ಶನಿವಾರ, ಮೇ 1, 2010

ಹಿರಿಯರಲ್ಲೊಂದು ಮನವಿ









ನಿಮ್ಮ ಕಾಳಜಿಗಾಗಿ ಧನ್ಯವಾದ .ದಯವಿಟ್ಟು ಇನ್ನಾದರು ನಮ್ಮನ್ನು  ಬಿಟ್ಟುಬಿಡಿ .ನಮಗೂ ಬದುಕುವ ದಾರಿಗೊತ್ತು .ಎಷ್ಟು ದಿನ ಅಂತ ಕೈ ಹಿಡಿದೇ ರಸ್ತೆ ದಾಟಿಸುತ್ತಿರಿ .ಒಂದಲ್ಲ ಒಂದು ದಿನ ನಾವು ನಾವಾಗೇ ರಸ್ತೆ ದಾಟಬೇಕಾದವರು . ಯಾಕಿಸ್ಟು ಹೆದರಿಸಿ ಬಿಡುತ್ತೀರಿ , ಬಿಟ್ಟು ಬಿಡಿ ನಮಗೆ ಹಾಗೇನೂ ಆಗುವುದಿಲ್ಲ .ಒಂದೆರಡು ದಿನ ಕಷ್ಟ ವಾದೀತು . ಕಷ್ಟ ಪಡದೆ ಇಷ್ಟ ಸಿಗುವುದಿಲ್ಲ ಅನ್ನುವ ನೀವೇ ನಮ್ಮನ್ನ ಕಷ್ಟ ಪಡಲು ಬಿಡದಿದ್ದರೆ ಹೇಗೆ ?.


ಎದ್ದು -ಬಿದ್ದು ನಾವು ನಡೆಯಲು ಕಲಿತ ಆ ಕ್ಷಣವನ್ನ ನೀವು ಅಸ್ಟು ಬೇಗ ಮರೆತೆ ಬಿಟ್ಟಿರಾ .ಆಗ ನಿಮ್ಮಲ್ಲಿದ್ದ ತಾಳ್ಮೆ ಈಗ ಎಲ್ಲಿಗೆ ಹೋಯಿತು ? ನಮ್ಮನ್ನ್ಯಾಕೆ ನಮ್ಮಸ್ಟಕ್ಕೆ ನಡೆಯಲು ಬಿಡುತ್ತಿಲ್ಲ .ಉಸಿರಾಡಲು ಕಷ್ಟವಾಗುತ್ತಿದೆ ನಿಮ್ಮ ಕಾಳಜಿಯ ಬಂಧನದಲ್ಲಿ .ನಿಮಗೆ ಬಂಗಾರದ ಪಂಜರ ಸರಿ ಎನಿಸಿರಬಹುದು ಹಾಗಂತ ನಮ್ಮ ರೆಕ್ಕೆಯನ್ನ್ಯಾಕೆ ಮುರಿಯುತ್ತೀರಿ.ನಮಗೆ ಹಾರಬೇಕು , ಬಿಟ್ಟುಬಿಡಿ, ವಿಶಾಲ ಆಕಾಶ ನಮ್ಮನ್ನ ಕರೆಯುತಿದೆ .ಕಾಳಜಿಯ ಹೆಸರಿನಲ್ಲಿ ನಿಮಗೆ ಬೇಕಾದನ್ನ ನಮ್ಮ ಮೇಲೆ ಹೇರಿದರೆ ಹೇಗೆ -ನಮಗೆ ನಮ್ಮದೇ ನೋಟವಿಲ್ಲವೇ ?.ಅಪಾಯವಿದೆಯೆಂದು ಎಷ್ಟು ದಿನ ಮನೆಯಲ್ಲಿಯೇ ಕೂರಿಸುತ್ತಿರಿ.ಬಿಟ್ಟುಬಿಡಿ ನಾವೂ ಹಾರಲು ಕಲಿಯುತ್ತೇವೆ .ನಾವು ಹಾರಲೆಂದೇ ಹುಟ್ಟಿದವರು .ನಿಮ್ಮ ಕಾಳಜಿಗಾಗಿ ನಾವು ನಮ್ಮ ರೆಕ್ಕೆಯನ್ನ ಕೀಳಬೇಕೆ?.


ನಮಗೂ ಕನಸುಗಳು ಬಿಳುತ್ತವೆ -ಅಲ್ಲಿ ಬಣ್ಣ ಗಳಿವೆ , ರಾಗಗಳಿವೆ , ಚೆಲುವಿನ ಹೂಗಳಿವೆ , ಸುಗಂದ ದ್ರವ್ಯದ ನದಿಯೇ ಅಲ್ಲಿದೆ .ಇವೆಲ್ಲವನ್ನೂ ಬಿಟ್ಟು ನೀವು ಕಟ್ಟಿದ ಗೂಡಲ್ಲೇ ಬೆಚ್ಚಗೆ ಕೂರಬೇಕೆಂದರೆ ಅದು ತಪ್ಪಲ್ಲವೇ .ಹಾಗೇನೂ ನಾವು ಹಾದಿ ತಪ್ಪಿ ಹೋಗುವುದಿಲ್ಲ. ಯಾರೋ ಒಂದಿಬ್ಬರು ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಯಾಕೆ ತೋರಿಸುತ್ತಿರಿ :ನಿಮಗೆ ಗುಲಾಬಿಗಳು ಕಾಣುತ್ತಿಲ್ಲವೇ?.ನಮಗೂ ಗೊತ್ತು ನಿಮ್ಮದು ಪ್ರೀತಿ , ಕಾಳಜಿ ಬಿಟ್ಟರೆ ಬೇರೇನೂ ಅಲ್ಲವೆಂದು.ಹಾಗಂತ ನಮಗೆ ನಮ್ಮದೇ ಬದುಕು ಬೇಡವೇ ?.ಬೆಳಕಿನ ಪಕ್ಕದಲ್ಲೇ ಕತ್ತಲೆ ಇದೆಯೆಂದು ಯಾಕೆ ಹೆದರುತ್ತಿರಿ ?. ಗೊತ್ತಾಗುವಸ್ಟು ದಿನ ಮಾತ್ರ . ಮತ್ತೆ ಗೊತ್ತಾದಂದಿನಿಂದ ದೀಪವಿಲ್ಲದೆ ನಾವು ಹೆಜ್ಜೆ ಹಾಕುತ್ತೆವಾ ?.

ತಪ್ಪು ತಿಳಿಯಬೇಡಿ .ನಾವು ಹೇಳುವುದರಲ್ಲೂ ತಿರುಳಿದೆ ಅಲ್ಲವೇ ?.ಅಸ್ಟು ಕಾಳಜಿ ಇದ್ದರೆ ದೀಪ ಹೊತ್ತಿಸಿ ಕೊಡಿ ಸಾಕು .ಗಮ್ಯವನ್ನು ತಲಪುವ ಜವಬ್ದಾರಿ ನಮ್ಮ ಮೇಲಿರಲಿ .

ಕಾಮೆಂಟ್‌ಗಳಿಲ್ಲ:

ನನ್ನ ಬಗ್ಗೆ

ನನ್ನ ಫೋಟೋ
ಹೊಟ್ಟೆ ಮತ್ತು ಬಟ್ಟೆಗಾಗಿ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತಿದ್ದೇನೆ.ಕತೆ,ಕವಿತೆ,ಕಾದಂಬರಿಗಳೆಂದರೆ ನನ್ನ ಪ್ರೇಯಸಿಯರಿದ್ದಂತೆ.ಹಳೆ ಹಾಡುಗಳ ಹುಚ್ಚ (ಹಾಗಂತ ಹೊಸ ಹಾಡುಗಳ ಬಗ್ಗೆ ಕಂಪ್ಲೇಂಟ್ ಇಲ್ಲ).ಬೇಸರದ ಹಾಡುಗಳೆಂದರೆ ಮತ್ತೂ ಇಷ್ಟ .

ನನ್ನ ಬ್ಲಾಗ್ ಪಟ್ಟಿ