ಶನಿವಾರ, ಮೇ 1, 2010

ಆಡದ ಮಾತಿನ ಭಾರ


ನನ್ನ ಭಾವನೆಗಳಿಗೆ ಕವಿತೆಯ
ರೂಪ ಕೊಟ್ಟು ಖಾಲಿಹಾಳೆಯಲ್ಲಿ
ಇಳಿಸಿಬಿಡುತಿದ್ದೆ.
ಅದ ಓದಿ , ಮೆಚ್ಚಿ  ಆಕೆ ಹೇಳುವ 
ಹೊಗಳಿಕೆಯ ಮಾತಿಗೆ 
ನಾ ಮಾತನ್ನೇ ಮರೆಯುತಿದ್ದೆ .
ನಾ ಮತ್ತೆ ಮತ್ತೆ 
ಅದೇ ಕವಿತೆಯ, ಖಾಲಿ ಹಾಳೆಯ 
ಮೊರೆಹೋಗಿ ನನ್ನ 
ಭಾವನೆಗಳ ಅರಹುತಿದ್ದೆ .
ಒಂದು ದಿನ ಆಕೆ ಮತ್ತೊಬ್ಬನ 
ತೋಳಲ್ಲಿ ಸೆರೆ ಯಾಗಿದ್ದನ್ನು ಕಂಡು
ನಾ ಏನನ್ನೋ ಹೇಳಲು ಪ್ರಯತ್ನ ಪಟ್ಟೆ: 
ನಾ ಮಾತ ಮರೆತಿದ್ದೆ.
ಕವಿತೆಯ ಬರೆದು 
ಆಕೆಯ ಕೈಗಿಡೋಣವೆಂದು 
ಎಲ್ಲೆಲ್ಲಿಂದಲೋ ಭಾವನೆಗಳ ತಂದು 
ಹಾಳೆಯಲ್ಲಿ ಅಕ್ಷರದ ಚಿತ್ತಾರ ಮೂಡಿಸಿದೆ.
ಹಾಳೆ ಕವಿತೆಯಿಂದ ತುಂಬಿದಾಗ 
ತಲೆ ಎತ್ತಿ ನೋಡಿದೆ :
ಅವಳ ನೆರಳೂ ಕಾಣಸಿಗಲಿಲ್ಲ.
ಆಡದ ಮಾತಿನ ಭಾರವೆಲ್ಲಾ
ಕಣ್ಣಿರಾಗಿ ಹರಿದು 
ನನ್ನ ಜೀವ ಹೂವಿನಂತಾಯಿತು

ಕಾಮೆಂಟ್‌ಗಳಿಲ್ಲ:

ನನ್ನ ಬಗ್ಗೆ

ನನ್ನ ಫೋಟೋ
ಹೊಟ್ಟೆ ಮತ್ತು ಬಟ್ಟೆಗಾಗಿ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತಿದ್ದೇನೆ.ಕತೆ,ಕವಿತೆ,ಕಾದಂಬರಿಗಳೆಂದರೆ ನನ್ನ ಪ್ರೇಯಸಿಯರಿದ್ದಂತೆ.ಹಳೆ ಹಾಡುಗಳ ಹುಚ್ಚ (ಹಾಗಂತ ಹೊಸ ಹಾಡುಗಳ ಬಗ್ಗೆ ಕಂಪ್ಲೇಂಟ್ ಇಲ್ಲ).ಬೇಸರದ ಹಾಡುಗಳೆಂದರೆ ಮತ್ತೂ ಇಷ್ಟ .

ನನ್ನ ಬ್ಲಾಗ್ ಪಟ್ಟಿ