ನನಗೆ ವರದಕ್ಷಿಣೆ, ಚಿನ್ನ- ಬೆಳ್ಳಿ ಏನೇನೂ ಬೇಡ. ನಿನ್ನ ಚೆಲುವ ಮುಖದ ಮಂದಹಾಸ ನನಗಿದ್ದರೆ ಅಸ್ಟೆ ಸಾಕು.ನನ್ನ ಮದುವೆಯಾದರೆ ಖುಶಿಗಲ್ಲದೆ ಬೇರೆಯಾವುದೇ ಕಾರಣಕ್ಕೂ ನಿನ್ನ ಕಣ್ಣಿಂದ ನೀರಿಳಿಯಲು ನಾನು ಬಿಡುವುದಿಲ್ಲ.ಮತ್ತೆ ಮದುವೆಯಾದ ಮೇಲೆ ನೀನು ಮನೆಯ ನಾಲ್ಕು ಗೋಡೆಯೊಳಗೆ ಬಾಡುವ ಹೂವಾಗುವುದು ಬೇಡ. ಹೊರಗೆ ಹೋಗಿ ರವಿಯ ಇರವಿಗೆ ಮತ್ತಸ್ಟು ಅರಳಿ , ತಂಗಾಳಿಯ ಜೋಕಾಲಿಯಲ್ಲಿ ಹಗುರವಾಗಿ ಬಾ ; ನಿನ್ನದೆನ್ನುವ ಒಂದು ದುಡಿತಕ್ಕೆ ಹಚ್ಚಿಕೋ.
ಇವೆಲ್ಲ ಮದುವೆಯ ನಂತರದ ಮಾತಾಯಿತು.ಅದರ ಮೊದಲು ನನ್ನ ಬಗ್ಗೆ ಸ್ವಲ್ಪ ಹೇಳುತ್ತೇನೆ ಕೇಳು.ನೀನು ನನ್ನ ಇಷ್ಟ ಪಡುತಿರುವುದರಿಂದ , ನಾನು ಹೇಗಿದ್ದರೂ ನೀನು ನನ್ನ ಸ್ವೀಕರಿಸಬಹುದು . ಆದರೂ ನಾನು ಹೇಳುವುದನ್ನು ಕೇಳು :
ನಾನು ಸ್ವಬಾವತಾ ಸೌಮ್ಯ .ನನಗೆ ಸಿಟ್ಟು ಬರುವುದು ಬಹಳ ವಿರಳ. ಆದರೆ ಯಾಕೋ ಕೆಲವೊಮ್ಮೆ ಸಿಟ್ಟು ಬಂದಾಗ ತುಂಬಾ ಹೆಚ್ಚು ಅನ್ನುವಂತೆ react ಮಾಡುತ್ತೇನೆ .ಕೆಲವರು ನನ್ನ ಈ ಸ್ವಭಾವವನ್ನು ಮಾತ್ರ ನೋಡಿ ನಾನು ಬಹಳ ಸಿಟ್ಟಿನ ಮನುಷ್ಯ ಅಂತ ತಪ್ಪು ತಿಳಿದು ಕೊಂಡಿದ್ದಾರೆ.ಇರಲಿ.ನಾನು ಯಾವತ್ತು ಪ್ರೈವೇಟ್ ಸ್ಪೇಸ್ ಇಷ್ಟ ಪಡುವವ .ಆದರೆ ಇಷ್ಟ ಪಟ್ಟವರನ್ನು ಎಂದಿಗೂ ಕಳಕೊಳ್ಳಲು ಇಸ್ತಪಡದ ನಿಶ್ಕಷ್ಮಲಿ .ಯಾವುದೇ ಚಟ ನನಗೆ ಅಂಟಿಕೊಂಡಿಲ್ಲ ಅನ್ನುವುದನ್ನು ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ .ಕೆಲವೊಮ್ಮೆ ಇಷ್ಟವಾದ ತಿಂಡಿ ಇದ್ದಾರೆ ಸ್ವಲ್ಪ ಜಾಸ್ತಿ ತಿನ್ನುತ್ತೇನೆ.physical strain ತೆಗೆದುಕೊಳ್ಳುವುದರಲ್ಲಿ ನಾನು ಸ್ವಲ್ಪ ಹಿಂದೆ .ಹಾಗಾಗಿ ದೇಹ ಸ್ವಲ್ಪ ಬೊಜ್ಜಿನಿಂದ ತುಂಬಿದಂತೆ ಕಾಣುತ್ತದೆ.ಈ ಬಗ್ಗೆ ನಿನ್ನದೇನೂ ಕಂಪ್ಲೈಂಟ್ ಇಲ್ಲ ಅಂದುಕೊಳ್ಳುತ್ತೇನೆ. ಇದಿಷ್ಟು ನನ್ನ ಸ್ವಭಾವದ ಬಗೆಗೆ ಆಯಿತು .ಇನ್ನು ನನ್ನ ಹವ್ಯಾಸದ ಕಡೆಗೆ ಬಂದರೆ - ನನಗೆ ಓದೆಂದರೆ ತುಂಬಾ ಇಷ್ಟ .ಅದರಲ್ಲೂ ಕಾದಂಬರಿ , ಕತೆ , ಕವಿತೆಗಳನ್ನು ಓದುವುದೆಂದರೆ ನನಗೆ ಪಂಚಪ್ರಾಣ .ಸಮಯ ಸಿಕ್ಕಾಗಲೆಲ್ಲ ಓದುವ ನಾನು ಕೆಲವೊಮ್ಮೆ ಬರೆಯುತ್ತೇನೆ .ಯಾಕೋ ಹೀಗೆ ಬರೆದಾಗ ನಾನು ತುಂಬಾ ಹಗುರವಾಗುತ್ತೇನೆ .ಅವಕಾಶ ಸಿಕ್ಕಾಗ ನಾನು ಬರೆದ ಪುಟಗಳನ್ನು ನಿನ್ನ ಮುಂದಿಡುತ್ತೇನೆ , ಓದಿಕೊಳ್ಳುವಿಯಂತೆ.ಅದೇ ರೀತಿ ನನಗೆ ಹಾಡುಗಳ ಕಡೆಗೂ ನನಗೆ ಒಲವಿದೆ .ಹೊಸ -ಹಳೆಯ , ಭಾಷೆಯ ಗಡಿಯ ಅಡೆ- ತಡೆ ಇಲ್ಲದೆ ಖುಷಿ ನೀಡುವ ಎಲ್ಲಾ ಹಾಡುಗಳನ್ನು ಕೇಳುತ್ತೇನೆ .ಇತ್ತೀಚಿಗೆ ಯಕ್ಷಗಾನದ ಕಡೆಗೂ ಒಲವೂ ಮೂಡಿದೆ.ಅವಕಾಶ ಸಿಕ್ಕಾಗ ಯಕ್ಷಗಾನವನ್ನು ನೋಡಿ ಮನಸನ್ನು ಹಗುರ ಮಾಡಿಕೊಳ್ಳುತ್ತೇನೆ.ಒಟ್ಟಿನಲ್ಲಿ ತುಂಬಾ ಸಂತೋಷವಾಗಿ ಇದ್ದೇನೆ. ನಿನ್ನ ಜೊತೆ ಮತ್ತಸ್ಟು ಖುಷಿ ನೀಡೀತೂ ಅನ್ನುವ ಆಸೆ ನನ್ನಲ್ಲಿದೆ.ನನ್ನವಳಾಗುವೆಯ ಗೆಳತಿ...?
( ರವಿ ಬೆಳಗರೆಯವರ 'ಲವ್ಲವಿಕೆ ಓದಿದ ನಂತರ ಬರೆಯಬೇಕೆಂದುಕೊಂಡು ಬರೆದದ್ದು.ಇದು ಕೂಡ ಕಲ್ಪನೆಯ ಪ್ರೇಮದ ಖಾತೆಗೆ ಕ್ರೆಡಿಟ್...!!! )

2 ಕಾಮೆಂಟ್‌ಗಳು:
oh!! ಸ್ವಲ್ಪ ಕೀಟಲೆ ಮಾಡುವ ಅಂದ್ರೆ..ಇದೂ ಕಲ್ಪನೆ.
but if it is real u should make her read this post!!
:-)
malathi S
kalpane ???? haagantha kalpane maadona bidi.... adere nijakkoo channaagi bareeteera.... sumne tym waste madbedi ...write more and more.... keep the flow pls...
ಕಾಮೆಂಟ್ ಪೋಸ್ಟ್ ಮಾಡಿ