ನಿರರ್ತಕ ಜೀವನ ಅಂದಕೂಡಲೇ ನರಹರಿಯಲ್ಲಿ ಪ್ರಶ್ನೆಯೊಂದು ಹುಟ್ಟಿತು .ಜೀವನ , ಸಮರ್ಪಕ ಮತ್ತು ನಿರರ್ತಕವಾಗುವುದು ಹೇಗೆ.ಸಾಂಸಾರಿಕ ಜೀವನ ನೋಡಿದಾಗ ನನಗೆ ಅನ್ನಿಸುತದೆ ಅದು ನಿರರ್ತಕ ಅಂತ. ಅದು ಕಾರಣವಿಲ್ಲದೆ ಅಲ್ಲ .ಅಲ್ಲವೇ ಮತ್ತೆ, ಜಗತ್ತಿನಲ್ಲಿ ಮೊದಲು ಹುಟ್ಟಿದ ಜೀವಿಯ ತರವೇ ನಾವಿಂದೂ ಜೀವಿಸುತ್ತಿದ್ದೇವೆ ;ಸವ್ಕರ್ಯ, ಮೌಲ್ಯಗಳು ಬದಲಾಗಿರಬಹುದು ಆದರೆ ಜೀವಿಸುವ ರೀತಿ ಮಾತ್ರ ಅದೇ . ಹಸಿವು ತಣಿಸಲು ದುಡಿಮೆ , ದುಡಿಮೆಯಿಂದಾದ ಆಯಾಸ ತಣಿಸಲು ನಿದ್ದೆ - ಇದೇ ಚಕ್ರ ನಿರಂತರವಾಗಿ ತಿರುಗಿ -ತಿರುಗಿ ಕಾಲವೆಸ್ತಾಯ್ತೋ .ಮಾಡಿದ್ದನ್ನೇ ಮಾಡುವುದರಿಂದಾಗಿ ಸಂಸಾರ ನಿರರ್ತಕ ಅಂತೆನಿಸಿಕೊಳ್ಳುವುದಿಲ್ಲ ಬದಲಾಗಿ ಹೀಗೇ ಮಾಡುವುದರಿಂದ ಏನೇನೂ ಆಗುವುದಿಲ್ಲ ಅನ್ನುವ ಕಾರಣಕ್ಕಾಗಿ ಸಂಸಾರ ನಿರರ್ತಕ.
ಕಾಮ , ಸಂಬಂಧ , ಪ್ರೀತಿ , ಒಲವು , ಕರುಣೆ ಇವೆಲ್ಲವೂ ಸಂಸಾರದಲ್ಲಿ ನಮ್ಮನ್ನು ಹಚ್ಚುವ ಅಂಟುಗಳು.ಈ ಅಂಟಿನಿಂದ ನಾವು ದೂರ ಇದ್ದರೆ ಸಂಸಾರದ ನಂಟು ನಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲ -ಹೀಗಾದಾಗ ನಮಗೆ ನಿಜವಾದ ಜೀವನವನ್ನು ಜೀವಿಸಬಹುದು. ಮೇಲೆ ಹೇಳಿದ ಅಂಟುಗಳಿಲ್ಲದೆ ಜೀವಿಸುವುದರಿಂದ ನಾವು ಹಸಿವು- ದುಡಿಮೆ- ವಿಶ್ರಾಂತಿಯ ಚಕ್ರದಿಂದ ಹೊರಬಾರದಿದ್ದರೂ ಸಂಸಾರದಲ್ಲಿದ್ದು ಸಾಧಿಸುವುದಕ್ಕಿಂತ ಹೆಚ್ಚಿನದನ್ನು ಸಾಧಿಸಬಹುದು .ನರಹರಿ ತನ್ನಲ್ಲೇ ಕೇಳಿಕೊಂಡ ನಾನೀಗ ಯಾವ ಸಾಧನೆಯ ಬಗ್ಗೆ ಮಾತಾಡುತ್ತಿದ್ದೇನೆ ಎಂದು. ಸಂಸಾರದಿಂದ ದೂರವಾಗಿ ದೇವರ ಒಲಿಸಿಕೊಂಡು ಮುಕ್ತಿ ಪಡೆಯುವ ಯೋಜನೆಯಂತು ತನ್ನಲ್ಲಿಲ್ಲ .ಒಂದು ಸಮಾಜಕ್ಕೆ ಗುರುವಾಗಿ ಆಸ್ತಿಗಳಿಸಿಕೊಳ್ಳುವ ಆಸೆಯೂ ತನ್ನಲ್ಲಿಲ್ಲ.ಹಾಗಾದರೆ ಹೀಗೇ ಸಂಸಾರದಿಂದ ಮುಖ್ತವಾಗಿದ್ದು ತಾನು ಮಾಡುವುದಾದರೂ ಏನು.ಅವನು ನಕ್ಕ. ಮೊದಮೊದಲು ಒಳಗೊಳಗೆ ನಕ್ಕ , ಮತ್ತೆ ತುಟಿಯ ಮೇಲೆ ಒಂದಿಷ್ಟು ನಕ್ಕ ಆಮೇಲೆ ಗಹಗಹಿಸಿ ನಕ್ಕ .ಅವನಿಗೆ ತಿಳಿಯಿತು ತಾನ್ಯಾಕೆ ಹೀಗೇ ಸಂಸಾರದಿಂದ ಮುಖ್ತನಾಗಬೇಕೆಂದು ಬಯಸಿದ್ದು ಎಂದು.
ಮೌನವಾಗಿ ಕುಳಿತು ಗಾಳಿಗೆ ಮುಖವೊಡ್ಡಿ ಕುಳಿತು ಸಮುದ್ರದ ನಿರಂತರ ಅಲೆಗಳ ನೋಡಿ ಅವನು ಹೇಳಿದ -ಹೌದು ನಾನು ಎಲ್ಲದರಿಂದ ಮುಖ್ತನಾಗಬೇಕು .ಹಾಗಾದಾಗ ಮಾತ್ರ ನಾನು ಸ್ವಾತಂತ್ರ್ಯವನ್ನು ಅನುಭವಿಸಬಹುದು.ಈ ಜೀವನಕ್ಕೊಂದು ಅರ್ತವಿಲ್ಲ ;ಹುಟ್ಟು -ಸಾವಿನ ನಡುವಿನ ಈ ನಾಲ್ಕು ದಿನದ ಆಟದಲ್ಲಿ ಅರ್ಥ ಹುಡುಕುವುದು ಮೂರ್ಖತನ.ಇಲ್ಲಿ ಏನೇನೋ ಮಾಡಿದರೂ ಲೆಕ್ಕಕ್ಕಿಲ್ಲ , ಏನೇನೂ ಮಾಡದಿದ್ದರೂ ಲೆಕ್ಕಕ್ಕಿಲ್ಲ . ಇಲ್ಲಿರುವ ಲೆಕ್ಕ ಶೂನ್ಯದ್ದು ಮಾತ್ರ . ಈ ಶೂನ್ಯದಲ್ಲಿ ಅನಂತವನ್ನು ಹುಡುಕುವುದೂ ಮೂರ್ಖತನ , ಶೂನ್ಯದಲ್ಲಿ ಏನೇನೂ ಇಲ್ಲ ಅಂತ ಪರಿತಪಿಸುವುದೂ ಮೂರ್ಖತನ. ಅರ್ಥಮಾಡಬೇಕಾಗಿರುವುದು ಇಲ್ಲಿರುವುದು ಶೂನ್ಯ ಅಂತ ಮಾತ್ರ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ