ನೀನು ಅವಳನ್ನು ಪ್ರೀತಿಸುತಿದ್ದೆಯಾ ?.
ಪ್ರಶ್ನೆಗೆ ಉತ್ತರವಿತ್ತಾದರೂ ಈ ಪ್ರಶ್ನೆ ಅವನಿಗೆ ಪ್ರಸ್ತುತವೆನಿಸಲಿಲ್ಲ .ನಾಲ್ಕು ಮೆಸೇಜ್ಗಳಲ್ಲಿ ಅರಿತು ಕೊಂಡ , ಎರಡು ನಗೆಗೆ ಸೋತ ಸುಳ್ಳಿನಲ್ಲಿ -ritual ನಂತೆ ನಡೆಯದೆ ಮಾತು ನೇರವಾಗಿ ಈ ವಿಷಯದ ಕಡೆಗೆ ಬಂದಿರುವುದು ಅವನಿಗೆ ಆಶ್ಚರ್ಯವೆನಿಸಿತು.
ಹಾಗಾಗಿ ಪ್ರಶ್ನೆಯ ಗಾಂಭೀರ್ಯವನ್ನೂ ಮರೆತು ಅವನು ನಕ್ಕ.
ಯಾಕೆ ನಗುತ್ತಿದ್ದಿಯಾ...?
ನಗುವಿನ ಹಿಂದಿನ ಕಾರಣ ಹೆಚ್ಚಿನ ಸಂದರ್ಭದಲ್ಲಿ ಸುಲಭದಲ್ಲಿ ಗೊತ್ತಾಗಿಬಿಡುತ್ತದೆ. ಅದಲ್ಲದ ನಗೆ ಎದುರಿಗಿದ್ದವರನ್ನ ಅಪಮಾನಿಸುತ್ತೆ ಅನ್ನುವುದನ್ನು ಅರಿತು ಅವನು ಮೌನಿಯಾದ.
...
ಅವಳದೂ ಮೌನ.
ಮೌನಕ್ಕೆ ಕಾರಣನಾದ ದೀಪೂವೇ ಮೌನವನ್ನು ಮುರಿಯುತ್ತಾ - " ಆಶ್ಚರ್ಯವಾಯಿತು ! ಕೆಲ್ಸ ಹೇಗಿದೆ , studies ಚೆನ್ನಾಗಿ ನಡಿತಿದ್ಯಾ ಅನ್ನೋ ಟಾಪಿಕ್ಗೇ ಸೀಮಿತವಾಗಿ , ಮಾತು ಮುಗಿದಮೇಲೆ ಮೌನವನ್ನು ಹೊಕ್ಕು ನಡುವೆ ನಗುವನ್ನು ತೊಟ್ಟು ಸುಮ್ಮನಾಗಬೇಕಾದ ನಾವು ಹೀಗಿಲ್ಲ .ಬಹುಷ್ಯ ಇದೆಲ್ಲ ನಿನ್ನ ಪ್ರಶ್ನೆಯಿಂದಾಗಿರಬಹುದು .ಹೌದು ಯಾಕಾಗಿ ಈ ಪ್ರಶ್ನೆ , ಸೀಮಾ ?" .
ಈ ಪ್ರಶ್ನೆ ಬರೇ ಉತ್ತರವನ್ನು ನಿರೀಕ್ಷಿಸುತಿಲ್ಲ . ಮತ್ತೇನನ್ನೋ ಹೇಳಲು ಬಯಸುತ್ತಿದೆ...
ಅಂದರೆ ...
ವಿವರಿಸಿ ಹೇಳುವ ಶಕ್ತಿ ನನ್ನಲ್ಲಿಲ್ಲ . ತಿಳಿದುಕೊಳ್ಳುವ ಯುಕ್ತಿ ನಿನ್ನಲ್ಲಿದೆ ಅಂದುಕೊಳ್ಳುತ್ತೇನೆ .
ಯುಕ್ತಿ...! ಮನಸೆನ್ನುವುದು ಲಗಾಮಿಲ್ಲದ ಹುಚ್ಚು ಕುದುರೆ ಈ ಹುಚ್ಚು ಕುದುರೆಯಿಂದ ಹುಚ್ಚು ಕಲ್ಪನೆಗಳಲ್ಲದೆ ಬೇರೇನನ್ನು ನೀನು ನಿರೀಕ್ಷಿಸುತ್ತಿ.
ಹುಚ್ಚು ಕಲ್ಪನೆಗಳೂ ಕೆಲವೊಮ್ಮೆ ನಿಜವಾಗುತ್ತವೆ .ತಿಳಿದಿರಲಿ.
ಆದರೂ... ಇಂಥ ಹುಚ್ಚು ಕಲ್ಪನೆಗೆ ಕಾರಣ...?
ಎಲ್ಲಾ ಪ್ರಶ್ನೆಗಳಿಗೂ ಉತ್ತರಗಳಿರುವುದಿಲ್ಲ. ಎಲ್ಲಾ ಉತ್ತರಗಳಿಗೂ ಸಮಜಾಯಿಶಿಗಳಿರುವುದಿಲ್ಲ- ಅದು ನಿಜ ಅಸ್ಟೆ...
ಈಗ ಪ್ರಶ್ನೆಯ ಕಡೆಗೆ ಬರೋಣ. ಭವಿಷ್ಯದ ಕನಸಿಗಾಗಿ ಭೂತದ ನೆನಪಿನ ಅಗೆಯುವಿಕೆ ಯಾಕೆ ...
ಎಸ್ಟೆ ಉದಾರಿ ಎಂದುಕೊಂಡರೂ ಈ ಮನಸ್ಸೇನ್ನುವುದು ಒಳಗೊಳಗಿಂದ self centric .
ಇದು ಅಪ್ಪುವ ಬಯಕೆಯ self centrikko ಅಥವಾ ಉಸಿರು ಕಟ್ಟಿಸುವ ಬಗೆಯ self centrikko ?.
ಏನಂತ ಅನ್ನಿಸುತ್ತೆ...?
ಗೊತ್ತಿಲ್ಲ...
ನನ್ನ ಕಣ್ಣ ನೋಡಿದರೆ ಉತ್ತರ ತಿಳಿದೀತು...
ಅವರಿಬ್ಬರೂ ಮೊದಲಬಾರಿಗೆ ಬಿಡದೆ ಒಬ್ಬರನ್ನೊಬ್ಬರು ನೋಡಿಕೊಂಡರು . ಇವಳು ಅವನ ಕಣ್ಣಲ್ಲಿ ; ಅವನು ಅವಳ ಕಣ್ಣಲ್ಲಿದ್ದ .
ಪ್ರಶ್ನೆ , ಉತ್ತರಗಳು ಅಲ್ಲಿ ಅಪ್ರಸ್ತುತವಾದವು.
1 ಕಾಮೆಂಟ್:
ತುಂಬ ಚೆನ್ನಾಗಿದೆ.. ಎಷ್ಟು ಸಲ ಓದಿದರು ಮತ್ತೆ ಮತ್ತೆ ಓದಬೇಕು ಅನ್ನಿಸುತ್ತದೆ..
ಕಾಮೆಂಟ್ ಪೋಸ್ಟ್ ಮಾಡಿ