ಶನಿವಾರ, ಮೇ 1, 2010

ಹೇಳಿ ಹೋಗು ಕಾರಣ ...

ನನ್ನ ಮನದ ಮುಗಿಲಲ್ಲಿ ಪ್ರೇಮದ ಗಾಳಿಪಟವನ್ನು ಹಾರಿಸಿ , ಅದರ ಸೊಬಗನ್ನು ನೋಡು ಎಂದು ಕಣ್ಣಲ್ಲೇ ಅಪ್ಪಣೆ ಕೊಡಿಸಿದವಳು ನೀನು.ನನ್ನಲ್ಲಿ ಪ್ರೇಮದ ಚಿತ್ತಾರ ಮೂಡಿಸಿದ ಚೆಲುವೆ ನೀನು.ಆದರೆ ಇಂದು ಗಾಳಿಪಟದಂತೆ ನೀನೂ ಆಕಾಶದಲ್ಲಿ ಲೀನವಾಗಿ ಹೋಗಿದ್ದಿಯಾ.ಅದೇನೇನು ಮಾಡಿದರು ನನ್ನಿಂದ ನಿನ್ನ ಮರೆಯಲಾಗುತ್ತಿಲ್ಲ . ಹಾಗಂತ ನಿನ್ನಿಂದ ನಾನು ಇದನ್ನು ನೀರೀಕ್ಷಿಸುವುದಿಲ್ಲ , ಹುಡುಗಿಯರೇ ಹೀಗೆ ಅಂತ ನನ್ನ ನಾನು ಸಮಾಧಾನಿಸಿಕೊಳ್ಳುತ್ತಿದೇನೆ.ಈಗ ದೇವರು ಕೂಡಾ ನನ್ನ ಸಹಾಯಕ್ಕೆ ಬಂದಿದ್ದಾನೆ ,ನನಗೆ ಸಾಕಸ್ತು ಮರೆವನ್ನ ಕರುಣಿಸಿ .ಹೀಗಾಗಿ ಅನಾಯಾಸವಾಗಿ ನಿನ್ನ ಮರೆಯಬಹುದೇನೋ , ನೀನು ಮಾಡಿದಂತೆ .ಆದರೆ ಈ ಹುಚ್ಚು ಖೋಡಿ ಮನಸ್ಸು , 'ಅವಳನ್ನು ಮರೆಯಲು ಏನಾದರು ಕಾರಣ ಕೊಡು ಎಂದು ಒಂದೇ ಸಮನೆ ನನ್ನಪೀಡಿಸುತಿದೆ , ತಪ್ಪು ನಿನ್ನದೇ' ಎಂದು ನನ್ನ ಚುಚ್ಚುತಿದೆ . ನನ್ನ ಬಾಳಿನ ಪಯಣದಲ್ಲಿ ಸಾಥ್ ನೀಡದಿದ್ದರೂ ಪರವಾಗಿಲ್ಲ ಗೆಳತಿ , ನಾನು ಬೇಡವಾದ ಕಾರಣವನ್ನಾದರೂ ಹೇಳಿಬಿಡು.


ನನ್ನದೇ ಆದ ಜಗದಲ್ಲಿ ಮುಳುಗಿದ್ದವನಿಗೆ ಪ್ರೇಮದ ಬಲೆ ಬೀಸಿದವಳು ನೀನು . ನನ್ನ ಬಗ್ಗೆ ಗೆಳೆಯರಲ್ಲಿ , " ಯಾರೀತ ... ? " ಎಂದು ಕೇಳಿ, ನನ್ನ ಬಗ್ಗೆ ತಿಳಿದುಕೊಂಡು ಸಂಭ್ರಮಿಸಿದವಳು ನೀನು .ನನ್ನವನಾಗುವೆಯಾ ಎಂದು ನೀನು ಕಣ್ಣಲ್ಲೇ ಪ್ರಶ್ನೆ ಕೇಳಿದಾಗ ನಾನು ನಗುವಿನಲ್ಲೇ ಸಮ್ಮತಿಸಿದೆ , ಆಗ ನಿನ್ನ ಕೆನ್ನೆಯ ಮೇಲೆ ಮೂಡಿದ ಡಿಂಪಲ್ ನಗೆ ನನ್ನನ್ನು ಇನ್ನು ಕಾಡುತಿದೆ ಕಣೆ . ನಿನ್ನ ದೇಹವನ್ನು ಮುಚ್ಚುತಿದ್ದ ಆ ಮುದ್ದಾದ ಚೂಡಿ, ಆ ನಿನ್ನ ಕೊಗಿಲೆದ್ವನಿ, ನನ್ನಲ್ಲಿ ಉತ್ಸಾಹ ಚಿಮ್ಮಿಸುತಿದ್ದ ಆ ನಿನ್ನ ನಗೆ , ಗೆಳತಿಯರೊಂದಿಗಿನ ಪಿಸು ಮಾತು , ಅಪರೂಪಕ್ಕೆ ನನ್ನಲ್ಲಿ ಆಡಿದ ಮಾತುಗಳು ,ನಿನ್ನ ಆಕರ್ಷಣೀಯ ನಯನ... ಒಂದೇ ಎರಡೇ ಎಲ್ಲವು ಸೇರಿ ನನ್ನ ಇಂದಿಗೂ ಕೊಲ್ಲುತಿವೆ ಕಣೆ. ಆದಸ್ಟು ಬೇಗ ನನ್ನ ಕಾಪಾಡು .


ಇತಿ ನಿನ್ನ ರಂಜು


1 ಕಾಮೆಂಟ್‌:

jagadi ಹೇಳಿದರು...

mind dis superior and also imperieor


think passive leave negative

ನನ್ನ ಬಗ್ಗೆ

ನನ್ನ ಫೋಟೋ
ಹೊಟ್ಟೆ ಮತ್ತು ಬಟ್ಟೆಗಾಗಿ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತಿದ್ದೇನೆ.ಕತೆ,ಕವಿತೆ,ಕಾದಂಬರಿಗಳೆಂದರೆ ನನ್ನ ಪ್ರೇಯಸಿಯರಿದ್ದಂತೆ.ಹಳೆ ಹಾಡುಗಳ ಹುಚ್ಚ (ಹಾಗಂತ ಹೊಸ ಹಾಡುಗಳ ಬಗ್ಗೆ ಕಂಪ್ಲೇಂಟ್ ಇಲ್ಲ).ಬೇಸರದ ಹಾಡುಗಳೆಂದರೆ ಮತ್ತೂ ಇಷ್ಟ .

ನನ್ನ ಬ್ಲಾಗ್ ಪಟ್ಟಿ