾಕಿದರೆ ಅವರು ನಮ್ಮವರಾಗುತ್ತಾರ ?, ಈ ಮೌನ ಪ್ರೀತಿ ಸರಿಯೇ, ಸಹನಿಯವೇ ?


ಸರಿಯೋ- ತಪ್ಪೋ, ಸಹನಿಯವೋ- ಅಸಹನಿಯವೋ, ಈ ಮೌನ ಪ್ರೀತಿ ಒಂದು ಹಂತದವರೆಗೆ ಮುದ ನೀಡುತ್ತಾ ಇರುತ್ತದೆ .ಅವಳು ನನ್ನವಳೆಂಬ ಭಾವನೆಯೇ ಸಾಕು ನಮ್ಮ ಮನಸ್ಸು ಕುಣಿದಾಡಲು.ಈ ಭಾವನೆಯೇ ನಮಗೆ ಪ್ರೀತಿ ಪಾತ್ರರ ಕ್ರಿಯೆಗೆ ಪ್ರತಿಕ್ರಿಯೆ ನೀಡಲು ಪ್ರೇರೇಪಿಸುತ್ತದೆ .ಅವಳ ನಗುವಿಗೆ ಪ್ರತಿಯಾಗಿ ನಮ್ಮಲ್ಲೂ ನಗು ಮೂಡುತ್ತದೆ, ಅವಳು ಅತ್ತರೆ ನಮ್ಮ ಮನಸ್ಸೂ ಬಿಕ್ಕುತ್ತೆ, ಅವಳು ಉದಾಸೀನತೆಯಿಂದ ಇದ್ದರೆ ನಮ್ಮ ಮನಸ್ಸೂ ಖುಷಿಯಿಂದ ಉದಾಸೀನವಾಗಿ ಬಿಡುತ್ತೆ .ಕನಸಿನಲ್ಲಿ ಆಕೆಯೊಂದಿಗೆ ಹೆಜ್ಜೆಗೆ ಹೆಜ್ಜೆ ಹಾಕಿ ನಡೆಯುವಾಗ ಆಕೆಯ ಕಾಲಿನ ಗೆಜ್ಜೆಯ ಸದ್ದು ನಮ್ಮನ್ನು ಪ್ರಪುಲ್ಲ ಗೊಳಿಸುತ್ತದೆ, ತುಟಿಯಂಚಿನಲ್ಲಿ ನಗುವಿನ ಗೆರೆ ಮೂಡಿಸುತ್ತದೆ.


ಈ ಕಲ್ಪನೆಯ ಪ್ರಪಂಚದಲ್ಲಿ ಆಕೆಯೊಂದಿಗೆ ಹರಟುವ ನಾವು  ಅದು ನಿಜವೋ ಎಂಬಂತೆ ಕ್ಷಣ ಕ್ಷಣ ಅದನ್ನೇ ನೆನೆದು ಸಂಬ್ರ್ಹಮಿಸುತ್ತಿರುತ್ತೇವೆ .ಕನಸಿನ ಈ ಮೌನ ಮಾತುಗಳು ಮದುರವಾಗಿ ನಮ್ಮನ್ನು ಕೊಲ್ಲುತ್ತಿರುತ್ತವೆ. ಅದರೂ ಇದು ಸಹನೀಯವೇ .ಅದಕ್ಕೆ ಇರಬೇಕು ಜಯಂತ್ ಅವರು 'ಕೊಲ್ಲು ಹುಡುಗಿ ಒಮ್ಮೆ ನನ್ನ ಹಾಗೆ ಸುಮ್ಮನೆ...'ಅಂತ ಹಾಡು ಬರೆದು ನಮ್ಮ ಕಲ್ಪನೆಗೆ ಜೊತೆಯಾದುದು.ಹೀಗೆ ಆಕೆಯ ಕ್ರಿಯೆಗೆ ಪ್ರತಿಕ್ರಿಯೆ ಯಾಗುವ ಭರದಲ್ಲಿ ನಾವು ನಮ್ಮನ್ನೇ ಮರೆತು ಬಿಡುತ್ತೇವೆ.ಈ ಮರೆವು, ಅವಳೆಡೆಗಿನ ಸೆಳೆತವೂ ಎಂದಿಗೂ ಉಳಿಯುವ , ಕಾಡುವ ನೆನಪಾಗಿ ಉಳಿದು ಬಿಡುತ್ತದೆ .


ಮೇಲಿನ ಎಲ್ಲಾ ಮಾತುಗಳು ಮೌನ ಪ್ರೀತಿಯ ಒಂದು ಹಂತದ್ದಾಯಿತು.ಕೆಲವರು, ಕೆಲವೇ ಕೆಲವರು ಈ ಹಂತವನ್ನು ದಾಟಿ ತಮ್ಮ ಬಯಕೆಯನ್ನು ತಾವು ಇಷ್ಟ ಪಟ್ಟವರಲ್ಲಿ ನಿವೇದಿಸಿಕೊಳ್ಳುತ್ತಾರೆ.ಹೀಗೆ ಮನದಿಚ್ಚೆ ನಿವೇದಿಸಿ ಅವರು ತಮ್ಮ ಪ್ರೇಮದಲ್ಲಿ ಯಶಸ್ವಿಯಾಗಬಹುದು ಅಥವಾ ವಿಫಲವಾಗಬಹುದು.ಅದು ಏನೇ ಇರಲಿ ಹೆಚ್ಚಿನ ಸಂಧರ್ಬದಲ್ಲಿ ಈ ಮೌನ ಪ್ರೀತಿ ಗರ್ಭದಲ್ಲೇ ಸತ್ತು ಬಿಡುತ್ತದೆ.ಆದರೂ ಅದರಬಗ್ಗೆ ನಾವು ಹೆಚ್ಚಾಗಿ ದುಃಖ ಪಡುವುದಿಲ್ಲ.ಯಾಕೆಂದರೆ ಈ ಮೌನ ಪ್ರೀತಿ ಇಬ್ಬರಲ್ಲೂ ಏಕ ಕಾಲಕ್ಕೆ  ಹುಟ್ಟುವುದು ಮತ್ತು ಅದನ್ನು ಪರಸ್ಪರರಲ್ಲಿ ನೀವೇದಿಸಿಕೊಳ್ಳುವುದು  ತುಂಬಾ ದೂರದ ಮಾತು ಅನ್ನುವುದು ನಮಗೆ ಗೊತ್ತಿರುತ್ತದೆ.ಹಾಗಾಗಿ ಮೌನ ಪ್ರೀತಿಯ ಒಂದು ಹಂತದಲ್ಲಿ ನಾವು ನಮ್ಮನ್ನೇ ಈ ಕೆಳಗಿನಂತೆ ಸಮಾಧಾನಿಸಿಕೊಳ್ಳುತ್ತೇವೆ:


हमने भी किसीसे प्यार किया था,
रहो में खड़े इंतज़ार किया था ,
भूल उनकी नहीं भूल हमारी थी ,
क्यों की उन्होंने हमसे नहीं ,
हमने उनसे प्यार किया था .


ಇಲ್ಲಿಗೆ ಮೌನ ಪ್ರೀತಿ ವಾಸ್ತವವನ್ನು ಅರಿಯುವ ಹಂತಕ್ಕೆ ಬಂದು ,ವಾಸ್ತವಕ್ಕೆ ತಲೆ ಬಾಗಿ ತನ್ನಸ್ತಕ್ಕೆ ತಾನು ಮಾಯವಾಗಿ ಬಿಡುತ್ತದೆ.ಮುಂದೆ ಉಳಿಯುವುದು ಬರಿ ನೆನಪುಗಳಸ್ತೆ , ಹೇಗಾದರು ಸರಿ ಮರೆಯಬೇಕೆನ್ನುವ ನೆನಪುಗಳು.



ಕಾಮೆಂಟ್‌ಗಳಿಲ್ಲ:

ನನ್ನ ಬಗ್ಗೆ

ನನ್ನ ಫೋಟೋ
ಹೊಟ್ಟೆ ಮತ್ತು ಬಟ್ಟೆಗಾಗಿ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತಿದ್ದೇನೆ.ಕತೆ,ಕವಿತೆ,ಕಾದಂಬರಿಗಳೆಂದರೆ ನನ್ನ ಪ್ರೇಯಸಿಯರಿದ್ದಂತೆ.ಹಳೆ ಹಾಡುಗಳ ಹುಚ್ಚ (ಹಾಗಂತ ಹೊಸ ಹಾಡುಗಳ ಬಗ್ಗೆ ಕಂಪ್ಲೇಂಟ್ ಇಲ್ಲ).ಬೇಸರದ ಹಾಡುಗಳೆಂದರೆ ಮತ್ತೂ ಇಷ್ಟ .

ನನ್ನ ಬ್ಲಾಗ್ ಪಟ್ಟಿ