ಮಂಗಳವಾರ, ಏಪ್ರಿಲ್ 27, 2010

ಪತಂಗ



ಕಣ್ಣು ಕಾಡುತ್ತದೆ

ನಗು ಸೆಳೆಯುತ್ತದೆ
ನನ್ನ ತುಟಿಯಂಚಿನ ನಗು
ಮೌನದಲ್ಲೇ  ಕೇಳುತ್ತದೆ-
ಆಗಬಹುದೋ ಇವಳು ?.
ಬೇಡ ಎನ್ನುತ್ತೆನೆಯೇ ನಾನು ,
ನನ್ನದೂ ಮೌನ ಒಪ್ಪಿಗೆ.
 ಅರೆ ಘಳಿಗೆಯಾಗಿಲ್ಲ
ಮುಂದಿದ್ದಾಳೆ ಬೇರೊಬ್ಬಳು.
ಈಗ ಇವಳ ನಡೆ , ಜಡೆ ...ಎಲ್ಲವೂ ಸೊಗಸು :
ಮನಸ್ಸಾಗುತ್ತದೆ  ಪತಂಗ.
ಎಷ್ಟು ಹೂವುಗಳು ಈ ಹೂದೋಟದಲ್ಲಿ
ಎಲ್ಲವೂ ಒಂದಕ್ಕಿಂತಾ ಒಂದು ಚೆಲುವು
ಪತಂಗಕ್ಕೋ ಸದಾ ಹೊಯ್ದಾಡುವ ಒಲವು .

(photo: justfashionistas.com/.../)

ಕಾಮೆಂಟ್‌ಗಳಿಲ್ಲ:

ನನ್ನ ಬಗ್ಗೆ

ನನ್ನ ಫೋಟೋ
ಹೊಟ್ಟೆ ಮತ್ತು ಬಟ್ಟೆಗಾಗಿ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತಿದ್ದೇನೆ.ಕತೆ,ಕವಿತೆ,ಕಾದಂಬರಿಗಳೆಂದರೆ ನನ್ನ ಪ್ರೇಯಸಿಯರಿದ್ದಂತೆ.ಹಳೆ ಹಾಡುಗಳ ಹುಚ್ಚ (ಹಾಗಂತ ಹೊಸ ಹಾಡುಗಳ ಬಗ್ಗೆ ಕಂಪ್ಲೇಂಟ್ ಇಲ್ಲ).ಬೇಸರದ ಹಾಡುಗಳೆಂದರೆ ಮತ್ತೂ ಇಷ್ಟ .

ನನ್ನ ಬ್ಲಾಗ್ ಪಟ್ಟಿ