ನನಗೆ ಹೊಸ ದಿನದ ಹುಟ್ಟಿನಲ್ಲಿ
ಸಂಬ್ರ್ಹಮ ವಿಲ್ಲ .
ನಿನ್ನೆ ಯ ನಕಲಿನಂತಿರುವ ಇಂದು ,
ಇಂದಿನ ಪಡಿಯಚ್ಚಿನಂತಿರುವ ನಾಳೆಗಳ
ನಡುವೆ ನಾನು ಯಾಂತ್ರಿಕವಾಗಿ ಬದುಕುತಿದ್ದೇನೆ .
೨
ನನ್ನ ಬದುಕಿಗೊಂದು ಅರ್ಥವಿಲ್ಲ ;
ಅದು ಅಕ್ಷರ ಜ್ಞಾನವಿಲ್ಲದ
ಬ್ರಂಹ ಗೀಚಿದ ಹಣೆ ಬರಹ.
೩
ನೆಮ್ಮದಿಯ ಕೊಲೆಯಾಗಿದೆ ,
ನಾನೇ ಕೊಲೆಗಾರ .
ನನ್ನತನವನ್ನು ಕೊಲ್ಲುವ ಹಣದ
ಹಿಂದೆ ಬಿದ್ದು ನಾನೇ ನೆಮ್ಮದಿಯ ಕೊಂದೆ.
ಈಗ ಕೈ ತುಂಬ ಹಣ ಹಿಡಿದು
ನೆಮ್ಮದಿಯ ಹೆಣದ ಮುಂದೆ ಕೂತಿದ್ದೇನೆ .
(ಫೋಟೋ: www.artreview.co.uk/)
1 ಕಾಮೆಂಟ್:
hi
ಈ ಕವನ ನನಗೆ ತುಂಬ ಇಷ್ಟ ಆಯ್ತು
:-)
ಮಾಲತಿ ಎಸ್.
ಕಾಮೆಂಟ್ ಪೋಸ್ಟ್ ಮಾಡಿ