ಶನಿವಾರ, ಮೇ 1, 2010

ಜ್ಞಾನ, ಅಜ್ಞಾನ ಮತ್ತು ಭವಿಷ್ಯ....

ದೇವಿಪ್ರಸಾದ ತನ್ನ ಪ್ರಯಾಣದ ಸಮಯದಲ್ಲಿ ಯಾವತ್ತೂ ಸಾಧ್ಯತೆಗಳ ಲೋಕದೊಳಗೆ ಪ್ರವೇಶಿಸುತಿದ್ದ , ಆಗ ಅವನಿಗೆ ಮಾಡಲು ಬೇರೇನೂ ಕೆಲಸವಿಲ್ಲದ ಕಾರಣ .ಹೀಗೆ ಪಯಣದ ಸಮಯದಲ್ಲಿ ಮಾತ್ರ ಅವನು ಇಹದಲ್ಲಿ ಇದ್ದು , ಭೂತ - ಭವಿಷ್ಯಗಳನ್ನು ನೋಡುವುದು , ಅನುಭವಿಸುವುದು .ಬೇರೆ ಸಮಯದಲ್ಲಿ ಒಂದಿಷ್ಟುಆಲೋಚಿಸಲು ಸಿಗದಸ್ಟುಅವನು ಇಹದ ಲವ್ಕಿಕದಲ್ಲಿ ಮುಳುಗಿರುತಿದ್ದ .


ಸಾಧ್ಯತೆಗಳ ಲೋಕದೊಳಗೆ ಪ್ರವೇಶಿಸಿ ಅವನು ನಿರಂತರ ವಿಶ್ಲೇಷಣೆಗಳನ್ನು ಮಾಡುತಿದ್ದ. ಭೂತ -ಭವಿಷತ್ಗಳೆರಡೂ ಅವನ ವಿಶ್ಲೇಷಣೆಯ ವಸ್ತುಗಳಾಗಿದ್ದವು.ಭೂತದಲ್ಲಿ ನಡೆದಿರುವ ವಿಚಾರಗಳನ್ನು ವಿಶ್ಲೇಷಿಸಿ ಅವನು ಅದು ಸರಿಯೋ ಅಲ್ಲವೋ ಅನ್ನುವ ನಿರ್ಧಾರಕ್ಕೆ ಬರುತಿದ್ದ.ಆ ನಿರ್ಧಾರ ಹೆಚ್ಚು- ಕಡಿಮೆ ತಾನು ಹಿಂದೆ ನಡೆದುಕೊಂಡಂತೆ ಅಥವಾ ಮಾಡಿದನ್ನು ಸಮರ್ಥಿಸುವಂತೆ ಇರುತಿದ್ದವು .ತನ್ನಲ್ಲೇ ಅನ್ನುವಂತೆ ಹೀಗೆ ವಿಶ್ಲೇಷಣೆ ನಡೆದ ನಂತರ ಅವನು ಹೇಳಿಕೊಳ್ಳುತಿದ್ದ -'ನಾನು ತಕ್ಕಡಿಯ ತರ ; ಭಾರ ಹೆಚ್ಚು ಇರುವ ಕಡೆಯೇ ನಾನು ವಾಲುವುದು :ಅಂದರೆ ತಾನು ನ್ಯಾಯದ ಪರ ಅಂತ ಅವನ ನಂಬಿಕೆ. ಆದರೆ ಹೀಗೆ ತಕ್ಕಡಿ ಒಂದು ಕಡೆ ಬಾಗಲು ಅವನು ತನ್ನ ಆಲೋಚನಾ ಲಹರಿಯನ್ನು ತಕ್ಕಡಿಗೆ ಸುರಿಯುತಿದ್ದ ಅನ್ನುವುದನ್ನು ತಿಳಿಯದವನಂತೆ ಇದ್ದ ಅಥವಾ ಅದು ಅವನಿಗೆ ತಿಳಿಯದಂತೆ ನಡೆದು ಬಿಡುತಿತ್ತು .ಅವನಿಗೆ ಅಂತ ಅಲ್ಲ ನಮ್ಮೆಲ್ಲರಿಗೂ ಹಾಗೇ -ಎಲ್ಲಾ ಘಟನೆಗಳು ನಮ್ಮ ವಿಚಾರ ಲಹರಿಯ ಪ್ರಕಾರಾನೆ ವಿಶ್ಲೇಷಣೆಗೆ ಒಳ ಪಡುತ್ತವೆ .


ಆದರೆ ಭವಿಷ್ಯದ ವಿಚಾರಕ್ಕೆ ಬಂದರೆ ಅವನು ಸೋಲುತಿದ್ದ .ಭವಿಷ್ಯದ ಬಗ್ಗೆ ಅವನಲ್ಲಿ ತುಂಬಾ ಗೊಂದಲಗಳಿದ್ದುವು. ಭವಿಷ್ಯದಲ್ಲಿ ನಡೆಯಬಹುದಾದ ಘಟನೆಯನ್ನು ಕಲ್ಪಿಸಿಕೊಳ್ಳಲು , ಅರ್ಥ ಮಾಡಿಕೊಳ್ಳಲು ಅವನು ಸೋಲುತಿದ್ದ .ಒಮ್ಮೆ ಹವ್ದೆನಿಸಿದ್ದು ಮತ್ತೊಮ್ಮೆ ಅಲ್ಲವೇ ಅಲ್ಲ ಅಂತ ಅನಿಸುತಿತ್ತು .ಒಮ್ಮೆ ಅವನಿಗೆ ಭವಿಷ್ಯದ ಬಗೆಗಿನ ವಿಚಾರಗಳ ಕುರಿತಾಗಿರುವ ಗೊಂದಲಗಳ , ಹೌದು -ಅಲ್ಲಗಳ ಕಾರಣ ಹುಡುಕಬೇಕೆನಿಸಿತು.ಮಂಥನದ ನಂತರವೂ ಅವನಿಗೆ ಯಾವುದೇ ನಿರ್ದಾರಕ್ಕೆ ಬರಲಾಗಲಿಲ್ಲ .ತನ್ನ ಈ ಲೋಕದಲ್ಲಿ ಜ್ಞಾನ -ಅಜ್ಞಾನಗಳೆರಡೂ ಇದೆ ಅಂತನಿಸುತಿತ್ತು .ಅವನು ತನ್ನಲ್ಲೇ ಕೇಳಿಕೊಳ್ಳುತಿದ್ದ- ನನ್ನ ಈ ಸಾದ್ಯತೆಯ ಲೋಕಕ್ಕೆ ಕಾರಣ ನನ್ನ ಜ್ನಾನವೋ , ಅಜ್ಞಾನವೋ ಎಂದು .ಉತ್ತರ ಸುಲಭದಲ್ಲಿ ಅವನಿಗೆ ಸಿಗಲಿಲ್ಲ .




ಮುಂದೊಂದು ದಿನ ಅವನಿಗೆ ಅರಿವಾಯಿತು ಜ್ಞಾನ , ಅಜ್ಞಾನಗಳೆಲ್ಲವನ್ನು ಮೀರಿದ್ದು ಭವಿಷ್ಯ ಎಂದು .


ಕಾಮೆಂಟ್‌ಗಳಿಲ್ಲ:

ನನ್ನ ಬಗ್ಗೆ

ನನ್ನ ಫೋಟೋ
ಹೊಟ್ಟೆ ಮತ್ತು ಬಟ್ಟೆಗಾಗಿ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತಿದ್ದೇನೆ.ಕತೆ,ಕವಿತೆ,ಕಾದಂಬರಿಗಳೆಂದರೆ ನನ್ನ ಪ್ರೇಯಸಿಯರಿದ್ದಂತೆ.ಹಳೆ ಹಾಡುಗಳ ಹುಚ್ಚ (ಹಾಗಂತ ಹೊಸ ಹಾಡುಗಳ ಬಗ್ಗೆ ಕಂಪ್ಲೇಂಟ್ ಇಲ್ಲ).ಬೇಸರದ ಹಾಡುಗಳೆಂದರೆ ಮತ್ತೂ ಇಷ್ಟ .

ನನ್ನ ಬ್ಲಾಗ್ ಪಟ್ಟಿ